Sunday, September 22, 2024
spot_img
More

    Latest Posts

    ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ಗಾಣಿಗ ಬಾಂಧವರಿಗಿಲ್ಲಿದೆ ಅವಕಾಶ..

    ಬೆಂಗಳೂರು: ಗಾಣಿಗರಿಗೆ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಈಗಾಗಲೇ ಸಾಕಷ್ಟು ಚಟುವಟಿಕೆಗಳನ್ನು ನಡೆಸಿರುವ ಶ್ರೀ ಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್​ ಸಮಾಜೋದ್ಧಾರದ ಹಿನ್ನೆಲೆಯಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಿದೆ. ಅದಕ್ಕಾಗಿ ತಮ್ಮ ವ್ಯಾಪ್ತಿ ಹಿರಿದಾಗಿಸಿಕೊಳ್ಳಲು ಮತ್ತು ಸಮಾಜ ಬಾಂಧವರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಲು ಮುಂದಾಗಿದೆ.

    ಗಾಣಿಗ ಸಮಾಜವನ್ನು ಸಂಘಟಿತಗೊಳಿಸುವ ಸಲುವಾಗಿ ಹಾಗೂ ಸಮಾಜದಲ್ಲಿ ಅಗತ್ಯವಿರುವವರಿಗೆ ಇನ್ನೂ ಹೆಚ್ಚಿನ ಸಹಾಯ-ಸಹಕಾರ ಒದಗಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗೆ ಇಬ್ಬರು ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳ ಅವಶ್ಯವಿದೆ. ಇವರು ಜಿಲ್ಲಾಮಟ್ಟದ ಗಾಣಿಗ ಸಂಘಟನೆಗಳ ಜೊತೆ ಸಂಪರ್ಕದಲ್ಲಿ ಇದ್ದುಕೊಂಡು ಸಮನ್ವಯ ಸಾಧಿಸುವುದು ಇವರ ಪ್ರಮುಖ ಕಾರ್ಯವಾಗಿರುತ್ತದೆ.

    ಶ್ರೀ ಗಾಣಿಗ ಎಜುಕೇಷನ್​ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟೀ ಆರ್. ನಾಗರಾಜ ಶೆಟ್ಟಿ.

    ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಅಥವಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವಾಗ ಸಹಾಯ ಮಾಡುವುದರ ಜೊತೆಗೆ ಟ್ರಸ್ಟ್ ಕೋರಿಕೆಯಂತೆ ಅಂಥ ವಿದ್ಯಾರ್ಥಿಗಳ ಸ್ಥಳಪರಿಶೀಲನೆ ಮಾಡಿ ದೃಢಪಡಿಸುವುದು, ಆಯಾ ಜಿಲ್ಲೆಯ ಗಾಣಿಗ ಸಮುದಾಯದ ಅಂಕಿ-ಅಂಶಗಳನ್ನು ಕ್ರೋಡೀಕರಿಸುವುದು ಮುಂತಾದ ಕಾರ್ಯಗಳನ್ನು ಮಾಡಬೇಕಾಗಿರುತ್ತದೆ. ಸಮಾಜದ ಕುರಿತು ಕಾಳಜಿ ಹಾಗೂ ಸೇವಾ ಮನೋಭಾವ ಇರುವವರು ಈ ಸಲುವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಶ್ರೀ ಗಾಣಿಗ ಎಜುಕೇಷನ್​ ಆ್ಯಂಡ್ ಚಾರಿಟಬಲ್ ಟ್ರಸ್ಟ್​ನ ಮ್ಯಾನೇಜಿಂಗ್ ಟ್ರಸ್ಟೀ ಆರ್​. ನಾಗರಾಜ ಶೆಟ್ಟಿ ತಿಳಿಸಿದ್ದಾರೆ.

    ಆಸಕ್ತರು ನೋಂದಣಿಗೆ ಈ ಲಿಂಕ್​ ಬಳಸಿ: https://forms.gle/5vhScixHg3FJyxm98  

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!