Sunday, September 22, 2024
spot_img
More

    Latest Posts

    ಜ. 17ರಂದು ಗಾಣಿಗ ಸಮಾಜ ಅಭಿವೃದ್ಧಿ ಸಮಿತಿ ವಾರ್ಷಿಕ ಮಹಾಸಭೆ

    ಬೆಂಗಳೂರು: ಶಿರಸಿಯ ಗಾಣಿಗ ಸಮಾಜ ಅಭಿವೃದ್ಧಿ ಸಮಿತಿಯ 2019-20ನೇ ಸಾಲಿನ ವಾರ್ಷಿಕ ಮಹಾಸಭೆಯು ಶಿರಸಿಯ ಗಾಣಿಗ ಸಮುದಾಯ ಭವನದಲ್ಲಿ ಜ. 17ರ ಭಾನುವಾರ ಸಂಜೆ 4 ಗಂಟೆಗೆ ನಡೆಯಲಿದೆ.

    2019-20ನೇ ಸಾಲಿನ ಲೆಕ್ಕಪತ್ರಗಳ ಜೊತೆಗೆ ಸಮುದಾಯ ಭವನ ಹಾಗೂ ಇತ್ತೀಚೆಗಷ್ಟೇ ಗಾಣಿಗ ಸಮಾಜಕ್ಕೆ ವಹಿಸಲಾಗಿರುವ ಶ್ರೀಲಕ್ಷ್ಮೀನಾರಾಯಣ ದೇವಸ್ಥಾನ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ಆಗಲಿದೆ. ದೇವಸ್ಥಾನದ ವಾರ್ಷಿಕ ವರ್ಧಂತಿ, ಸಾಮೂಹಿಕ ಸತ್ಯನಾರಾಯಣ ಪೂಜೆ ಇತ್ಯಾದಿಗಳ ಕುರಿತ ಚರ್ಚೆ ಕೂಡ ನಡೆಯಲಿದೆ. ಸಭೆಗೆ ಆಗಮಿಸುವ ಎಲ್ಲರೂ ಮಾಸ್ಕ್ ಧರಿಸುವುದು, ದೈಹಿಕ ಅಂತರ ಪಾಲನೆ ಸೇರಿ ಕೋವಿಡ್-19 ಮಾರ್ಗಸೂಚಿಗಳೆಲ್ಲವನ್ನೂ ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ಸಮಿತಿ ಅಧ್ಯಕ್ಷ ಚಂದ್ರಶೇಖರ ಜಿ. ಶೆಟ್ಟಿ ತಿಳಿಸಿದ್ದಾರೆ.

    ಸಭೆ ಬಳಿಕ ಸನ್ಮಾನ: ವಾರ್ಷಿಕ ಮಹಾಸಭೆ ಮುಗಿದ ನಂತರ ಸಮಾಜದ ಗಣ್ಯರನ್ನು ಸನ್ಮಾನಿಸುವ ವಿಶೇಷ ಕಾರ್ಯಕ್ರಮವೂ ಇರಲಿದೆ. ಶಿರಸಿ ನಗರ ಸಭೆಯ ಆಡಳಿತ ಮಂಡಳಿಗೆ 2018ರಲ್ಲಿ ಆಯ್ಕೆಯಾಗಿ ವಿವಿಧ ಹುದ್ದೆ ವಹಿಸಿಕೊಂಡಿರುವ ಸಮಾಜದ ಗಣ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಗುವುದು ಎಂದು ಸಮಿತಿ ತಿಳಿಸಿದೆ.

    ಸನ್ಮಾನಿಸಲ್ಪಡುವವರ ವಿವರ

    ವೀಣಾ ವಿನಾಯಕ ಶೆಟ್ಟಿ- ಉಪಾಧ್ಯಕ್ಷೆ, ಶಿರಸಿ ನಗರ ಸಭೆ
    ರಾಘವೇಂದ್ರ ರಾಮಚಂದ್ರ ಶೆಟ್ಟಿ- ಸ್ಥಾಯಿ ಸಮಿತಿ ಅಧ್ಯಕ್ಷ
    ಮುಕ್ತಾ ವಸಂತ ಶೆಟ್ಟಿ
    ವನಿತಾ ಗಣೇಶ ಶೆಟ್ಟಿ
    ರಾಘವೇಂದ್ರ ವಿಘ್ನೇಶ್ವರ ಶೆಟ್ಟಿ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!