Saturday, September 21, 2024
spot_img
More

    Latest Posts

    ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರನ್ನು ಭೇಟಿಯಾದ ಸಜ್ಜನರ್‌

    ಬೆಂಗಳೂರು: ಸೈಬರಾಬಾದ್‌ ಪೊಲೀಸ್‌ ಕಮಿಷನರ್‌ ಆಗಿ ಬಹಳಷ್ಟು ಪ್ರಕರಣಗಳನ್ನು ಭೇದಿಸಿದ್ದಷ್ಟೇ ಅಲ್ಲದೆ, ಸಾಕಷ್ಟು ಹೆಸರನ್ನೂ ಮಾಡಿದ್ದ ಐಪಿಎಸ್‌ ಅಧಿಕಾರಿ ವಿ.ಸಿ. ಸಜ್ಜನರ್‌ ಅವರು ಇತ್ತೀಚೆಗೆ ಟಿಎಸ್‌ಆರ್‌ಟಿಸಿ ಎಮ್‌ಡಿ ಆಗಿ ವರ್ಗಾವಣೆಗೊಂಡಿದ್ದರು.

    ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಟಿಎಸ್‌ಆರ್‌ಟಿಸಿ) ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲವು ದಿನಗಳ ಹಿಂದಷ್ಟೇ ಅಧಿಕಾರ ವಹಿಸಿಕೊಂಡ ಸಜ್ಜನರ್‌, ಆ ಬಳಿಕ ತೆಲಂಗಾಣ ಸಾರಿಗೆ ಸಚಿವ ಅಜಯ್‌ಕುಮಾರ್‌ ಪುವ್ವಡ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು.

    ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಹಾಗೂ ಟಿಎಸ್‌ಆರ್‌ಟಿಸಿ ಎಮ್‌ಡಿ ವಿ.ಸಿ.ಸಜ್ಜನರ್‌ ಅವರ ಭೇಟಿ

    ಆ ಬಳಿಕ ಅಂದರೆ ಕಳೆದ ವಾರ ವಿ.ಸಿ.ಸಜ್ಜನರ್‌ ಅವರು ತೆಲಂಗಾಣದ ಪ್ರಗತಿ ಭವನದಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಟಿಎಸ್‌ಆರ್‌ಟಿಸಿ ನೂತನ ಎಮ್‌ಡಿ ಆಗಿ ಆಗಮಿಸಿದ್ದ ಸಜ್ಜನರ್‌ ಅವರನ್ನು ಸಿಎಂ ಕೆಸಿಆರ್‌ ಅವರು ಅಭಿನಂದಿಸಿ ಶುಭ ಹಾರೈಸಿದರು.

    ಸಿಎಂ ಕೆಸಿಆರ್‌ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಟಿಎಸ್‌ಆರ್‌ಟಿಸಿ ಎಮ್‌ಡಿ ಮತ್ತಿತರ ಅಧಿಕಾರಿಗಳು.

    ನಂತರ ಸಿಎಂ ಕೆಸಿಆರ್‌ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾರಿಗೆ ಸಂಸ್ಥೆಯ ಹಲವು ವಿಚಾರಗಳ ಕುರಿತ ಚರ್ಚೆ ನಡೆಯಿತು. ಸಾರಿಗೆ ಸಂಸ್ಥೆಯನ್ನು ಪುನಃ ಹಳಿಗೆ ತರಲು, ಸಂಸ್ಥೆಯನ್ನು ಮತ್ತಷ್ಟು ಸಶಕ್ತಗೊಳಿಸಲು ಸಂಸ್ಥೆಯು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ಸಿಎಂ ಮೆಚ್ಚುಗೆ ಸೂಚಿಸಿದರು.

    ಸಂಬಂಧಿತ ಸುದ್ದಿ: ಟಿಎಸ್‌ಆರ್‌ಟಿಸಿಯಲ್ಲೂ ಐಪಿಎಸ್‌ ಅಧಿಕಾರಿ ಸಜ್ಜನರ್‌ ಖಾಕಿ ಖದರ್‌!

    ಸಂಬಂಧಿತ ಸುದ್ದಿ: ತೆಲಂಗಾಣದ ಎಡಿಜಿಪಿ ಆಗಿ ಕನ್ನಡಿಗ ವಿ.ಸಿ. ಸಜ್ಜನರ್; ಪೊಲೀಸ್ ಕಮಿಷನರ್ ಆಗಿಯೂ ಮುಂದುವರಿಕೆ

    ಸಂಬಂಧಿತ ಸುದ್ದಿ: ೪೮ ಸಾವಿರ ಸಿಬ್ಬಂದಿಯ ಯೋಗಕ್ಷೇಮವೇ ನನ್ನ ಪ್ರಥಮ ಆದ್ಯತೆ ಎಂದ ಸಜ್ಜನರ್‌

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!