Sunday, September 22, 2024
spot_img
More

    Latest Posts

    ಉದಯ ಗಾಣಿಗ ಕೊಲೆ ಪ್ರಕರಣ: ಮುಂದಿನ ನಡೆಗಾಗಿ ನಾಳೆ ಗಾಣಿಗ ಸಂಘದ ಸಭೆ

    ಬೆಂಗಳೂರು: ಉದಯ ಗಾಣಿಗ ಕೊಲೆ ಪ್ರಕರಣದ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಿಸುವ ಮೂಲಕ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೋರಾಟಕ್ಕಿಳಿದಿರುವ ಗಾಣಿಗ ಸಮಾಜ ಇದೀಗ ಮುಂದಿನ ನಡೆಯ ಕುರಿತು ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಈ ಸಲುವಾಗಿ ಕುಂದಾಪುರ ತಾಲೂಕು ಗಾಣಿಗ ಸಂಘವು ಸಮಾಜದ ಹಿರಿಯರು ಹಾಗೂ ಮುಖಂಡರ ಸಮ್ಮುಖದಲ್ಲಿ ನಾಳೆ ಸಭೆ ಸೇರಲಿದ್ದು, ಮುಂದಿನ ನಡೆ ಕುರಿತು ಚರ್ಚೆ ನಡೆಸಲಿದೆ.

    ಜೂನ್​ 12ರ ಶನಿವಾರ ಬೆಳಗ್ಗೆ 10.30ಕ್ಕೆ ಕುಂದಾಪುರ ವಡೇರಹೋಬಳಿಯಲ್ಲಿರುವ ಶ್ರೀ ವ್ಯಾಸರಾಜ ಮಠದಲ್ಲಿ ಕುಂದಾಪುರ ತಾಲೂಕು ಗಾಣಿಗ ಸಂಘದ ಪದಾಧಿಕಾರಿಗಳು ಸಭೆ ಸೇರಲಿದ್ದು, ನ್ಯಾಯಕ್ಕಾಗಿ ಮುಂದಿನ ಕ್ರಮಗಳನ್ನು ಕೈಗೊಳ್ಳುವ ಕುರಿತು ಮಾತುಕತೆ ನಡೆಸಿ ನಿರ್ಣಯಿಸಲಿದ್ದಾರೆ. ಈ ಸಂದರ್ಭದಲ್ಲಿ ಸಮಾಜ ಬಾಂಧವರು ಆಗಮಿಸಿ ತಮ್ಮ ಸಲಹೆಗಳನ್ನು ನೀಡುವಂತೆಯೂ ಸಂಘ ಮನವಿ ಮಾಡಿಕೊಂಡಿದೆ.

    ‘ಪ್ರೀತಿಯ ಗಾಣಿಗ ಬಂಧುಗಳೇ.. ಸಾಮಾಜಿಕ ಕಾರ್ಯಕರ್ತ, ನಮ್ಮ ಸಮಾಜದ ಸದಸ್ಯ, ಯಡಮೊಗೆ ಉದಯ ಗಾಣಿಗ ಅವರ ಕೊಲೆ ಪ್ರಕರಣವನ್ನು ಮಾಧ್ಯಮಗಳ ಮೂಲಕ ಖಂಡಿಸಿ ನಡೆಸಿದ ಪ್ರತಿಭಟನೆ ಇತ್ಯಾದಿಗಳಲ್ಲಿ ಸಮಾಜಬಾಂಧವರು ದನಿಗೂಡಿಸಿ ಒಕ್ಕೊರಲ ಧ್ವನಿ ಹೊರಡಿಸಿದ್ದರಿಂದ ಮತ್ತು ಉದಯ ಗಾಣಿಗರ ಕುಟುಂಬಕ್ಕೆ ಸಾಂತ್ವನ-ಸಹಾಯ ನೀಡುವಲ್ಲಿ ಗಾಣಿಗ ಬಂಧುಗಳೆಲ್ಲರೂ ಒಗ್ಗೂಡಿ ಗಾಣಿಗ ಸಮಾಜದ ಶಕ್ತಿ ಪ್ರದರ್ಶಿಸಿದ್ದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಡ ಸೃಷ್ಟಿಯಾಗಿತ್ತು. ಇದರಿಂದಾಗಿ ಹಾಗೂ ಗೃಹ ಇಲಾಖೆಯ ದಕ್ಷ ಅಧಿಕಾರಿಗಳ ಪ್ರಾಮಾಣಿಕ ನಡೆಯಿಂದಾಗಿ ಆರೋಪಿಗಳ ಬಂಧನ ಆಗುವಂತಾಯಿತು. ಮುಂದೆ ಆರೋಪ ಸಾಬೀತಾಗಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲೂ ನಡೆಸುವ ಪ್ರಯತ್ನಕ್ಕೆ ಸಮಾಜ ಬಾಂಧವರು ಕೈಜೋಡಿಸಬೇಕು’ ಎಂದು ಕುಂದಾಪುರ ತಾಲೂಕು ಗಾಣಿಗ ಸಂಘ ಕೋರಿಕೊಂಡಿದೆ.

    ಕೊಲೆಗೀಡಾದ ಉದಯ ಗಾಣಿಗ, ಪ್ರಮುಖ ಆರೋಪಿ ಪ್ರಾಣೇಶ್ ಯಡಿಯಾಳ

    ಉದಯ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ, ಬೈಂದೂರು, ಕೋಟ, ಬಾರ್ಕೂರು, ಉಡುಪಿಯ ಗಾಣಿಗ ಸಮಾಜದ ಬಂಧುಗಳು ಉದಯ ಗಾಣಿಗರ ಮನೆಗೆ ಭೇಟಿ ಕೊಟ್ಟು, ಮನೆಯವರಿಗೆ ಸಾಂತ್ವನ-ಸಹಕಾರ ನೀಡಿದ್ದನ್ನು ಸ್ಮರಿಸಿಕೊಂಡಿರುವ ಕುಂದಾಪುರ ತಾಲೂಕು ಗಾಣಿಗ ಸಂಘ, ನಾಳೆ ನಡೆಯಲಿರುವ ಸಭೆಯಲ್ಲೂ ಈ ಎಲ್ಲ ಭಾಗಗಳ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸುವಂತೆ ವಿನಂತಿಸಿಕೊಂಡಿದೆ.

    ಸಂಬಂಧಿತ ಸುದ್ದಿ: ಉದಯ ಗಾಣಿಗ ಕೊಲೆ ಆರೋಪಿ ಪ್ರಾಣೇಶ್​ ಬಂಧನ; ಪ್ರಶ್ನಿಸಿದ್ದಕ್ಕೆ ಪ್ರಾಣ ತೆಗೆದ ಗ್ರಾಮ ಪಂಚಾಯತ್​ ಅಧ್ಯಕ್ಷ?

    ಸಂಬಂಧಿತ ಸುದ್ದಿ: ಉದಯ ಗಾಣಿಗ ಕೊಲೆ ಪ್ರಕರಣ; ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಜಿಲ್ಲಾ ಗಾಣಿಗ ಸಂಘಟನೆ ಆಗ್ರಹ

    ಸಂಬಂಧಿತ ಸುದ್ದಿ: ಉದಯ ಗಾಣಿಗ ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನೂ ಬಂಧಿಸಿ; ಮಾಜಿ ಶಾಸಕ ಗೋಪಾಲ ಪೂಜಾರಿ ಆಗ್ರಹ

    ಸಂಬಂಧಿತ ಸುದ್ದಿ: ಉದಯ ಗಾಣಿಗ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಆಗಲಿ; ಮಾಜಿ ಸಚಿವ ಸೊರಕೆ ಆಗ್ರಹ 

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ ಈ ಕೆಳಗಿನ 'ಐಡಿ'ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ.
      G-Mail ID: [email protected]

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!