Sunday, September 22, 2024
spot_img
More

    Latest Posts

    ‘ಒಳ್ಳೆ ಗಾಣಿಗರೆಣ್ಣೆ..’; ತನ್ಮಯರಾಗಿಸುವಂತೆ ಹಾಡಿದ್ದಾರೆ ತನುಜಾ..

    ಬೆಂಗಳೂರು: ಗಾಣಿಗ ಸಮುದಾಯದ ಕುರಿತ ಗೀತೆಗಳು ಬೇಕಾದಷ್ಟಿವೆ. ಅಂಥವುಗಳಲ್ಲಿ ಒಂದನ್ನು ಹಾಡಿದ್ದಾರೆ ಸುದ್ದಿವಾಹಿನಿಯೊಂದರ ನಿರೂಪಕಿ ಜೆ.ಟಿ. ತನುಜಾ. ಇವರು ತಮ್ಮ ಸಹೋದರನೊಂದಿಗೆ ಹಾಡಿರುವ ‘ಒಳ್ಳೆ ಗಾಣಿಗರೆಣ್ಣೆ..’ ಎಂಬ ಗೀತೆಯು ಸಂಗೀತಪ್ರಿಯರು ತನ್ಮಯರಾಗಿ ಕೇಳುವಂತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಉತ್ತಮ ಸ್ಪಂದನೆ ಗಳಿಸಿದ್ದು, ಸಾಕಷ್ಟು ಮೆಚ್ಚುಗೆಯನ್ನೂ ಪಡೆದಿದೆ.

    ಈ ಗೀತೆಯನ್ನು ಗಾಣಿಗ ಸಮಾಜ ಬಾಂಧವರು ಕೇಳಿ ಆನಂದಿಸಲಿ ಎಂಬ ಉದ್ದೇಶದಿಂದ ಗ್ಲೋಬಲ್ ಗಾಣಿಗ ಈ ಗಾಯನದ ವಿಡಿಯೋ ತುಣುಕನ್ನು ತನ್ನ ಯೂಟ್ಯೂಬ್​ ಚಾನೆಲ್​ ಮೂಲಕ ನಿಮ್ಮೆಲ್ಲರ ಮುಂದಿಟ್ಟಿದೆ. ಸುಶ್ರಾವ್ಯವಾದ ಈ ಗಾಯನವನ್ನು ಕೇಳಿ ಆನಂದಿಸಿ. ಗಾಣಿಗ ಸಮುದಾಯಕ್ಕೆ ಸಂಬಂಧಿಸಿದ ಇಂಥ ವಿಡಿಯೋಗಳು, ಗಾಣಿಗ ಸಮಾಜದ ಪ್ರತಿಭೆಗಳ ಕುರಿತ ಇಂಥ ಕ್ಲಿಪ್ಪಿಂಗ್​ಗಳಿದ್ದರೆ ಅದರ ವಿವರಗಳೊಂದಿಗೆ ನಮಗೆ ಕಳುಹಿಸಿಕೊಡಿ. ಅದನ್ನು ಸಮಾಜದ ಮತ್ತಷ್ಟು ಮಂದಿಗೆ ತಲುಪಿಸಿ, ಪ್ರತಿಭೆಗಳ ಅನಾವರಣಗೊಳಿಸುವ ಜೊತೆಗೆ ಮೆಚ್ಚುಗೆಯೂ ವ್ಯಕ್ತವಾಗುವಂತಹ ವೇದಿಕೆಯನ್ನು ‘ಗ್ಲೋಬಲ್ ಗಾಣಿಗ’ ಒದಗಿಸಲಿದೆ. ಮಾತ್ರವಲ್ಲ, ಸಮಾಜದ ಇತರ ಪ್ರತಿಭೆಗಳಿಗೂ ಇದು ಪ್ರೋತ್ಸಾಹ ನೀಡಲಿದ್ದು, ಮತ್ತಷ್ಟು ಮಂದಿ ಹೊಸ ಹೊಸ ಕಲಾಪ್ರಕಾರಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಿದೆ.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಬಹುದು. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494 ಸಂಪರ್ಕಿಸಬಹುದು. ತಕ್ಷಣಕ್ಕೆ ಕರೆ ಸ್ವೀಕರಿಸದ ಪಕ್ಷದಲ್ಲಿ ವಾಟ್ಸ್​ಆ್ಯಪ್​ ಮೆಸೇಜ್ ಮಾಡಿ, ವಿಷಯ ತಿಳಿಸಿದರೆ ನಾವೇ ನಿಮ್ಮನ್ನು ಬಳಿಕ ಸಂಪರ್ಕಿಸಲಿದ್ದೇವೆ.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!