ಬೆಂಗಳೂರು: ಸೋಮಕ್ಷತ್ರಿಯ ಗಾಣಿಗ ಸಮಾಜದವರ ಕುಲದೇವರಾಗಿರುವ ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ ಹಾಗೂ ಋಗುಪಾಕರ್ಮ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನೆರವೇರಿದವು.
ಆಗಸ್ಟ್ 20ರ ಶುಕ್ರವಾರ ವರಮಹಾಲಕ್ಷ್ಮೀ ಪೂಜೆ ಹಾಗೂ ಆಗಸ್ಟ್ 21ರ ಶನಿವಾರ ಋಗುಪಾಕರ್ಮ ಕಾರ್ಯಕ್ರಮಗಳು ಸಮಾಜಬಾಂಧವರ ಸಮ್ಮುಖದಲ್ಲಿ ಸಾಂಗವಾಗಿ ನೆರವೇರಿದವು.
ವರಮಹಾಲಕ್ಷ್ಮೀ ಪೂಜೆಯಲ್ಲಿ ಸಮಾಜದ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡರೆ, ಋಗುಪಾಕರ್ಮ ಆಚರಣೆಯಲ್ಲಿ ಸಮಾಜದ ಯುವಕರು-ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಜ್ಞೋಪವೀತಧಾರಣೆಗೆ ಪಾತ್ರರಾದರು.
ಸಂಬಂಧಿತ ಸುದ್ದಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ; ಬಾರ್ಕೂರು ದೇವಳದಲ್ಲಿ ಧ್ವಜಾರೋಹಣ, ಶ್ರಮದಾನ
ಸಂಬಂಧಿತ ಸುದ್ದಿ: ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ವಾರ್ಷಿಕ ವರ್ಧಂತ್ಯುತ್ಸವ
ಸಂಬಂಧಿತ ಸುದ್ದಿ: ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಪುನರಾರಂಭ