Sunday, September 22, 2024
spot_img
More

    Latest Posts

    ದಶಮಾನೋತ್ಸವದ ಸಂಭ್ರಮದಲ್ಲಿ ಕೋಟೇಶ್ವರ ಗಾಣಿಗ ಯುವ ಸಂಘಟನೆ

    ಬೆಂಗಳೂರು: ಕೋಟೇಶ್ವರ ಗಾಣಿಗ ಯುವ ಸಂಘಟನೆಯು ದಶಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಆ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನೂ ಆಯೋಜಿಸಿದೆ. ಕುಂದಾಪುರದ ಶ್ರೀವ್ಯಾಸರಾಜ ಕಲಾಮಂದಿರ ಹಾಗೂ ಕೋಟೇಶ್ವರ ಪಬ್ಲಿಕ್‌ ಸ್ಕೂಲ್‌ ಮೈದಾನದಲ್ಲಿ ಪ್ರತ್ಯೇಕವಾಗಿ ನಡೆಯಲಿರುವ ಈ ಸ್ಪರ್ಧೆಗಳಲ್ಲಿ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಗಾಣಿಗ ಸಮಾಜಬಾಂಧವರು ಭಾಗವಹಿಸಬಹುದಾಗಿದೆ.

    ಕುಂದಾಪುರ ವ್ಯಾಸರಾಜ ಕಲಾಮಂದಿರ: ಕೋಟೇಶ್ವರ ಗಾಣಿಗ ಯುವ ಸಂಘಟನೆಯ ದಶಮಾನೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸ್ಪರ್ಧೆಗಳು ಮಾ. ೨೮ರಂದು ಬೆಳಗ್ಗೆ ೯ರಿಂದ ಕುಂದಾಪುರದ ಶ್ರೀವ್ಯಾಸರಾಜ ಕಲಾಮಂದಿರದಲ್ಲಿ ನಡೆಯಲಿವೆ. ಇದರಲ್ಲೂ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆ ಎಂದು ಎರಡು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ವೈಯಕ್ತಿಕ ವಿಭಾಗದಲ್ಲಿ ಮುದ್ದುರಾಧೆ-ಮುದ್ದುಕೃಷ್ಣ, ಛದ್ಮವೇಷ, ಭಾಷಣ, ರಂಗೋಲಿ, ನೃತ್ಯ, ಗಾಯನ, ಚಿತ್ರಕಲೆ ಸ್ಪರ್ಧೆಗಳು ಇರಲಿವೆ. ಇನ್ನು ಗುಂಪು ವಿಭಾಗದಲ್ಲಿ ರಸಪ್ರಶ್ನೆ, ಭಜನೆ ಕುಣಿತ ಹಾಗೂ ಸಾಂಪ್ರದಾಯಿಕ ನೃತ್ಯ ಸ್ಪರ್ಧೆಗಳು ಇರಲಿವೆ.

    ಕೋಟೇಶ್ವರ ಪಬ್ಲಿಕ್‌ ಸ್ಕೂಲ್‌ ಮೈದಾನ: ದಶಮಾನೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ಎಲ್ಲ ಕ್ರೀಡಾ ಸ್ಪರ್ಧೆಗಳು ಕೋಟೇಶ್ವರ ಪಬ್ಲಿಕ್‌ ಸ್ಕೂಲ್‌ ಮೈದಾನದಲ್ಲಿ ಏಪ್ರಿಲ್‌ ೪ರಂದು ನಡೆಯಲಿವೆ. ಇದರಲ್ಲಿ ಮಡಕೆ ಒಡೆಯುವುದು, ಹಗ್ಗಜಗ್ಗಾಟ, ವಾಲಿಬಾಲ್‌, ಬಕೆಟ್‌ ಬಾಲ್‌, ಕ್ರಿಕೆಟ್‌, ಥ್ರೋಬಾಲ್‌, ಗುಂಡೆಸೆತ, ಚೆಂಡೆಸೆತ, ಓಟ, ಕಪ್ಪೆ ಜಿಗಿತ ಸ್ಪರ್ಧೆಗಳು ಇರಲಿವೆ ಎಂಬುದಾಗಿ ಕೋಟೇಶ್ವರ ಗಾಣಿಗ ಯುವ ಸಂಘಟನೆ ಅಧ್ಯಕ್ಷ ಬಿ.ಎ. ಅಭಿಲಾಷ್‌ ಹಾಗೂ ಕಾರ್ಯದರ್ಶಿ ಉದಯ ಗಾಣಿಗ ತಿಳಿಸಿದ್ದಾರೆ.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ ಈ ಕೆಳಗಿನ 'ಐಡಿ'ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ.
    G-Mail ID: [email protected]

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!