Sunday, September 22, 2024
spot_img
More

    Latest Posts

    ತಮ್ಮೂರ ಜನತೆಗೆಂದೇ ಒಂದು ದಿನ ಮೀಸಲಿಟ್ಟ ಡಾ. ಶರತ್‌ ಬಾಳೆಮನೆ..

    ಬೆಂಗಳೂರು: ಮಂಗಳೂರಿನ ಯೆನಪೋಯ ಯೂನಿವರ್ಸಿಟಿಯಲ್ಲಿ ಅಸಿಸ್ಟೆಂಟ್‌ ಪ್ರೊಫೆಸರ್‌ ಹಾಗೂ ಖ್ಯಾತ ಎಲುಬುತಜ್ಞರೂ ಆಗಿರುವ ಡಾ. ಶರತ್‌ ಬಾಳೆಮನೆ ತಮ್ಮ ಊರ ಜನರಿಗೆಂದೇ ಒಂದು ದಿನವನ್ನು ಮೀಸಲಿಟ್ಟಿದ್ದಾರೆ.

    ಅಂದರೆ ಖ್ಯಾತ ವೈದ್ಯರಾಗಿರುವ ಇವರ ಸೇವೆ ಇನ್ನುಮುಂದೆ ಊರಿನ ಜನತೆಗೂ ಸುಲಭದಲ್ಲಿ ಲಭ್ಯವಿರಲಿದ್ದು, ಅದಕ್ಕೆಂದೇ ಇವರು ತಿಂಗಳಲ್ಲಿ ಒಂದು ದಿನ ಸಂದರ್ಶನಕ್ಕೆ ಸಿಗಲಿದ್ದಾರೆ.

    ಗಾಣಿಗ ಸಮಾಜದವರಾದ ಡಾ. ಶರತ್ ಬಾಳೆಮನೆ ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿರುವ ಪರಿಜ್ಞಾನ ನರ್ಸಿಂಗ್‌ ಹೋಮ್‌ನಲ್ಲಿ ಪ್ರತಿ ತಿಂಗಳ ಮೂರನೇ ಸೋಮವಾರ ಸೇವೆಗೆ ಲಭ್ಯ ಇರಲಿದ್ದಾರೆ.

    ಈ ಸಂದರ್ಭದಲ್ಲಿ ಸ್ಥಳೀಯ ಸಮಾಜಬಾಂಧವರು, ಸುತ್ತಮುತ್ತಲಿನ ಜನತೆ ಇವರನ್ನು ಸುಲಭದಲ್ಲಿ ಸಂಪರ್ಕಿಸಿ, ಆರೋಗ್ಯ ಸಲಹೆ, ತಪಾಸಣೆ, ಚಿಕಿತ್ಸೆ ಪಡೆದುಕೊಳ್ಳಬಹುದು. 

    ಈ ಹಿನ್ನೆಲೆಯಲ್ಲಿ ಕುಮಟಾ ಗಾಣಿಗ ಯುವ ಬಳಗ (ರಿ.) ಪದಾಧಿಕಾರಿಗಳು ಡಾ.ಶರತ್‌ ಬಾಳೆಮನೆ ಅವರನ್ನು ಭೇಟಿಯಾಗಿ ಶುಭ ಹಾರೈಸಿ ಧನ್ಯವಾದ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಡಾ. ಶರತ್ ಬಾಳೆಮನೆ, ಡಾ. ಶಶಾಂಕ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ಮತ್ತು ಗಾಣಿಗ ಯುವ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಸಂಬಂಧಿತ ಸುದ್ದಿ: ಚಾಮರಾಜಪೇಟೆ ಸಮಸ್ಯೆ ಪರಿಹಾರ; ಸಿಆರ್‌ಡಬ್ಲ್ಯುಎ ಪಾತ್ರ ಮಹತ್ತರ

    ಸಂಬಂಧಿತ ಸುದ್ದಿ: ಶಾಸಕ ದಿನಕರ ಶೆಟ್ಟಿ ಅವರಿಂದ ಗಾಣಿಗ ಮಹಾಸಭಾದ ದಿನದರ್ಶಿಕೆ ಬಿಡುಗಡೆ

    ಸಂಬಂಧಿತ ಸುದ್ದಿ: ನ್ಯಾಷನಲ್‌ ಪವರ್‌ಲಿಫ್ಟಿಂಗ್‌ನಲ್ಲಿ ವೈಯಕ್ತಿಕ ದಾಖಲೆ, ಚಿನ್ನದ ಪದಕದ ಜೊತೆಗೆ ಚಾಂಪಿಯನ್‌ ಆದ ವಿಶ್ವನಾಥ್‌

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!