ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ತನ್ನ ಹೆಸರು ಮಾತ್ರವಲ್ಲದೆ ಶುಚಿ-ರುಚಿ ಹಾಗೂ ಸೇವೆಯಿಂದಲೂ ಮನೆಮಾತಾಗಿರುವ ‘ಹಳ್ಳಿಮನೆ’ಗೆ ಇದೀಗ ಇಪ್ಪತ್ತರ ಸಂಭ್ರಮ. ಅಂದರೆ ಬೆಂಗಳೂರಿನ ಮಲ್ಲೇಶ್ವರದ ಹಳ್ಳಿಮನೆ ಹೋಟೆಲ್ ಆರಂಭವಾಗಿ ಈಗ 20 ವರ್ಷಗಳು ಪೂರ್ತಿಗೊಂಡಿವೆ.
ಸಂಸ್ಥೆಯ ಇಪ್ಪತ್ತು ವರ್ಷಗಳ ಹರ್ಷವನ್ನು ಗ್ರಾಹಕರೊಂದಿಗೆ ಹಂಚಿಕೊಳ್ಳಬೇಕು ಎಂಬ ಉದ್ದೇಶದಿಂದ ಹಳ್ಳಿಮನೆ ಇದೀಗ ತನ್ನ ಎಲ್ಲ ಗ್ರಾಹಕರಿಗೆ ಶೇ. 20 ರಿಯಾಯಿತಿ ನೀಡುತ್ತಿದೆ. ‘ಮಲ್ಲೇಶ್ವರದಲ್ಲಿ 20 ವರ್ಷಗಳ ಸೇವೆಯನ್ನು ಯಶಸ್ವಿಯಾಗಿ ಪೂರೈಸುವಲ್ಲಿ ನಮ್ಮ ಪ್ರಯಾಣದ ಭಾಗವಾಗಿರುವ ಎಲ್ಲರಿಗೂ ಧನ್ಯವಾದಗಳು’ ಎಂಬುದಾಗಿ ನೀಲಾವರ ಎಂ. ಸಂಜೀವ ರಾವ್ ಅವರ ಮಾಲೀಕತ್ವದ ಹಳ್ಳಿಮನೆ ತನ್ನೆಲ್ಲ ಗ್ರಾಹಕರಿಗೆ ತಿಳಿಸಿದೆ.
ಎರಡು ದಶಕಗಳ ಖುಷಿಯನ್ನು ಗ್ರಾಹಕರೊಂದಿಗೆ ಹಂಚಿಕೊಳ್ಳುವ ಸಲುವಾಗಿ ಹಳ್ಳಿಮನೆ ಹತ್ತು ದಿನಗಳ ಕಾಲ ಈ ರಿಯಾಯಿತಿಯನ್ನು ನೀಡಲಿದೆ. ಅಂದರೆ ಜೂ. 4ರಿಂದ 14ರ ವರೆಗೆ ತನ್ನೆಲ್ಲ ಗ್ರಾಹಕರಿಗೆ ಸಂಸ್ಥೆಯ ಆಯ್ದ ಉತ್ಪನ್ನಗಳ ಮೇಲೆ ಶೇ. 20 ರಿಯಾಯಿತಿ ನೀಡಲಿದೆ. ಅಂದಹಾಗೆ ಈ ರಿಯಾಯಿತಿ ಹಳ್ಳಿಮನೆಯ ಎಲ್ಲ ಬೇಕರಿ ಉತ್ಪನ್ನಗಳು ಮತ್ತು ಬ್ಯಾಟರ್ ಆ್ಯಂಡ್ ಈಸಿ ಟಿಫನ್ಸ್ ಸಾಮಗ್ರಿಗಳಿಗಷ್ಟೇ ಅನ್ವಯಿಸಲಿದೆ. ಈ ರಿಯಾಯಿತಿ ಪಡೆಯಲು ಗ್ರಾಹಕರು ಕನಿಷ್ಠ 500 ರೂ. ಮೊತ್ತದ ಉತ್ಪನ್ನ ಖರೀದಿಸಬೇಕು. ಗ್ರಾಹಕರು ಈ ರಿಯಾಯಿತಿ ಸೌಲಭ್ಯವನ್ನು ಹಳ್ಳಿಮನೆಯ ಅಧಿಕೃತ ಬುಕಿಂಗ್ ವೆಬ್ಸೈಟ್ಗೆ ಲಾಗಿನ್ ಆಗುವ ಮೂಲಕ ಪಡೆಯಬಹುದು.
ಆರ್ಡರ್ ಮಾಡಲು ಈ ಲಿಂಕ್ ಕ್ಲಿಕ್ಕಿಸಿ: http://order.hallimane.com
ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ ಈ ಕೆಳಗಿನ 'ಐಡಿ'ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. G-Mail ID: [email protected]