Sunday, September 22, 2024
spot_img
More

    Latest Posts

    ನಮ್ರತಾಗೆ ಕರ್ನಾಟಕ ವಿವಿಯಿಂದ 5 ಚಿನ್ನದ ಪದಕ, ರಾಜ್ಯಪಾಲರಿಂದ ಪ್ರದಾನ..

    ಬೆಂಗಳೂರು: ಧಾರವಾಡದಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ನಮ್ರತಾ ಉದಯ ಶೆಟ್ಟಿ ಸ್ನಾತಕೋತ್ತರ ಪದವಿಯಲ್ಲಿ ಐದು ಚಿನ್ನದ ಪದಕಗಳನ್ನು ಗಳಿಸಿದ್ದು, ರಾಜ್ಯಪಾಲರಿಂದ ಪದಕಗಳನ್ನು ಸ್ವೀಕರಿಸಿದರು.

    ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ರಾಜ್ಯಪಾಲ  ಥಾವರಚಂದ್‌ ಗೆಹ್ಲೋಟ್‌ ಅವರು ನಮ್ರತಾಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು. ನಮ್ರತಾ ಇಲ್ಲಿ ಎಂಎಸ್‌ಸಿ ಸಸ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ  ಪದವಿ ಪಡೆದಿದ್ದಾರೆ.

    ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್‌ ಅವರಿಂದ ನಮ್ರತಾಗೆ ಪದವಿ ಹಾಗೂ ಚಿನ್ನದ ಪದಕ ಪ್ರದಾನ.

    ಇವರು ಉತ್ತರಕನ್ನಡ ಜಿಲ್ಲೆಯ ಮಂಕಿ ದೇವರಗದ್ದೆಯ ಗೀತಾ-ಉದಯ ನಾರಾಯಣ ಶೆಟ್ಟಿ ದಂಪತಿಯ ಪುತ್ರಿ. ಇವರು ಮುರ್ಡೇಶ್ವರದ ಆರ್‌ಎನ್‌ಎಸ್‌ ವಿದ್ಯಾನಿಕೇತನದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪದವಿಪೂರ್ವ ವ್ಯಾಸಂಗ ಮಾಡಿದ್ದು, ಹೊನ್ನಾವರದ ಎಸ್‌ಡಿಎಮ್‌ ಮಹಾವಿದ್ಯಾಲಯದಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ನಮ್ರತಾಗೆ ಕುಮಟಾದ ಗಾಣಿಗ ಯುವ ಬಳಗ (ರಿ.) ಅಭಿನಂದನೆಗಳನ್ನು ಸಲ್ಲಿಸಿದೆ.

    ನಮ್ರತಾ ಗಳಿಸಿರುವ ಚಿನ್ನದ ಪದಕಗಳು

    ಸಂಬಂಧಿತ ಸುದ್ದಿ: ಕುಮಟಾದಲ್ಲಿ ವಿಸ್ಟಾಡೋಮ್​ ರೈಲನ್ನು ಸ್ವಾಗತಿಸಿದ ಶಾಸಕ ದಿನಕರ ಶೆಟ್ಟಿ

    ಸಂಬಂಧಿತ ಸುದ್ದಿ: ಅಪಘಾತಕ್ಕೆ ಒಳಗಾದವರಿಗೆ ಗಾಣಿಗ ಯುವ ಬಳಗ ಮತ್ತು ಸಮಾಜ ಬಾಂಧವರಿಂದ ಸಹಾಯ

    ಸಂಬಂಧಿತ ಸುದ್ದಿ: ಸಂಕಷ್ಟದಲ್ಲಿರುವವರ ಮನೆಗೆ ಗಾಣಿಗ ಸಮಾಜದ ಮುಖಂಡರ ಭೇಟಿ, ನೆರವಿನ ಅಭಯ..

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!