Sunday, September 22, 2024
spot_img
More

    Latest Posts

    ಎಸ್‌ಜಿಇಸಿಟಿ-ಆಸ್ರಾದಿಂದ ನಡೆಯಿತು ಗ್ರಾಹಕ ಜಾಗೃತಿ ಕಾರ್ಯಕ್ರಮ

    ಬೆಂಗಳೂರು: ಶ್ರೀಗಾಣಿಗ ಎಜುಕೇಷನಲ್‌ ಆ್ಯಂಡ್ ಚಾರಿಟಬಲ್‌ ಟ್ರಸ್ಟ್‌ (ಎಸ್‌ಜಿಇಸಿಟಿ) ಮತ್ತು ಸರ್ಕಾರೇತರ ಸಂಸ್ಥೆ ಆಸ್ರಾ (AASRAA- ಅಡ್ವೊಕೇಟ್‌ ಅಸೋಸಿಯೇಷನ್‌ ಫಾರ್‌ ಸೋಷಿಯಲ್‌ ರೆಸ್ಪಾನ್ಸಿಬಿಲಿಟಿ ಆ್ಯಂಡ್ ಅವೇರ್‌ನೆಸ್‌) ಸಹಯೋಗದಲ್ಲಿ ಇಂದು ಗ್ರಾಹಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ‘ಖರೀದಿಸುವ ಮೊದಲು ನಿಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಿ’ ಎಂಬ ವಿಷಯಾಧಾರಿತವಾಗಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮ, ಬೆಂಗಳೂರಿನ ಮಹಾಲಕ್ಷ್ಮೀ ಬಡಾವಣೆಯಲ್ಲಿ ಇರುವ ಎಸ್‌ಜಿಇಸಿಟಿ ಅಕಾಡೆಮಿಯಲ್ಲಿ ಇಂದು ನಡೆಯಿತು.

    ನಿವೃತ್ತ ಕೆಎಎಸ್‌ ಅಧಿಕಾರಿ, ಎಸ್‌ಜಿಇಸಿಟಿ ಸಂಸ್ಥಾಪಕ ಟ್ರಸ್ಟೀ ಆರ್‌. ನಾಗರಾಜ ಶೆಟ್ಟಿ, ಕಾರ್ಯಾಧ್ಯಕ್ಷರಾದ ಕೆ.ಎಂ. ನಾರಾಯಣಪ್ಪ, ಸೋಮಶೇಖರ್‌, ಸಂಘಟನಾ ಕಾರ್ಯದರ್ಶಿ ಪ್ರಮೀಳಾ ಮೂರ್ತಿ ಮತ್ತಿತರ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

    ಆಸ್ರಾದ ಅಮರ್‌ ಸಂದೀಪ್‌ ಅವರಿಗೆ ನಾಗರಾಜ ಶೆಟ್ಟಿ ಅವರಿಂದ ಸನ್ಮಾನ.

    ನಾಗರಾಜ್‌ ಶೆಟ್ಟಿ ಅವರು ಈ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಹಕರು ತಮ್ಮ ಹಕ್ಕುಗಳನ್ನು ಅರಿತಿರಬೇಕು, ಏನಾದರೂ ಅನ್ಯಾಯವಾದಲ್ಲಿ ಗ್ರಾಹಕ ನ್ಯಾಯಾಲಯವನ್ನು ಸಂಪರ್ಕಿಸಬೇಕು, ಅಲ್ಲಿ ನ್ಯಾಯ ಸಿಗುವ ಜೊತೆಗೆ ಪರಿಹಾರ ಕೂಡ ಒದಗಿಸುತ್ತಾರೆ ಎಂದು ಹೇಳಿದರು.

    ಆಸ್ರಾ ಉಪಾಧ್ಯಕ್ಷ ಅಮರ್‌ ಸಂದೀಪ್‌ ಅವರು ಗ್ರಾಹಕ ಜಾಗೃತಿಯ ವಿಷಯಗಳನ್ನು ಮಂಡಿಸಿದರು. ಅಲ್ಲದೆ ಕೆಲವು ಪ್ರಕರಣಗಳನ್ನು ಉಲ್ಲೇಖಿಸಿ ಉದಾಹರಣೆ ಸಹಿತ ಮಾಹಿತಿಗಳನ್ನು ತಿಳಿಸಿದರು. ಪ್ರಮೀಳಾ ಮೂರ್ತಿ ವಂದನಾರ್ಪಣೆ ಸಲ್ಲಿಸಿದರು.

    ಸಂಬಂಧಿತ ಸುದ್ದಿ: ಎಸ್‌ಜಿಇಸಿಟಿ ಅಕಾಡೆಮಿಗೆ ಪ್ರವೇಶಾತಿ ಆರಂಭ; ಹೀಗಿದೆ ಕೊಡುಗೆ…

    ಸಂಬಂಧಿತ ಸುದ್ದಿ: ಗಾಣಿಗ ಯುವ ಬಳಗದಿಂದ ಪ್ರತಿಭಾ ಪುರಸ್ಕಾರ, ಸ್ನೇಹಿತರ ದಿನಾಚರಣೆ

    ಸಂಬಂಧಿತ ಸುದ್ದಿ: ಬಾಲರ್ಕ ಫಿಟ್‌ನೆಸ್‌ ಟೀಮ್‌ ಚಾಂಪಿಯನ್‌; ಬಾಲರ್ಕ ಪವರ್‌ಲಿಫ್ಟರ್ಸ್‌ ಸ್ಟ್ರಾಂಗ್‌..

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!