Saturday, September 21, 2024
spot_img
More

    Latest Posts

    ಎಸ್​ಜಿಇಸಿಟಿಯಿಂದ ಮತ್ತೊಂದು ಮಹತ್ಕಾರ್ಯ; ಗಾಣಿಗ ಸಮಾಜದ 19 ಮಹತ್ವಾಕಾಂಕ್ಷಿಗಳಿಗೆ ಯುಪಿಎಸ್​ಸಿ/ಕೆಪಿಎಸ್​ಸಿ ತರಬೇತಿ

    ಬೆಂಗಳೂರು: ಶ್ರೀ ಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್​ ಗಾಣಿಗ ಸಮಾಜಕ್ಕಾಗಿ ಅದರಲ್ಲೂ ಶೈಕ್ಷಣಿಕವಾಗಿ ಹಲವಾರು ಮಹತ್ವದ ಕೆಲಸಗಳನ್ನು ಮಾಡುತ್ತಿದ್ದು, ಇದೀಗ ಮತ್ತೊಂದು ಮಹತ್ಕಾರ್ಯಕ್ಕೂ ಮುಂದಾಗಿದೆ. ಆ ನಿಟ್ಟಿನಲ್ಲಿ ಇನ್ನೊಂದು ಸಂಸ್ಥೆಯೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿದೆ.

    ಗಾಣಿಗ ಸಮಾಜದ ಮಹತ್ವಾಕಾಂಕ್ಷಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೂರಕ್ಕೆ ನೂರರಷ್ಟು ವಿದ್ಯಾರ್ಥಿವೇತನದಡಿ ಯುಪಿಎಸ್​ಸಿ ಮತ್ತು ಕೆಪಿಎಸ್​ಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅತ್ಯುತ್ತಮ ತರಬೇತಿಯನ್ನು ನೀಡಲು ಎಸ್​ಜಿಇಸಿಟಿ ಮುಂದಾಗಿದೆ. ಅದಕ್ಕೆಂದೇ ರಾಜ್ಯಾದ್ಯಂತ ಒಟ್ಟು 19 ಮಹತ್ವಾಕಾಂಕ್ಷಿ ಪ್ರತಿಭಾವಂತರನ್ನು ಆರಿಸಿಕೊಂಡಿದ್ದು, ಅವರಿಗೆ ಉಚಿತವಾಗಿ ತರಬೇತಿಯನ್ನು ಕೊಡಲಿದೆ.

    ಇಂಡಿಯಾ ಫಾರ್ ಐಎಎಸ್ ಎಂಬ ಸಂಸ್ಥೆಯೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿರುವ ಎಸ್​ಜಿಇಸಿಟಿ, ಅದಕ್ಕಾಗಿ ತಗುಲುವ ವೆಚ್ಚವನ್ನೂ ಭರಿಸಲಿದೆ. ನಮ್ಮ ಸಮಾಜದ 19 ಮಹತ್ವಾಕಾಂಕ್ಷಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಯುಪಿಎಸ್​ಸಿ/ಕೆಪಿಎಸ್​ಸಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಇಂಡಿಯಾ ಫಾರ್ ಐಎಎಸ್ ಸಂಸ್ಥೆ ಮೂಲಕ ತರಬೇತಿ ಕೊಡಿಸಲಾಗುತ್ತಿದೆ. ಅದಕ್ಕಾಗಿ ಆರಂಭಿಕ ಮೊತ್ತವಾಗಿ 50 ಸಾವಿರ ರೂಪಾಯಿಯನ್ನು ಇಂಡಿಯಾ ಫಾರ್ ಐಎಎಸ್​ಗೆ ಚೆಕ್ ಮೂಲಕ ಹಸ್ತಾಂತರಿಸಲಾಗಿದೆ ಎಂದು ಎಸ್​ಜಿಇಸಿಟಿ ಸಂಸ್ಥಾಪಕ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಆರ್​. ನಾಗರಾಜ್ ಶೆಟ್ಟಿ ತಿಳಿಸಿದ್ದಾರೆ.

    ಇಂಡಿಯಾ ಫಾರ್ ಐಎಎಸ್ ಸಂಸ್ಥಾಪಕ ಹಾಗೂ ಸಿಇಒ ಕೂಡ ಆಗಿರುವ ಪಿ.ಸಿ. ಶ್ರೀನಿವಾಸ್ ಅವರಿಗೆ ಚೆಕ್ ಹಸ್ತಾಂತರಿಸಲಾಗಿದ್ದು, ಈ ಸಂದರ್ಭದಲ್ಲಿ ತಮ್ಮ ಜೊತೆ ಎಸ್​ಜಿಇಸಿಟಿ ಟ್ರಸ್ಟಿಗಳಾದ ಕೆ.ಎಂ. ನಾರಾಯಣಪ್ಪ, ಆರ್.ವಿ. ನಾಗಭೂಷಣ್​ ಅವರು ಉಪಸ್ಥಿತರಿದ್ದರು. ತರಬೇತಿ ತರಗತಿಗಳು ಇದೇ ಆಗಸ್ಟ್ 16ರಂದು ಆರಂಭವಾಗಲಿವೆ ಎಂದು ನಾಗರಾಜ್ ಶೆಟ್ಟಿ ತಿಳಿಸಿದ್ದಾರೆ.

    ಹೆಚ್ಚಿನ ವಿವರಗಳಿಗೆ ಸಂಪರ್ಕ: www.sgect.in , www.india4ias.com

    ಸಂಬಂಧಿತ ಸುದ್ದಿ: ಎಸ್‌ಜಿಇಸಿಟಿ ಮಹಾಸಭೆ, ನೂರಾರು ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಾಧಕರಿಗೆ ‘ವಿದ್ಯಾಜ್ಯೋತಿ’ ಪ್ರಶಸ್ತಿ ಪ್ರದಾನ

    ಸಂಬಂಧಿತ ಸುದ್ದಿ: ಶ್ರೀ ಗಾಣಿಗ ಎಜುಕೇಷನಲ್​ ಆ್ಯಂಡ್​ ಚಾರಿಟಬಲ್ ಟ್ರಸ್ಟ್​ನಿಂದ ವಿದ್ಯಾಶ್ರಯ ಯೋಜನೆ

    ಸಂಬಂಧಿತ ಸುದ್ದಿ: ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ಗಾಣಿಗ ಬಾಂಧವರಿಗಿಲ್ಲಿದೆ ಅವಕಾಶ..

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!