Sunday, September 22, 2024
spot_img
More

    Latest Posts

    ಯುಗಾದಿ ಕವನ: ಹರುಷದಿ ಹೊಮ್ಮಿದೆ…

    ಯುಗಾದಿ ಹಬ್ಬ ಬಂದಿತಮ್ಮ

    ಮನೆಮನೆಗೆ ಹಬ್ಬ ತಂದಿತಮ್ಮ

    ಸಡಗರ-ಸಂಭ್ರಮ ಬಂತಮ್ಮ              

    ಹೊಸವರುಷಕೆ ಕಾಲಿಟ್ಟಿತಮ್ಮ..

     ಬೇವು-ಬೆಲ್ಲವನ್ನು ಸವಿಯುತ

     ಮಕ್ಕಳು ಮನೆಮಂದಿ ಮೆಲ್ಲುತ

     ಸಂಗಡದಿ ನಾವು ಸಡಗರದತ್ತ

     ಪ್ರಕೃತಿಯ ವಿಸ್ಮಯವು ಎನ್ನುತ..

    ತಳಿರು ತೋರಣದಿ ಅಲಂಕರಿಸಿ

    ಮನೆಯ ಬಾಗಿಲ ಸಿಂಗಾರಗೊಳಿಸಿ

    ಮಾವಿನ ತುಂಬೆಲ್ಲ ಹಚ್ಚ ಹಸಿರು

    ಹಬ್ಬದಿ ಮನೆಯಲ್ಲೆಲ್ಲ ಶೋಭಿಸಿಹರು..

    ಚೈತ್ರ ಮಾಸವಿದು ಬಂದಮೇಲೆ

    ಮಾವಿನ ಮರದಲಿ ಚಿಗುರೆಲೆ

    ಬೇವು ಕಹಿಯಾದರೂ ಸವಿಯುತ್ತಲೇ

    ಹರುಷದಿ ಹೊಮ್ಮಿದೆ ಪದಮಾಲೆ…

    | ಯಶೋದ ಗಾಣಿಗ, ಗೃಹಿಣಿ, ಕುಂದಾಪುರ.

    ಸಂಬಂಧಿತ ಸುದ್ದಿ: ಕವನ: ಶಿವಭಕ್ತಿ- ಜಪಿಸುವೆವು ಮಂತ್ರ ಓಂ ನಮಃ ಶಿವಾಯ

    ಸಂಬಂಧಿತ ಸುದ್ದಿ: ಪ್ರಧಾನಿ ಮೋದಿ ಕುರಿತೊಂದು ಕವನ, ಬರೆದರೀ ಸಜ್ಜನ…

    ಸಂಬಂಧಿತ ಸುದ್ದಿ: ಕೇರಳದ ಕವಯಿತ್ರಿ ಸಜಿನಿ ಮನೋಜ್‌ ಅವರ ಕವನಸಂಕಲನ ಬಿಡುಗಡೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!