Saturday, September 21, 2024
spot_img
More

    Latest Posts

    ಮುಂಬೈಯಲ್ಲಿ ನಡೆಯಿತು ಶ್ರೀ ಉಳ್ಳಾಲ್ತಿ ಧರ್ಮ ಅರಸು ಕ್ಷೇತ್ರದ ಜೀರ್ಣೋದ್ಧಾರ ಸಭೆ

    ಬೆಂಗಳೂರು: ಮಂಗಳೂರಿನ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸು ದೇವಸ್ಥಾನದ ಜೀರ್ಣೋದ್ಧಾರ ಸಭೆ ಮುಂಬೈನಲ್ಲಿ ಕೂಡ ನಡೆದಿದ್ದು, ನಿಧಿ ಸಂಚಯನಕ್ಕೆ ಅಲ್ಲಿಯೂ ಚಾಲನೆ ಸಿಕ್ಕಿದೆ. ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸಭೆ ಆಗಸ್ಟ್‌ 7ರಂದು ಮುಂಬೈನ ಕುರ್ಲಾ ಪೂರ್ವದ ಬಂಟರ ಸಂಘದ ಶ್ರೀಮತಿ ರಂಜನಿ ಸುಧಾಕರ ಹೆಗ್ಡೆ ಸಮಾಜ ಕಲ್ಯಾಣ ಭವನದಲ್ಲಿ ನಡೆಯಿತು.

    ಕ್ಷೇತ್ರದ ದೈವಜ್ಞರಾದ ವೇದಮೂರ್ತಿ ಶ್ರೀ ರಂಗ ಐತಾಳ್ ಕದ್ರಿ ದೀಪ ಪ್ರಜ್ವಲಿಸಿ ಜೀರ್ಣೋದ್ಧಾರ ಸಭೆಗೆ ಚಾಲನೆ ನೀಡಿದರು. ಮುಂಬಯಿ ಸಾಫಲ್ಯ ಸೇವಾ ಸಂಘದ ಅಧ್ಯಕ್ಷ, ಶ್ರೀ ಉಳ್ಳಾಲ್ತಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರೂ ಆಗಿರುವ ಶ್ರೀನಿವಾಸ ಪಿ. ಸಾಫಲ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು. ಕ್ಷೇತ್ರದ ಧರ್ಮದರ್ಶಿ, ದರ್ಶನ ಪಾತ್ರಿ ದೇವು ಮೂಲ್ಯಣ್ಣ ಅವರು ಶುಭ ನುಡಿಗಳನ್ನಾಡಿ ಆಶೀರ್ವದಿಸಿ ಕ್ಷೇತ್ರದ ನಿಧಿ ಸಂಚಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮುಂಬೈ ಬಂಟ್ಸ್‌ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ, ಕನ್ನಡ ಜಾನಪದ ಪರಿಷತ್ತು ಬೆಂಗಳೂರು ಇದರ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಡಾ.ಆರ್‌.ಕೆ. ಶೆಟ್ಟಿ, ಶ್ರೀ ಉಳ್ಳಾಲ್ತಿ ಕ್ಷೇತ್ರ ಸಮಿತಿ ಅಧ್ಯಕ್ಷ ಟಿ. ರಮೇಶ್ ಮೆಂಡನ್, ಪ್ರಧಾನ ಕಾರ್ಯದರ್ಶಿ ಸುಂದರ ಉಳಿಯ, ಕೋಶಾಧಿಕಾರಿ ರಾಜೇಶ್ ಉಳಿಯ, ಸೋಮನಾಥ ದೇವಸ್ಥಾನ ಮಂಗಳೂರು ಇದರ ಟ್ರಸ್ಟಿ ರಾಮದಾಸ್ ಸೋಮೇಶ್ವರ್, ಹರ್ಷ ಡೆವೆಲಪರ್‌ನ ಮಾಲೀಕ ಹರೀಶ್ ಕುಮಾರ್ ಕುತ್ತಾರ್, ಮುಂಬೈ ಸಜ್ಜನ ಸಂಘದ ಅಧ್ಯಕ್ಷ ರಾಜೇಂದ್ರ ನಾಯಕ್, ಉದ್ಯಮಿ ಸದಾನಂದ ಕೆ. ಸಫಲಿಗ, ಮುಂಬಯಿ ಸಾಫಲ್ಯ ಸೇವಾ ಸಂಘದ ಮಾಜಿ ಅಧ್ಯಕ್ಷ ಓಂ ಪ್ರಕಾಶ್ ರಾವ್, ಉಳ್ಳಾಲ ಗಾಣಿಗರ ಸಂಘದ ಅಧ್ಯಕ್ಷ ಎಚ್. ಪ್ರಕಾಶ್, ಶ್ರೀ ಉಳ್ಳಾಲ್ತಿ ಕ್ಷೇತ್ರ ಅಂತಗುರಿಕಾರ ರಾಜೇಶ್ ನಾಯ್ಕ, ಉದ್ಯಮಿ ಧೀರಜ್ ವಿ. ರಮಣ್ ಉಪಸ್ಥಿತರಿದ್ದರು.

    ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಮುಂಬಯಿ ಸಮಿತಿ ಪ್ರಧಾನ ಸಂಚಾಲಕ ಎಂ.ಜಿ. ಕರ್ಕೇರ, ರಾಜೇಂದ್ರ ಬಿ. ನಾಯ್ಕ ಭಾಸ್ಕರ್ ಅಮೀನ್, ದುರ್ಗಾ ಪ್ರಸಾದ್, ಸೇವಾಕರ್ತ ದಾನಿಗಳಾದ ಮನೋಜ್ ಬಿ. ನಾಯಕ್, ಕೃಷ್ಣ ಕುಮಾರ್ ಬಂಗೇರ, ಕಿರಣ್ ಸಫಲಿಗ, ಶೋಭಾ ಬಂಗೇರ, ಹೇಮಂತ್ ಸಫಲಿಗ, ಕಲಾ ಬಂಗೇರ, ಸಂಧ್ಯಾ ಪುತ್ರನ್ ಸೇರಿದಂತೆ ಸಾಫಲ್ಯ ಸೇವಾ ಸಂಘದ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

    ಸಂಬಂಧಿತ ಸುದ್ದಿ: ಗಾಣಿಗ ಯುವ ಬಳಗದಿಂದ ಪ್ರತಿಭಾ ಪುರಸ್ಕಾರ, ಸ್ನೇಹಿತರ ದಿನಾಚರಣೆ

    ಸಂಬಂಧಿತ ಸುದ್ದಿ: ಎಸ್‌ಜಿಇಸಿಟಿ-ಆಸ್ರಾದಿಂದ ನಡೆಯಿತು ಗ್ರಾಹಕ ಜಾಗೃತಿ ಕಾರ್ಯಕ್ರಮ

    ಸಂಬಂಧಿತ ಸುದ್ದಿ: ಕಿಕ್‌ ಬಾಕ್ಸಿಂಗ್‌ನಲ್ಲಿ ಗೆದ್ದ ಈ ಅವಳಿ ಸೋದರಿಯರು ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!