Saturday, September 21, 2024
spot_img
More

    Latest Posts

    ಪಂಜಾಬ್​ನಲ್ಲಿನ ಸಾಹು ಚೌಪಾಲ್ ಕಾರ್ಯಗಳು ಮನೆಮನೆಗೂ ತಲುಪಲಿ

    ಬೆಂಗಳೂರು: ಸಾಹು ಚೌಪಾಲ್ ನಡೆಸುತ್ತಿರುವ ಎಲ್ಲ ಕಾರ್ಯಗಳು ಸಮಾಜದ ಪ್ರತಿ ಮನೆಮನೆಗೂ ತಲುಪಬೇಕು ಎಂದು ಸಾಹು ಚೌಪಾಲ್​​ನ ರಾಷ್ಟ್ರೀಯ ಉಪಾಧ್ಯಕ್ಷ ರಾಜೇಶ್​ ಕುಮಾರ್ ಸಾಹು ಅಭಿಪ್ರಾಯ ಪಟ್ಟಿದ್ದಾರೆ. ಇತ್ತೀಚೆಗೆ ಪಂಜಾಬ್​ನ ಲುಧಿಯಾನದ ಫೀಲ್ಡ್​ ಗಂಜ್​ನಲ್ಲಿರುವ ಸಾಹು ಚೌಪಾಲ್​ನ ರಾಷ್ಟ್ರೀಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

    ದೇಶದಲ್ಲಿ ಅದರಲ್ಲೂ ಪಂಜಾಬ್​ನಲ್ಲಿ ಸಾಹು ಚೌಪಾಲ್ ನಡೆಸಿರುವ ಸಾಮಾಜಿಕ ಚಟುವಟಿಕೆಗಳು ಮನೆಮನೆಯನ್ನೂ ತಲುಪಬೆಕು. ಉದ್ಯೋಗ ಹಾಗೂ ಶಿಕ್ಷಣದ ವಿಚಾರಗಳಲ್ಲಿ ಜಾಗೃತಿಯನ್ನು ಮೂಡಿಸಬೇಕು. ಈ ವಿಷಯದಲ್ಲಿ ನಾವು ಸಾಹು ಚೌಪಾಲ್​ನ ರಾಷ್ಟ್ರೀಯ ಅಧ್ಯಕ್ಷ ಸಾಹಿಬ್​ ಶರಣ್ ಸಾಹು ಅವರನ್ನು ಅನುಸರಿಸಬೇಕು. ಅವರು ಸಾಹು ಚೌಪಾಲ್​ನ ಸದಸ್ಯರನ್ನು ಸಂಪರ್ಕಿಸಿ ಸಂಘಟಿಸಲು ದೇಶಾದ್ಯಂತ ಸಂಚರಿಸುತ್ತಿದ್ದಾರೆ. ಅದೇ ನಿಟ್ಟಿನಲ್ಲಿ ನಮ್ಮೆಲ್ಲರ ಕೆಲಸವೂ ಸಾಗಬೇಕು ಎಂದು ರಾಜೇಶ್​ ಕುಮಾರ್ ಸಾಹು ಹೇಳಿದರು.

    ಸಭೆಯಲ್ಲಿ ಭಾಗಿಯಾಗಿದ್ದ ಸಾಹು ಚೌಪಾಲ್​ನ ಪ್ರತಿನಿಧಿಗಳು

    ಸಾಹಿಬ್​ ಶರಣ್ ಸಾಹು ಅವರ ಮಾರ್ಗದರ್ಶನದಲ್ಲಿ ಸಾಹು ಚೌಪಾಲ್​ನ ಎಲ್ಲೆಡೆಯ ಎಲ್ಲ ಪದಾಧಿಕಾರಿಗಳೂ ಒಗ್ಗೂಡಿ ಕೆಲಸ ಮಾಡಬೇಕು. ಅದಕ್ಕಾಗಿ ಪಂಜಾಬ್​ನ 23 ಜಿಲ್ಲೆಗಳಲ್ಲಿರುವ ಎಲ್ಲ ಸಾಹು ಚೌಪಾಲ್ ಸಂಘಟನೆಗಳು ಒಂದೇ ವೇದಿಕೆಯಡಿ ಕಾರ್ಯನಿರ್ವಹಿಸುವಂತೆ ಆಗಬೇಕು ಎಂದು ಆಶಿಸಿದರು.

    ಜೂನ್ 13ರಂದು ನಡೆದ ಈ ಸಭೆಯಲ್ಲಿ ಸಾಹು ಚೌಪಾಲ್​ನ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಬ್ರಿಜೇಶ್ ಕುಮಾರ್ ಸಾಹು, ಸಾಹು ಎಜುಕೇಷನ್ ಆ್ಯಂಡ್ ಟ್ರೇನಿಂಗ್ ಸೆಕ್ರೆಟರಿ ಗಿರಿಧಾರಿ ಸಾಹು, ಸಲಹೆಗಾರರಾದ ಓಂಪ್ರಕಾಶ್ ಸಾಹು, ಜಿತೇಂದ್ರ ಸಾಹು, ರವೀಂದ್ರ ಸಾಹು ಮುಂತಾದವರು ಉಪಸ್ಥಿತರಿದ್ದರು.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ.   
    ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್​ಆ್ಯಪ್​ ಮಾಡಿ.

    ಬಿಹಾರ ರಾಜ್ಯ ಜೆಡಿಯು ಕಾರ್ಯದರ್ಶಿ ಆಗಿ ಶಕುಂತಲಾ ಗುಪ್ತ ನೇಮಕ

    ಅಸ್ಸಾಂ ಸಿವಿಲ್ ಸರ್ವಿಸ್ ಅಧಿಕಾರಿಯಾಗಿ ನಮ್ರತಾ ಸಾಹು

     

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!