Saturday, September 21, 2024
spot_img
More

    Latest Posts

    ನೂತನ ಸಂಪುಟ ರಚನೆ ಬೆನ್ನಿಗೇ ಮತ್ತಷ್ಟು ಕ್ರಿಯಾಶೀಲರಾದ್ರು ಶಾಸಕ ದಿನಕರ ಶೆಟ್ಟಿ

    ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ನೂತನ ಸಚಿವ ಸಂಪುಟ ರಚನೆಯಾದ ಬೆನ್ನಿಗೇ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ, ಗಾಣಿಗ ಸಮುದಾಯದ ಮುಖಂಡರೂ ಆಗಿರುವ ದಿನಕರ ಕೆ. ಶೆಟ್ಟಿ ಅವರು ಮತ್ತಷ್ಟು ಕ್ರಿಯಾಶೀಲರಾಗಿದ್ದಾರೆ.

    ಹೊಸ ಸಂಪುಟ ರಚನೆ ಬಳಿಕ ರಾಜ್ಯ ರಾಜಕಾರಣದಲ್ಲಿ ಉಂಟಾಗಿರುವ ಅಸಮಾಧಾನ, ಅದರಿಂದ ತಲೆದೋರಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಭೇಟಿಯಾಗಿ ಪರಸ್ಪರ ಮಾತುಕತೆ ನಡೆಸಿದ್ದರು.

    ಆ ಬಳಿಕ ಅಂದರೆ ಎರಡು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರನ್ನು ಶಾಸಕ ದಿನಕರ ಶೆಟ್ಟಿ ಅವರು ಭೇಟಿಯಾಗಿ ಮಾತನಾಡಿದ್ದರು. ಮಾತ್ರವಲ್ಲದೆ ಆಶೀರ್ವಾದ ಪಡೆದಿರುವುದಾಗಿಯೂ ಹೇಳಿಕೊಂಡಿದ್ದರು.

    ಆಗಸ್ಟ್ 11ರಂದು ಮಾಜಿ ಸಿಎಂ ಯಡಿಯೂರಪ್ಪ ಅವರೊಂದಿಗೆ ಶಾಸಕ ದಿನಕರ ಶೆಟ್ಟಿ ಮಾತುಕತೆ

    ಆ ನಂತರವೂ ಶಾಸಕ ದಿನಕರ ಶೆಟ್ಟಿ ಅವರ ಭೇಟಿ ಸರಣಿ ಮುಂದುವರಿದಿದೆ. ನೂತನ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಹಲವರನ್ನು ಅವರು ಭೇಟಿಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ಅವರು ಮತ್ತಷ್ಟು ಕ್ರಿಯಾಶೀಲರಾಗಿರುವುದು ಕಂಡುಬಂದಿದೆ.

    ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರ ಜೊತೆ ದಿನಕರ ಶೆಟ್ಟಿ

    ಕಳೆದೆರಡು ದಿನಗಳಲ್ಲಿ ಅವರು ಅಬಕಾರಿ ಸಚಿವ ಕೆ. ಗೋಪಾಲಯ್ಯ, ಪ್ರಾರ್ಥಮಿಕ ಮತ್ತು ಪ್ರೌಢಶಿಕ್ಷಣ ಬಿ.ಸಿ. ನಾಗೇಶ್, ಸಣ್ಣ ನೀರಾವರಿ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರನ್ನು ಭೇಟಿಯಾಗಿ ಅಭಿನಂದಿಸಿ ಮಾತುಕತೆ ನಡೆಸಿದ್ದಾರೆ.

    ಸಚಿವ ಬಿ.ಸಿ. ನಾಗೇಶ್ ಜೊತೆ ಶಾಸಕ ದಿನಕರ ಶೆಟ್ಟಿ
    ಸಚಿವ ಜೆ.ಸಿ. ಮಾಧುಸ್ವಾಮಿ ಜೊತೆ ಶಾಸಕ ದಿನಕರ ಶೆಟ್ಟಿ

    ಸಂಬಂಧಿತ ಸುದ್ದಿ: ಮಾಜಿ ಸಿಎಂ ಯಡಿಯೂರಪ್ಪ-ಶಾಸಕ ದಿನಕರ ಶೆಟ್ಟಿ ಭೇಟಿ; ಗಾಣಿಗ ಸಮುದಾಯದಲ್ಲಿ ಗರಿಗೆದರಿದ ನಿರೀಕ್ಷೆ!

    ಸಂಬಂಧಿತ ಸುದ್ದಿ: ಜನ್ಮದಿನದ ಶುಭಾಶಯ ಕೋರಲು ಬಂದವರಿಗೇ ಶಾಸಕರಿಂದ ಉಡುಗೊರೆ

    ಸಂಬಂಧಿತ ಸುದ್ದಿ: ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಶುಭ ಕೋರಿದ ಬಿ.ಜೆ. ಪುಟ್ಟಸ್ವಾಮಿ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!