Sunday, September 22, 2024
spot_img
More

    Latest Posts

    ಗಾಂಧಿ ಜಯಂತಿ ಪ್ರಯುಕ್ತ ಮನೆಗೊಂದು ಸಸಿ ವಿತರಿಸಿದ ಗಾಣಿಗ ಮಹಾಸಭಾ

    ಬೆಂಗಳೂರು: ಗಾಂಧಿ ಜಯಂತಿಯಂದು ಮನೆಗೊಂದು ಸಸಿಯನ್ನು ನೀಡುವ ಮೂಲಕ ಮೈಸೂರಿನ ಗಾಣಿಗ ಮಹಾಸಭಾ ಹಾಗೂ ವಾಲಂಟಿಯರ್ಸ್‌ ಆಫ್‌ ಮೈಸೂರು ಮಹಾತ್ಮರ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಿದೆ.

    ಮೈಸೂರಿನ ಗೋಕುಲಂ ಬಡಾವಣೆಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಗಾಂಧಿ ಜಯಂತಿಯಲ್ಲಿ 120ಕ್ಕೂ ಅಧಿಕ ಮಂದಿಗೆ ಮನೆಗೊಂದರಂತೆ ಸಸಿಯನ್ನು ವಿತರಿಸಲಾಗಿದೆ.

    ನಗರ ಪಾಲಿಕೆ ಸದಸ್ಯ ಎಸ್‌ಬಿಎಂ ಮಂಜು, ಡಾ.ತಿಪ್ಪೇಸ್ವಾಮಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು, ಗಾಣಿಗ ಮಹಾಸಭಾ ಅಧ್ಯಕ್ಷ ಡಾ.ಕೆ. ವಿಜಯಕುಮಾರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.‌ ಹೆಚ್ಚು ಹೆಚ್ಚು ಮರ-ಗಿಡಗಳನ್ನು ಬೆಳೆಸುವುದರಿಂದ ಉತ್ತಮ ವಾತಾವರಣ, ಆರೋಗ್ಯ ಸಿಗುವುದಲ್ಲದೆ, ಅಂತರ್ಜಲದ ಮಟ್ಟ ಕೂಡ ಹೆಚ್ಚಾಗುವುದು ಎಂದು ವಿಜಯಕುಮಾರ್ ತಿಳಿಸಿದರು.

    ಮುಖ್ಯ ಅತಿಥಿಗಳಾಗಿ ರೆಡ್‌ ಎಫ್‌ಎಮ್‌ನ ಸುನೀಲ್, ರೈಲ್ವೆ ಬ್ಯಾಂಕ್ ಅಧ್ಯಕ್ಷ ಯತಿರಾಜ್, ಉಪಾಧ್ಯಕ್ಷ ರಾಮನಾದನ್ ಹಾಗೂ ಮಾದೇವ ಗಾಣಿಗ, ಎಚ್‌.ಎಂ. ಮಾದೇವಮೂರ್ತಿ, ರಮೇಶ್, ಎಸ್‌. ಮಂಜುಳಾ ಮತ್ತಿತರರು ಭಾಗವಹಿಸಿದ್ದರು.

    ಗಾಣಿಗ ಮಹಾಸಭಾ ಅಧ್ಯಕ್ಷ ಡಾ.ಕೆ.ವಿಜಯಕುಮಾರ್‌, ವಾಲಂಟಿಯರ್ಸ್‌ ಆಫ್‌ ಮೈಸೂರು ಇದರ ಪ್ರದೀಪ್‌, ಕೃಷ್ಣ ಹಾಗೂ ಪೂರ್ಣಿಮಾ ಅರಸ್‌ ಅವರು ಈ ಕಾರ್ಯಕ್ರಮವನ್ನು ಜಂಟಿಯಾಗಿ ಆಯೋಜಿಸಿದ್ದರು.

    ಸಂಬಂಧಿತ ಸುದ್ದಿ: ಕ್ಯಾಪ್ಟನ್ ಭರತ್ ಯೋಗೇಂದ್ರ: ಆರ್ಮಿ ಸೆಲೆಕ್ಷನ್​ನಲ್ಲಿ ಪ್ರಥಮ ಸ್ಥಾನ, ಬೆಳ್ಳಿ ಪದಕ!

    ಸಂಬಂಧಿತ ಸುದ್ದಿ: ‌ಗಾಣಿಗ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ; ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಭರವಸೆ

    ಸಂಬಂಧಿತ ಸುದ್ದಿ: ಮಾರ್ದನಿಸುತ್ತಿವೆ ಗಾಣಿಗರ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿರುವ ಆ ಮಾತುಗಳು..

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!