Sunday, September 22, 2024
spot_img
More

    Latest Posts

    ಜಸ್ಟ್ ಆಕಸ್ಮಿಕ.. ಇದು ಆಕಾಶವಾಣಿ ಬೆಂಗಳೂರು ನಿಲಯ…

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲೂ ಗಾಣಿಗ ಸಮುದಾಯದ ಪ್ರತಿಭಾವಂತರು ಈಗಾಗಲೇ ಕಾಣಿಸಿಕೊಂಡಿದ್ದು, ಅಂಥವರ ಸಾಲಿನಲ್ಲಿ ಇರುವ ಮತ್ತೊಬ್ಬ ಪ್ರತಿಭೆ ರಣ್‌ವೀರ್ ಪಾಟೀಲ್.

    ʼಜಸ್ಟ್ ಆಕಸ್ಮಿಕʼ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಟನಾಗಿ ಪ್ರವೇಶ ಮಾಡಿದ ಇವರ ಅಭಿನಯದ ಮತ್ತೊಂದು ಸಿನಿಮಾ ಕೆಲವು ದಿನಗಳ ಹಿಂದಷ್ಟೇ ಬಿಡುಗಡೆ ಆಗಿದೆ.

    ‘ಇದು ಆಕಾಶವಾಣಿ ಬೆಂಗಳೂರು ನಿಲಯ’. ಇದು ಇವರ ಅಭಿನಯದ ಎರಡನೇ ಸಿನಿಮಾವಾಗಿದ್ದು, ಅಕ್ಟೋಬರ್ 8ರಂದು ತೆರೆ ಕಂಡಿದೆ. ರಣ್‌ವೀರ್ ಪಾಟೀಲ್ ನಾಯಕ ನಟನಾಗಿ ಅಭಿನಯಿಸಿರುವ ಈ ಚಿತ್ರಕ್ಕೆ ಶಿವನಂದಪ್ಪ ಬಳ್ಳಾರಿ ನಿರ್ಮಾಪಕರಾಗಿದ್ದು, ಹರಿಕೃಷ್ಣ ಅವರ ನಿರ್ದೇಶನವಿದೆ.

    ನಾಯಕ ರಣ್‌ವೀರ್‌ ಪಾಟೀಲ್‌, ನಾಯಕಿ ನಿಖಿತಾ ಸ್ವಾಮಿ

    ನಿಖಿತಾ ಸ್ವಾಮಿ ನಾಯಕಿಯಾಗಿ ಅಭಿನಯಿಸಿದ್ದು, ಸುಚೇಂದ್ರ ಪ್ರಸಾದ್, ಟೆನಿಸ್ ಕೃಷ್ಣ, ನಾಗೇಂದ್ರ ಶಾ ಮುಂತಾದವರು ತಾರಾಗಣದಲ್ಲಿದ್ದಾರೆ. ಈ ಚಿತ್ರಕ್ಕೆ ಎ.ಟಿ. ರವೀಶ್ ಸಂಗೀತ ಸಂಯೋಜಿಸಿದ್ದು, ಪ್ರವೀಣ್ ಶೆಟ್ಟಿ ಅವರ ಛಾಯಾಗ್ರಹಣ, ಪವನ್ ಗೌಡ ಅವರ ಸಂಕಲನವಿದೆ.

    ಚಿತ್ರತಂಡದ ಜೊತೆ ಸುದ್ದಿಗೋಷ್ಠಿಯಲ್ಲಿ ರಣ್‌ವೀರ್‌ ಪಾಟೀಲ್

    ಉತ್ತರ ಕರ್ನಾಟಕದ ಹುನಗುಂದ ತಾಲೂಕು ಬನಿಹಟ್ಟಿ ಗ್ರಾಮದ ಗಾಣಿಗ ಸಮುದಾಯದ ಈ ಪ್ರತಿಭೆಗೆ ಹುನಗುಂದ ಹಾಗೂ ಇಳಕಲ್ಲ ಗಾಣಿಗ ಸಮಾಜದ ಅಧ್ಯಕ್ಷ ನಿಂಗಪ್ಪ ಮಾ ಅಮರಾವತಿ, ಕಾಂಗ್ರೆಸ್ ಮುಖಂಡ ಅಯ್ಯನಗೌಡ ಶೇ ಲಕ್ಕಿಹಾಳ, ಶರಣು ಲೆಕ್ಕಿಹಾಳ, ಬಸವರಾಜ ಸಜ್ಜನ ಮುಂತಾದವರು ಶುಭ ಹಾರೈಸಿದ್ದಾರೆ.

    ಚಿತ್ರಬಿಡುಗಡೆಯ ಮೊದಲ ದಿನ ಟಾಕೀಸ್‌ ಬಳಿ ಗ್ರಾಮಸ್ಥರ ಸಂಭ್ರಮ

    ಸಂಬಂಧಿತ ಸುದ್ದಿ: ಮೊದಲ ಸಿನಿಮಾದಲ್ಲೇ ನಿತಿನ್​ ಗಾಣಿಗ ಬೆಸ್ಟ್ ವಿಲನ್​; ಲೊಕಾರ್ನೊ ಫಿಲ್ಮ್​ ಫೆಸ್ಟ್​​ನಲ್ಲಿ ಆಯ್ಕೆ

    ಸಂಬಂಧಿತ ಸುದ್ದಿ: ‘ಎಡಗೈ’ಗೆ ಹಣ ಹಾಕಿದ ಗುರುದತ್ ಗಾಣಿಗ; ‘ಅಪಘಾತ’ಕ್ಕೆ ಕಾರಣವನ್ನೂ ಬಿಚ್ಚಿಟ್ಟರು..

    ಸಂಬಂಧಿತ ಸುದ್ದಿ: ಬೇವು-ಬೆಲ್ಲದ ಜೊತೆ ಮನ(ನು)ರಂಜಿಸಿದ ಟೀಸರ್

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!