Sunday, September 22, 2024
spot_img
More

    Latest Posts

    ಕುಲದೇವರ ಸನ್ನಿಧಿಯಲ್ಲಿ ಇದೀಗ ಇನ್ನೂ ಕಡಿಮೆ ಖರ್ಚಿನಲ್ಲಿ ‘ತ್ರೀ ಇನ್ ಒನ್’ ಶಾಶ್ವತ ಪೂಜೆ

    ಬೆಂಗಳೂರು: ಸೋಮಕ್ಷತ್ರಿಯ ಗಾಣಿಗ ಸಮಾಜದ ಕುಲದೇವರಾಗಿರುವ ಬಾರ್ಕೂರು ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಮಾಜ ಬಾಂಧವರು ಶಾಶ್ವತ ಪೂಜೆ ಮಾಡಿಸುತ್ತಿರುವುದು ಬಹುತೇಕ ಎಲ್ಲರಿಗೂ ಗೊತ್ತಿರುವಂಥದ್ದೇ. ಕೊರೊನಾ ಹಾವಳಿ ಬಳಿಕ ಜಗತ್ತೇ ಆರ್ಥಿಕ ಸಂಕಷ್ಟಕ್ಕೆ ನಲುಗಿರುವುದು, ಮತ್ತೊಂದೆಡೆ ಕೊರೊನಾ ಹಾವಳಿಯಿಂದ ಪರಿಸ್ಥಿತಿ ಸುಧಾರಿಸಿ ಚೇತರಿಕೆ ಕಂಡಿದ್ದರೂ ಅಗತ್ಯ ವಸ್ತುಗಳ ಬೆಲೆ ದುಬಾರಿ ಆಗಿರುವುದು ಮುಂತಾದವುಗಳಿಂದ ಜನಜೀವನ ಕಷ್ಟವಾಗಿರುವ ಸಂದರ್ಭದಲ್ಲಿ ಸಮಾಜದ ಎಲ್ಲ ವರ್ಗದವರಿಗೂ ತಮ್ಮ ಇಷ್ಟದೇವತೆ, ಕುಲದೇವರ ಶಾಶ್ವತ ಪೂಜೆ ಸುಲಭವಾಗಿಸುವ ನಿಟ್ಟಿನಲ್ಲಿ ಶಾಶ್ವತ ಪೂಜೆಯ ಶುಲ್ಕವನ್ನು ದೇವಸ್ಥಾನದ ಆಡಳಿತ ಮಂಡಳಿ ಇಳಿಸಿದೆ.

    ಏನಿದು ಶಾಶ್ವತ ಪೂಜೆ?: ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಶಾಶ್ವತ ಪೂಜೆ ಎಂದರೆ, ಭಕ್ತರು ತಮ್ಮ ಹೆಸರಿನಲ್ಲಿ ವರ್ಷಕ್ಕೊಮ್ಮೆಯಂತೆ ಪ್ರತಿವರ್ಷವೂ ಮಾಡಿಸುವ ವಿಶೇಷ ಪೂಜೆ. ಅಂದರೆ ವರ್ಷಕ್ಕೊಂದು ದಿನ ಭಕ್ತರು ಸೂಚಿಸಿದ ದಿನಾಂಕದಂದು ಅವರು ಸೂಚಿಸಿರುವ ಹೆಸರಿನಲ್ಲಿ ಕುಲದೇವರಾದ ಶ್ರೀ ವೇಣುಗೋಪಾಲಕೃಷ್ಣ, ಪರಿವಾರ ದೇವರಾದ ಶ್ರೀ ಗಣಪತಿ ಹಾಗೂ ಶ್ರೀ ಅನ್ನಪೂರ್ಣೇಶ್ವರಿಗೆ ಪೂಜೆ ಮಾಡಲಾಗುತ್ತದೆ.

    ವಿಶೇಷ ಸಂದರ್ಭಕ್ಕೆ ಸೂಕ್ತ: ಭಕ್ತರು ತಮ್ಮ ಜನ್ಮದಿನ, ವಿವಾಹ ವಾರ್ಷಿಕೋತ್ಸವ ಇತ್ಯಾದಿ ವಿಶೇಷ ದಿನಗಳಲ್ಲಿ ಕುಲದೇವರ ದೇವಸ್ಥಾನದಲ್ಲಿ ಒಂದು ಸೇವೆ ಕೊಡಿಸಲು ಈ ಶಾಶ್ವತ ಪೂಜೆ ಹೆಚ್ಚು ಸೂಕ್ತ. ಉದಾಹರಣೆಗೆ, ಸಮಾಜ ಬಾಂಧವರೊಬ್ಬರು ಅವರ ಜನ್ಮದಿನಾಂಕಕ್ಕೆ ಶಾಶ್ವತ ಪೂಜೆ ಬರೆಸಿದರೆ, ಅವರು ತಮ್ಮ ಜನ್ಮದಿನದಂದು ಎಲ್ಲೇ ಇದ್ದರೂ ಕುಲದೇವರ ಸನ್ನಿಧಿಯಲ್ಲಿ ಅವರ ಹೆಸರಿನಲ್ಲಿ ಮೂರು ದೇವರಿಗೆ ಪೂಜೆ ನಡೆಯುತ್ತದೆ. ಪ್ರಸಾದವನ್ನು ಬಳಿಕ ಪೋಸ್ಟ್ ಮೂಲಕ ಕಳುಹಿಸಲಾಗುತ್ತದೆ. ಹೀಗೆ ಒಮ್ಮೆ ಶಾಶ್ವತ ಪೂಜೆ ಬರೆಸಿ ಸೂಕ್ತ ಶುಲ್ಕ ಪಾವತಿಸಿದರೆ ವರ್ಷಕ್ಕೆ ಒಂದು ದಿನದಂತೆ ಪ್ರತಿವರ್ಷ ಅವರ ಹೆಸರಿನಲ್ಲಿ ಪೂಜೆ ನಡೆಯುತ್ತದೆ. ಅಂದಹಾಗೆ ಈ ಪೂಜೆಗೆ ಈ ಮೊದಲು 3 ಸಾವಿರ ರೂಪಾಯಿ ಇತ್ತು. ಆದರೆ ಈಗ ಆ ಮೊತ್ತವನ್ನು ಇಳಿಸಲಾಗಿದ್ದು, ಶಾಶ್ವತ ಪೂಜೆ ಮಾಡಿಸುವವರು ಬರೀ 2,003 ರೂಪಾಯಿ ಪಾವತಿಸಿದರೆ ಸಾಕು.

    ನಿತ್ಯ ಅನ್ನಸಂತರ್ಪಣೆ: ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ನಿತ್ಯವೂ ಅನ್ನ ಸಂತರ್ಪಣೆ ನಡೆಯುತ್ತಿದೆ. ಆಯಾ ದಿನ ಹಾಜರಿರುವ ಭಕ್ತರ ಜೊತೆಗೆ ಹತ್ತಿರದ ಕಾಲೇಜಿನ 50 ವಿದ್ಯಾರ್ಥಿಗಳು ಪ್ರತಿದಿನ ಅನ್ನಪ್ರಸಾದ ಸ್ವೀಕರಿಸುತ್ತಾರೆ. ಶಾಶ್ವತ ಪೂಜೆ ಬರೆಸುವವರು ಪೂಜೆಗೆ ಸೂಚಿಸಿದ ದಿನದಂದು ದೇವಸ್ಥಾನಕ್ಕೆ ಆಗಮಿಸುವುದಿದ್ದರೆ ಹಾಗೂ ಪೂಜೆಗೆ ಬರುವವರ ಸಂಖ್ಯೆ ಐದಕ್ಕಿಂತ ಹೆಚ್ಚಿದ್ದು, ಅನ್ನಪ್ರಸಾದಕ್ಕೆ ಉಳಿಯುವುದಿದ್ದರೆ ಹಿಂದಿನ ದಿನವೇ ತಿಳಿಸಿದರೆ ಉತ್ತಮ ಎನ್ನುತ್ತಾರೆ ದೇವಸ್ಥಾನದ ಆಡಳಿತ ವರ್ಗದವರು.

    ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಬಹುದು

    • ಗೋಪಾಲ, ದೇವಸ್ಥಾನದ ವ್ಯವಸ್ಥಾಪಕ: 9964987384
    • ವಾಸುದೇವ ಬೈಕಾಡಿ, ಅಧ್ಯಕ್ಷ, ಸೋಮಕ್ಷತ್ರಿಯ ಗಾಣಿಗ ಸಮಾಜ ಬಾರ್ಕೂರು: 9448888362
    • ಸೂರ್ಯನಾರಾಯಣ ಗಾಣಿಗ ಮಟಪಾಡಿ, ಉಪಾಧ್ಯಕ್ಷ: 9448164332
    • ಉದಯ್ ಕುಮಾರ್ ಉಡುಪಿ, ಉಪಾಧ್ಯಕ್ಷ: 9880833451
    • ರಾಜೇಶ್ ಅಚ್ಲಾಡಿ, ಪ್ರಧಾನ ಕಾರ್ಯದರ್ಶಿ: 9663953730
    • ರಘುರಾಮ ಬೈಕಾಡಿ, ಕೋಶಾಧಿಕಾರಿ: 9740940689

    ಶಾಶ್ವತ ಪೂಜೆಗೆ ಹಣ ಕಳುಹಿಸಬೇಕಾದ ಖಾತೆ ವಿವರ

    ಖಾತೆದಾರರ ಹೆಸರು: ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನ ಮೂಡುಕೇರಿ, ಬಾರ್ಕೂರು.
    ಬ್ಯಾಂಕ್: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
    ಶಾಖೆ: ಹೇರಾಡಿ
    ಖಾತೆ ಸಂಖ್ಯೆ: 520101060316371
    ಐಎಫ್ಎಸ್ಸಿ ಕೋಡ್: UBINO902403

    ಸಂಬಂಧಿತ ಸುದ್ದಿ: ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಪುನರಾರಂಭ 

    ಸಂಬಂಧಿತ ಸುದ್ದಿ: ಶ್ರೀವೇಣುಗೋಪಾಲಕೃಷ್ಣ ಎಜುಕೇಷನಲ್ ಸೊಸೈಟಿಯಿಂದ ಪ್ರತಿಭಾ ಪುರಸ್ಕಾರ 

    ಸಂಬಂಧಿತ ಸುದ್ದಿ: ಗಾಣಿಗ ‘ಸಂಘಂ’ ಶರಣಂ ಗಚ್ಛಾಮಿ… 

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!