Saturday, September 21, 2024
spot_img
More

    Latest Posts

    ಏಪ್ರಿಲ್‌ 14ರಂದು ಯುವ ಮಾನಸ ಗಾಣಿಗ ಟ್ರಸ್ಟ್‌ ಉದ್ಘಾಟನೆ

    ಬೆಂಗಳೂರು:  ಗಾಣಿಗ ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಉದಾತ್ತ ಉದ್ದೇಶದಿಂದ ಸ್ಥಾಪಿಸಲಾಗಿರುವ ಯುವ ಮಾನಸ ಗಾಣಿಗ ಎಜುಕೇಷನಲ್‌ ಆ್ಯಂಡ್ ಚಾರಿಟೇಬಲ್‌ ಟ್ರಸ್ಟ್‌ (ರಿ.) ಏಪ್ರಿಲ್‌ 14ರಂದು ಉದ್ಘಾಟನೆಯಾಗಲಿದೆ.

    ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆಮ್ಮಾಡಿಯ ಕಟ್‌ಬೇಲ್ತೂರಿನಲ್ಲಿರುವ ಶ್ರೀರಾಮಲಕ್ಷ್ಮಣ ಸಭಾಭವನದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ದಿನಕರ ಶೆಟ್ಟಿ ಅವರು ಟ್ರಸ್ಟ್‌ ಉದ್ಘಾಟನೆ ನೆರವೇರಿಸಲಿದ್ದಾರೆ. ಯುವ ಮಾನಸ ಗಾಣಿಗ ಎಜುಕೇಷನಲ್‌ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ.) ಅಧ್ಯಕ್ಷ ಎಚ್. ಸುಬ್ಬಯ್ಯ ಗಾಣಿಗ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

    ಅತಿಥಿ: ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಶ್ರೀಗಾಣಿಗ ಎಜುಕೇಷನಲ್‌ ಆ್ಯಂಡ್ ಚಾರಿಟಬಲ್‌ ಟ್ರಸ್ಟ್‌ನ ಸಂಸ್ಥಾಪಕ ಟ್ರಸ್ಟೀ ಆರ್. ನಾಗರಾಜ ಶೆಟ್ಟಿ, ಪ್ರಾಥಮಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಬಿ.ಕೆ. ಬಸವರಾಜ, ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜ (ರಿ.) ಅಧ್ಯಕ್ಷ ವಾಸುದೇವ ಬೈಕಾಡಿ, ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜ (ರಿ.) ಗೌರವಾಧ್ಯಕ್ಷ ಬಿ.ಎಸ್. ಮಂಜುನಾಥ, ಕುಂದಾಪುರ ತಾಲೂಕು ಗಾಣಿಗಾ ಸೇವಾ ಸಂಘ (ರಿ.) ಅಧ್ಯಕ್ಷ ಪ್ರಭಾಕರ ಕುಂಭಾಶಿ, ಉತ್ತರಕನ್ನಡ ಜಿಲ್ಲಾ ಗಾಣಿಗ ಸಂಘ (ರಿ.) ಅಧ್ಯಕ್ಷ ದಾಮೋದರ ಕೆ. ಶೆಟ್ಟಿ, ಶಿವಮೊಗ್ಗ ಜಿಲ್ಲಾ ಗಾಣಿಗ ಸಂಘ (ರಿ.) ಅಧ್ಯಕ್ಷ ನಾಗರಾಜ, ಶಿರಸಿಯ ಕೆಡಿಸಿಸಿ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಎಸ್.ಪಿ. ಶೆಟ್ಟಿ, ಬೆಂಗಳೂರಿನ ಶ್ರೀ ವೇಣುಗೋಪಾಲಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ. ಗೋಪಾಲಕೃಷ್ಣ, ಸಂಪರ್ಕ ಸುಧಾ ಸಂಪಾದಕ ರಘುರಾಮ ಬೈಕಾಡಿ, ಹಂಗಾರಕಟ್ಟೆ ಚೇತನಾ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಗಣೇಶ ಚೆಲ್ಲಿಮಕ್ಕಿ, ಬೈಂದೂರು ವಲಯ ಗಾಣಿಗ ಯುವ ಸಂಘಟನೆ ಅಧ್ಯಕ್ಷ ಗಣೇಶ ಗಾಣಿಗ, ಉದ್ಯಮಿ  ಸೂರ್ಯನಾರಾಯಣ ಜಡ್ಡಿನಹಿತ್ಲು, ಉಡುಪಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಗರಾಜ ಮಾಲ್ತಾರು, ಹೊನ್ನಾವರ ಬಾಸ್ಕೇರಿಯ ಜೀವನ್ ಸುಪಾರಿಯ ಸುರೇಶ ಶೆಟ್ಟಿ ಅತಿಥಿಗಳಾಗಿ ಆಗಮಿಸಲಿದ್ದಾರೆ.

    ಸನ್ಮಾನ: ಬೆಂಗಳೂರಿನ ಜಯದೇವ ಆಸ್ಪತ್ರೆಯ ಹೃದಯ ತಜ್ಞ ಡಾ.ಎಸ್. ಎಂ. ಜೈಕುಮಾರ, ಬೈಂದೂರು ಪೋಲಿಸ್ ಠಾಣೆಯ ಸರ್ಕಲ್‌ ಇನ್‌ಸ್ಪೆಕ್ಟರ್‌ ಸಂತೋಷ್‌ ಕಾಣಿ, ಕುಮಟಾ ಸಹಕಾರ ಸಂಘಗಳ ಸಹಾಯಕ ನಿಬಂಧಕರು ನಾಗಭೂಷಣ ಕಲ್ಮನೆ, ‘ಯಕ್ಷ ಸಿರಿ’ ಪ್ರಶಸ್ತಿ ಪುರಸ್ಕೃತ ಆಜ್ರಿ ಗೋಪಾಲ ಗಾಣಿಗ, ರಾಜ್ಯ ಮಾನವ ಹಕ್ಕು ಆಯೋಗ ಕಾರ್ಯದರ್ಶಿ ದಿನೇಶ ಕೋಟ, ಸಾಗರದ ಹಿರಿಯ ವಕೀಲ-ಪತ್ರಕರ್ತ ಎಂ. ರಾಘವೇಂದ್ರ, ಮಣಿಪಾಲ ಎಮ್‌ಐಟಿಯ ಡಾ.ಪೂರ್ಣಿಮಾ ಪಾಂಡುರಂಗ ಕುಂದಾಪುರ, ಭದ್ರಾವತಿ ವಿಐಎಸ್ಎಲ್‌ನ ನಿವೃತ್ತ ಇಂಜಿನಿಯರ್‌ ಕುಸುಮಾಕರ, ಮುಂಬೈನ ಡಾ.ರಕ್ಷಾ ರತ್ನಾಕರ ಗಾಣಿಗ, ಅಂತಾರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟರ್‌ ವಿಶ್ವನಾಥ ಭಾಸ್ಕರ ಗಾಣಿಗ, ಬೈಂದೂರಿನ ಡಾ.ಸರಸ್ವತಿ, ಉಡುಪಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಶ್ರೀಧರ ಗಾಣಿಗ, ಉಡುಪಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶೇಖರ ಗಾಣಿಗ ಬೀಜಮಕ್ಕಿ, ಚಿತ್ರಕಲಾ ಕಲಾವಿದ ತಗ್ಗರ್ಸೆ ಗಿರೀಶ ಗಾಣಿಗ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.

    ಪುಸ್ತಕ ಲೋಕಾರ್ಪಣೆ: ಯುವ ಮಾನಸ ಗಾಣಿಗ ಎಜುಕೇಷನಲ್‌ ಆ್ಯಂಡ್ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ, ಶಿವಮೊಗ್ಗದ ಎಚ್. ಸುಬ್ಬಯ್ಯ ಗಾಣಿಗರು ಬರೆದಿರುವ ಹಾಗೂ ಜನಪ್ರತಿನಿಧಿ ಪ್ರಕಾಶನ ಪ್ರಕಟಿಸಿರುವ ʼಉತ್ತರದ ಸನ್ನಿಧಿʼ ಪುಸ್ತಕವನ್ನು ಕನ್ನಡಪ್ರಭದ ನಿವೃತ್ತ ಹಿರಿಯ ಸುದ್ದಿ ಸಂಪಾದಕ ಡಾ.ಎಂ. ವಾಸುದೇವ ಶೆಟ್ಟಿಯವರು ಬೆಳಗ್ಗೆ 11 ಗಂಟೆಗೆ ಲೋಕಾರ್ಪಣೆ ಮಾಡಲಿದ್ದಾರೆ.

    ಸಮಾರೋಪ ಸಮಾರಂಭ: ಬಳಿಕ ಯುಪಿಎಸ್‌ಸಿ-ಕೆಪಿಎಸ್‌ಸಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯುವುದು ಹೇಗೆ ಎನ್ನುವ ಕುರಿತು ಸಾಧನಾ ಅಕಾಡೆಮಿಯ ಬಿ. ಮಂಜುನಾಥ ಅವರು ಉಪನ್ಯಾಸ ನೀಡಲಿದ್ದಾರೆ.  ಮಧ್ಯಾಹ್ನ 3 ರಿಂದ ಟ್ರಸ್ಟ್ ವಿಚಾರವಾಗಿ ವಿಚಾರ ಗೋಷ್ಠಿ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.

    ಸಂಬಂಧಿತ ಸುದ್ದಿ: ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳಿಗಾಗಿ ಯುವ ಮಾನಸ ಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಸ್ಥಾಪನೆ

    ಸಂಬಂಧಿತ ಸುದ್ದಿ: ಶ್ರೀ ಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್‌ ನೂತನ ಅಧ್ಯಕ್ಷರಾಗಿ ಆರ್.‌ ನಾಗರಾಜ ಶೆಟ್ಟಿ ಮರು ಆಯ್ಕೆ

    ಸಂಬಂಧಿತ ಸುದ್ದಿ: ಇಂದಿನ ನ್ಯಾಷನಲ್ ಕಾಲೇಜನ್ನು ಆರಂಭಿಸಿದ್ದು ಅಂದಿನ ದೊಡ್ಡಣ್ಣ ಶೆಟ್ಟರೇ..

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!