Saturday, September 21, 2024
spot_img
More

    Latest Posts

    ಬಿಹಾರ ರಾಜ್ಯ ಜೆಡಿಯು ಕಾರ್ಯದರ್ಶಿ ಆಗಿ ಶಕುಂತಲಾ ಗುಪ್ತ ನೇಮಕ

    ಬೆಂಗಳೂರು: ಕೆಲವು ತಿಂಗಳುಗಳ ಹಿಂದೆ ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗಾಣಿಗ ಸಮುದಾಯದವರು ಬಹಳಷ್ಟು ಸ್ಥಾನಗಳಲ್ಲಿ ವಿಜಯ ಸಾಧಿಸಿರುವುದು ತಿಳಿದಿರುವಂಥದ್ದೇ. ಅಲ್ಲಿನ 243 ವಿಧಾನಸಭಾ ಕ್ಷೇತ್ರಗಳ ಪೈಕಿ 23ರಲ್ಲಿ ಸಾಹು (ಗಾಣಿಗ) ಸಮುದಾಯದವರೇ ಗೆಲುವು ಸಾಧಿಸಿದ್ದರು. ಆ ಮೂಲಕ ಒಟ್ಟಾರೆ ಗೆಲುವಿನಲ್ಲಿ ಸುಮಾರು ಶೇ. 10 ಪಾಲು ಗಾಣಿಗ ಸಮುದಾಯದ್ದಾಗಿತ್ತು.

    ಇದೀಗ ಗಾಣಿಗ ಸಮುದಾಯಕ್ಕೆ ಬಿಹಾರದಿಂದ ಮತ್ತೊಂದು ಸಂತೋಷದ ಸುದ್ದಿ ಬಂದಿದೆ. ಬಿಹಾರ ರಾಜ್ಯದ ಜನತಾ ದಳ-ಸಂಯುಕ್ತ (ಜೆಡಿ-ಯು) ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಗಾಣಿಗ ಸಮುದಾಯದವರಾದ ಶಕುಂತಲಾ ಗುಪ್ತ ನೇಮಕಗೊಂಡಿದ್ದಾರೆ. ಬಿಹಾರದಲ್ಲಿ ಅಖಿಲ ಭಾರತ ತೇಲಿ ಮಹಾಸಭಾದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಆಗಿಯೂ ಇವರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

    ಶಕುಂತಲಾ ಗುಪ್ತ, ಅಮಿತಾಭ್ ಗುಪ್ತ

    ಶಕುಂತಲಾ ಗುಪ್ತ ಅವರಿಗೆ ಸಾಮಾಜಿಕ ಕಾರ್ಯಕರ್ತ, ಅಖಿಲ ಭಾರತ ತೇಲಿ ಮಹಾಸಭಾ ಬಿಹಾರ ರಾಜ್ಯಾಧ್ಯಕ್ಷ ಹಾಗೂ ಸಹ-ಸಂಸ್ಥಾಪಕರೂ ಆಗಿರುವ ಅಮಿತಾಭ್ ಗುಪ್ತ ಅವರು ಶುಭಾಶಯಗಳನ್ನು ಕೋರಿದ್ದಾರೆ. ಅಲ್ಲದೆ ಶಕುಂತಲಾ ಅವರಿಂದ ಜೆಡಿಯು ಜೊತೆಗೆ ಗಾಣಿಗ ಸಮುದಾಯಕ್ಕೂ ಹೆಚ್ಚಿನ ಅನುಕೂಲಗಳು ಆಗಲಿ ಎಂಬುದಾಗಿಯೂ ಹಾರೈಸಿದ್ದಾರೆ.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ.  
    ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್​ಆ್ಯಪ್​ ಮಾಡಿ.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!