Saturday, September 21, 2024
spot_img
More

    Latest Posts

    ಕೊಯಂಬತ್ತೂರಿನಲ್ಲಿ ಸ್ವತಂತ್ರ ಭಾರತದ ಪ್ರಪ್ರಥಮ ವಿತ್ತಸಚಿವರ 68ನೇ ಪುಣ್ಯಸ್ಮರಣೆ


    ಬೆಂಗಳೂರು: ಸ್ವತಂತ್ರ ಭಾರತದ ಪ್ರಪ್ರಥಮ ವಿತ್ತ ಸಚಿವ ಡಾ.ಆರ್.ಕೆ. ಷಣ್ಮುಗಂ ಚೆಟ್ಟಿಯಾರ್‌ ಅವರ 68ನೇ ಪುಣ್ಯಸ್ಮರಣೆ ಇಂದು ನಡೆಯಿತು. ತಮಿಳುನಾಡಿನ ಕೊಯಂಬತ್ತೂರಿನಲ್ಲಿರುವ ಕೊಯಂಬತ್ತೂರು ವಣಿಯರ್‌ ಸಂಘದ ವತಿಯಿಂದ ಮೇ 5ರ ಬುಧವಾರ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

    ಕೊಯಂಬತ್ತೂರಿನಲ್ಲಿ ಚೆಟ್ಟಿಯಾರ್‌ (ಗಾಣಿಗ) ಸಮುದಾಯಕ್ಕೆ ಸೇರಿದ ಆರ್‌.ಕೆ.ಶ್ರೀರಂಗಮ್ಮ ಹೈಸ್ಕೂಲ್‌ ಆವರಣದಲ್ಲಿರುವ ಡಾ.ಆರ್.ಕೆ. ಷಣ್ಮುಗಂ ಚೆಟ್ಟಿಯಾರ್‌ ಅವರ ಪ್ರತಿಮೆಗೆ ಪುಷ್ಪಾರ್ಪಣೆ ಮಾಡುವ ಮೂಲಕ ಅವರ ಪುಣ್ಯಸ್ಮರಣೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಕೊಯಂಬತ್ತೂರು ವಣಿಯರ್‌ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಆರ್.ಕೆ. ಷಣ್ಮುಗಂ ಚೆಟ್ಟಿಯಾರ್‌ ಅವರ ಪ್ರತಿಮೆಗೆ ಕೊಯಂಬತ್ತೂರು ವಣಿಯರ್‌ ಸಂಘದಿಂದ ಪುಷ್ಪಾರ್ಪಣೆ.

    ಷಣ್ಮುಗಂ ಚೆಟ್ಟಿಯಾರ್‌ ಕಿರು ಪರಿಚಯ: 1892ರಲ್ಲಿ ತಮಿಳು ವಣಿಯ ಚೆಟ್ಟಿ (ಚೆಟ್ಟಿಯಾರ್‌) ಕುಟುಂಬದಲ್ಲಿ ಜನಿಸಿದ ಆರ್.ಕೆ. ಷಣ್ಮುಗಂ ಚೆಟ್ಟಿಯಾರ್ ಅವರು ವೃತ್ತಿಯಿಂದ ವಕೀಲರಾಗಿದ್ದರು. ಆರ್ಥಿಕ ತಜ್ಞರೂ ಆಗಿದ್ದ ಇವರು 1917ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದರು. ನಂತರ ಸ್ವತಂತ್ರ ಭಾರತದ ಪ್ರಪ್ರಥಮ ವಿತ್ತಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಮಾತ್ರವಲ್ಲ, 1947-48ರ ಆರ್ಥಿಕ ವರ್ಷದ ಆಯವ್ಯಯವನ್ನು ಮಂಡಿಸುವ ಮೂಲಕ ಪ್ರಪ್ರಥಮ ಬಜೆಟ್‌ ಮಂಡಿಸಿದ ಹೆಗ್ಗಳಿಕೆಗೂ ಇವರು ಪಾತ್ರರಾದರು. ಜನಪ್ರತಿನಿಧಿಯಾಗಿ, ವಿತ್ತಸಚಿವರಾಗಿ ಹಲವಾರು ಸ್ಮರಣೀಯ ಕಾರ್ಯಕಗಳನ್ನು ಮಾಡಿದ್ದ ಇವರು 1953ರ ಮೇ 5ರಂದು ನಿಧನರಾದರು.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ ಈ ಕೆಳಗಿನ 'ಐಡಿ'ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ.
    G-Mail ID: [email protected]


    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!