Saturday, September 21, 2024
spot_img
More

    Latest Posts

    ಸೋಮಕ್ಷತ್ರಿಯ ಗಾಣಿಗ ಸಮಾಜದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

    ಬೆಂಗಳೂರು: ಸೋಮಕ್ಷತ್ರಿಯ ಗಾಣಿಗ ಸಮಾಜ (ರಿ.) ಬೆಂಗಳೂರು ಇವರು ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿದ್ದು, ಕೋವಿಡ್ ನಿರ್ಬಂಧ ಹಾಗೂ ಮಾರ್ಗಸೂಚಿ ಕಾರಣದಿಂದಾಗಿ ಈ ಸಲ ಆಗಸ್ಟ್‌ 31ರ ಮಂಗಳವಾರ ಸಂಜೆ ಅತಿ ಸರಳವಾಗಿ ಜನ್ಮಾಷ್ಟಮಿಯನ್ನು ಆಚರಣೆ ಮಾಡಲಾಗಿದೆ.

    ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ, ಗಾಣಿಗ ಸಮಾಜಕ್ಕೆ ಸೇರಿರುವ ಶ್ರೀ ವ್ಯಾಸರಾಜ ಭವನದಲ್ಲಿ ಸರಳವಾಗಿಯಾದರೂ ಶಾಸ್ತ್ರೋಕ್ತವಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗಿದೆ. ಕೊರೊನಾ ಮಾರ್ಗಸೂಚಿಯಿಂದಾಗಿ ಎಂದಿನಂತೆ ಸಾರ್ವಜನಿಕವಾಗಿ ಅದ್ಧೂರಿಯಾಗಿ ಆಚರಿಸಲು ಸಾಧ್ಯವಾಗದ್ದರಿಂದ, ಶ್ರೀವ್ಯಾಸರಾಜ ಭವನದಲ್ಲೇ ಸರಳವಾಗಿ ಕಾರ್ಯಕ್ರಮ ನೆರವೇರಿದೆ. ಹೀಗಾಗಿ ಸೋಮಕ್ಷತ್ರಿಯ ಗಾಣಿಗ ಸಮಾಜದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ಸಮಿತಿ ಸದಸ್ಯರು ಸೇರಿ ಆಯ್ದ ಕೆಲವರಷ್ಟೇ ಉಪಸ್ಥಿತರಿದ್ದರು.

    ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಎಚ್.ಟಿ.ನರಸಿಂಹ ದಂಪತಿಯಿಂದ ಸಂಕಲ್ಪ

    ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಎಚ್.ಟಿ.ನರಸಿಂಹ ದಂಪತಿ ಅವರ ಸಂಕಲ್ಪದೊಂದಿಗೆ ಪೂಜೆ ಆರಂಭಗೊಂಡಿದ್ದು, ಪುರುಷರು ಭಜನೆ ಇತ್ಯಾದಿಯಲ್ಲಿ ಪಾಲ್ಗೊಂಡರೆ, ಮಹಿಳಾ ಸದಸ್ಯರು ವಿಷ್ಣುಸಹಸ್ರನಾಮ ಪಾರಾಯಣದಲ್ಲಿ ಭಾಗಿಯಾದರು.

    ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಾಧ್ಯಕ್ಷ ಬಿ.ಎಸ್. ಮಂಜುನಾಥ, ಅಧ್ಯಕ್ಷ ಎಚ್.ಟಿ.ನರಸಿಂಹ, ಪ್ರಧಾನ ಕಾರ್ಯದರ್ಶಿ ಜಗದೀಶ್, ಖಜಾಂಚಿ ಕುತ್ಪಾಡಿ ಎಂ. ಶೇಖರ್, ಇತರ ಪದಾಧಿಕಾರಿಗಳಾದ ಪ್ರಕಾಶ್ಚಂದ್ರ ಕುತ್ಪಾಡಿ, ಜಿ.ಆರ್. ಚಂದ್ರಯ್ಯ, ವಿಠಲ ಚಾಂತಾರು, ಸಂತೋಷ್ ಕೋಡಿ, ಕೆ.ಎಂ.ಶೇಖರ್, ಪಿ.ಜಿ.ರಾಘವೇಂದ್ರ, ಲಕ್ಷ್ಮೀ ವಿಠಲ್, ಸುಧಾ ಜಗದೀಶ್, ಶಿಲ್ಪಾ ನಾಗೇಶ್, ಶ್ರೀಧರ ನಾಗೂರು, ರಮೇಶ್ ನೇರಳಕಟ್ಟೆ, ರಾಜಾ ಪಡುಕೋಣೆ, ಶ್ರೀವೇಣುಗೋಪಾಲಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ಗೋಪಾಲಕೃಷ್ಣ, ಕಾರ್ಯದರ್ಶಿ ಶೋಭಾ ಮುಂತಾದವರು ಪಾಲ್ಗೊಂಡಿದ್ದರು.

    ಸಂಬಂಧಿತ ಸುದ್ದಿ: ಬಾರ್ಕೂರು ದೇವಸ್ಥಾನದಲ್ಲಿ ಇಂದು-ನಾಳೆ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

    ಸಂಬಂಧಿತ ಸುದ್ದಿ: ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಳದಲ್ಲಿ ವರಮಹಾಲಕ್ಷ್ಮೀಪೂಜೆ, ಋಗುಪಾಕರ್ಮ ಆಚರಣೆ

    ಸಂಬಂಧಿತ ಸುದ್ದಿ: ಗಾಣಿಗ ಯುವಬಳಗ ಆಯೋಜಿಸಿದ್ದ ಮುದ್ದುಕೃಷ್ಣ ಆನ್​ಲೈನ್​ ಸ್ಪರ್ಧೆ ಫಲಿತಾಂಶ ಇಲ್ಲಿದೆ..

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!