Saturday, September 21, 2024
spot_img
More

    Latest Posts

    ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಗಾಣಿಗ ಸಮಾಜದ ಮಕ್ಕಳಿಗಾಗಿ ಮುದ್ದುಕೃಷ್ಣ ಆನ್‌ಲೈನ್ ಸ್ಪರ್ಧೆ

    ಬೆಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕುಮಟಾದ ಗಾಣಿಗ ಯುವಬಳಗ (ರಿ.) ಗಾಣಿಗ ಸಮುದಾಯದ ಮಕ್ಕಳಿಗಾಗಿ ಮುದ್ದುಕೃಷ್ಣ ಆನ್‌ಲೈನ್ ಸ್ಪರ್ಧೆ ಹಮ್ಮಿಕೊಂಡಿದೆ.

    ಗಾಣಿಗ ಸಮಾಜದ ಏಳು ವರ್ಷಗಳ ಒಳಗಿನ ಮಕ್ಕಳಿಗಾಗಿ ಈ ಸ್ಪರ್ಧೆ ಆಯೋಜಿಸಲಾಗಿದ್ದು, 27-07-2014ರ ನಂತರ ಜನಿಸಿರುವ ಮಕ್ಕಳು ಮಾತ್ರ ಇದರಲ್ಲಿ ಭಾಗವಹಿಸಬಹುದು. ಸ್ಪರ್ಧೆಯಲ್ಲಿ ವಿಜೇತರಾದ ಮೊದಲ ಮೂರು ಮಂದಿಗೆ ನಗದು ಬಹುಮಾನ ಸಿಗಲಿದೆ.

    ಮೊದಲನೆಯ ಬಹುಮಾನವಾಗಿ 7,777 ರೂ., ಎರಡನೆಯ ಬಹುಮಾನವಾಗಿ 5,555 ರೂ. ಮತ್ತು ಮೂರನೆಯ ಬಹುಮಾನವಾಗಿ 3,333 ರೂ. ನೀಡಲಾಗುವುದು. ನಾಲ್ಕು ಮತ್ತು ಐದನೇ ಸ್ಥಾನ ಗಳಿಸಿದವರಿಗೆ ಸಮಾಧಾನಕರ ಬಹುಮಾನವಾಗಿ ಆಕರ್ಷಕ ಉಡುಗೊರೆ ನೀಡಲಾಗುವುದು ಎಂದು ಬಳಗ ತಿಳಿಸಿದೆ.

    ಕುಮಟಾ ಗಾಣಿಗ ಯುವಬಳಗ (ರಿ.) ಇದರ ಸದಸ್ಯರು

    ಸ್ಪರ್ಧೆಯ ನಿಯಮಗಳು

    • ಸ್ಪರ್ಧಿಗಳ ಮುದ್ದುಕೃಷ್ಣ ಫೋಟೋ ಜೊತೆ ಅವರ ಜನನ ಪ್ರಮಾಣಪತ್ರ ಅಥವಾ ಆಧಾರ್ ಕಾರ್ಡನ್ನು 9742252260 ನಂಬರ್‌ಗೆ ವಾಟ್ಸ್‌ಆ್ಯಪ್ ಮೂಲಕ ಕಳುಹಿಸುವುದು. (ಒಂದು ಫೋಟೋಗೆ ಮಾತ್ರ ಅವಕಾಶ)
    • ಎಡಿಟ್ ಮಾಡಿದ ಫೋಟೋ ಕಳುಹಿಸಬಾರದು.
    • ಸ್ಪರ್ಧೆಗೆ ಪ್ರವೇಶ ಶುಲ್ಕದ ಮೊತ್ತ 100 ರೂಪಾಯಿಯನ್ನು 8660250760 ನಂಬರ್‌ಗೆ ಕಳಿಸಿ, ಅದರ ರಶೀದಿಯನ್ನು 9742252260 ನಂಬರ್‌ಗೆ ವಾಟ್ಸ್‌ಆ್ಯಪ್ ಮೂಲಕ ಕಳುಹಿಸುವುದು.
    • ವಿಜೇತರ ಆಯ್ಕೆಯಲ್ಲಿ ಫೇಸ್‌ಬುಕ್ ಲೈಕ್ ಹಾಗೂ ನಿರ್ಣಾಯಕರ ಅಂಕ 50:50 ಪಾತ್ರ ವಹಿಸುತ್ತದೆ.
    • ಮುದ್ದುಕೃಷ್ಣನ ಫೋಟೋ ಕಳುಹಿಸಲು ಕಡೇ ದಿನ ಇದೇ ಅಗಸ್ಟ್ 24.
    • ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೂ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಲಾಗುವುದು.
    • ಸ್ಪರ್ಧೆಯಲ್ಲಿ ವಿಜೇತರ ಫಲಿತಾಂಶವನ್ನು ಆಗಸ್ಟ್ 29ರ ಸಂಜೆ 5 ಗಂಟೆಗೆ http://www.globalganiga.com ಹಾಗೂ Ganiga Yuva Balaga ಫೇಸ್‌ಬುಕ್‌ ಪೇಜ್‌ನಲ್ಲಿ ಪ್ರಕಟಿಸಲಾಗುವುದು.
    • ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ.
    • ಹೆಚ್ಚಿನ ಮಾಹಿತಿಗೆ 9742252260 ಅಥವಾ 8660250760 ನಂಬರ್‌ ಮೂಲಕ ಸಂಪರ್ಕಿಸಬಹುದು.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!