ಬೆಂಗಳೂರು: ಯೂತ್ ಗಾಣಿಗ ಕುಮಟಾ ಸಂಘಟನೆಯವರು ಹಮ್ಮಿಕೊಂಡಿರುವ ಗಾಣಿಗ ಪ್ರೀಮಿಯರ್ ಕಪ್-2022 ಪಂದ್ಯಾವಳಿಯು ಇದೇ ಜನವರಿ 22 ಮತ್ತು 23ರಂದು ನಡೆಯಲಿದೆ. ಇದು ಯೂತ್ ಗಾಣಿಗ ಆಯೋಜಿಸುತ್ತಿರುವ ನಾಲ್ಕನೇ ವರ್ಷದ ಪಂದ್ಯಾವಳಿಯಾಗಿದೆ.
ಗಾಣಿಗ ಸಮಾಜದವರಿಗೆ ಸೀಮಿತವಾಗಿ ಈ ಪಂದ್ಯಾವಳಿ ನಡೆಯಲಿದ್ದು, ವಿಶೇಷ ಆಕರ್ಷಣೆಯಾಗಿ ಲೂಡೋ ಕಿಂಗ್ ಲೂಡೋ ಮ್ಯಾಚ್ ಮತ್ತು ಮಹಿಳೆಯರಿಗಾಗಿ ಸಂಗೀತ ಕುರ್ಚಿ ಸ್ಪರ್ಧೆ ಕೂಡ ಇರಲಿದೆ. ಲೂಡೋ ಕಿಂಗ್ನಲ್ಲಿ 16 ವರ್ಷದೊಳಗಿನ ಹುಡುಗರು ಮಾತ್ರ ಭಾಗವಹಿಸಬಹುದು. ಆದರೆ ಮಹಿಳೆಯರಿಗೆ ವಯಸ್ಸಿನ ನಿರ್ಬಂಧವಿಲ್ಲ.
ಗಾಣಿಗ ಪ್ರೀಮಿಯರ್ ಕಪ್-2022ರ ಪ್ರಥಮ ಬಹುಮಾನವಾಗಿ 35,555 ರೂಪಾಯಿ ಹಾಗೂ ದ್ವಿತೀಯ ಬಹುಮಾನವಾಗಿ 25,555 ರೂಪಾಯಿ ನಗದು ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ .
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರ್ಗಳನ್ನು ಸಂಪರ್ಕಿಸಬಹುದು.
- ಆನಂದ ಕೆಕ್ಕಾರ್: 8746939999
- ಗಣಪತಿ ಶೆಟ್ಟಿ: 9742919507
- ಸುಬ್ರಹ್ಮಣ್ಯ ಶೆಟ್ಟಿ: 9739550108
ಸಂಬಂಧಿತ ಸುದ್ದಿ: ಭಾರತದ ಬಲಾಢ್ಯ ಪುರುಷನ ಬಾಲರ್ಕಕ್ಕೀಗ ಮತ್ತೊಂದು ತಾಣ, ಮತ್ತಷ್ಟು ತ್ರಾಣ…
ಸಂಬಂಧಿತ ಸುದ್ದಿ: ಸಮುದಾಯದ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯ ಶ್ಲಾಘನೀಯ; ವಿಶ್ವ ಗಾಣಿಗರ ಚಾವಡಿಗೆ ಶಾಸಕ ಡಾ. ಭರತ್ ಶೆಟ್ಟಿ ಮೆಚ್ಚುಗೆ
ಸಂಬಂಧಿತ ಸುದ್ದಿ: ಕಿಕ್ ಬಾಕ್ಸಿಂಗ್ನಲ್ಲಿ ಗೆದ್ದ ಈ ಅವಳಿ ಸೋದರಿಯರು ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ