Sunday, September 22, 2024
spot_img
More

    Latest Posts

    ಗಾಣಿಗರ ಯಾನೆ ಸಫಲಿಗ ಸೇವಾ ಸಂಘದಿಂದ ವಿದ್ಯಾರ್ಥಿ ವೇತನ ವಿತರಣೆ, ಅಭಿನಂದನಾ ಸಮಾರಂಭ

    ಬೆಂಗಳೂರು: ದಕ್ಷಿಣಕನ್ನಡ ಜಿಲ್ಲೆ ಮಿಜಾರು ಎಡಪದವಿನ ಗಾಣಿಗರ ಯಾನೆ ಸಫಲಿಗ ಸೇವಾ ಸಂಘ (ರಿ) ಮತ್ತು ದಿ. ಕೆ.ವಿ. ಮಿಜಾರ್ ಮತ್ತು ದಿ. ವೆಂಕಮ್ಮ ಮಿಜಾರ್ ಇವರ ಸ್ಮರಣಾರ್ಥ ಜಲಜಾಕ್ಷಿ ಮತ್ತು ಲಕ್ಷ್ಮೀಶ್ ದಂಪತಿಯ ವತಿಯಿಂದ ಆಯೋಜಿಸಲಾಗಿದ್ದ ವಿದ್ಯಾರ್ಥಿ ವೇತನ ವಿತರಣೆ ಮತ್ತು ಅಭಿನಂದನಾ ಕಾರ್ಯಕ್ರಮ ಎಡಪದವು ವಿವೇಕಾನಂದ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಅ. 30ರ ಭಾನುವಾರ ಜರುಗಿತು.

    ಕಾರ್ಯಕ್ರಮವನ್ನು ಮುಂಬೈ ಮಹಾನಗರ ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಅವರು ಉದ್ಘಾ ಟಿಸಿದರು. ಗಾಣಿಗರ ಯಾನೆ ಸಫಲಿಗರ ಸೇವಾ ಸಂಘ ಮಿಜಾರು-ಎಡ ಪದವು ಇದರ ಅಧ್ಯಕ್ಷ ಭಾಸ್ಕರ್‌ ಎಸ್‌. ಸಫಲಿಗ ಎಡಪದವು ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗುರುಪುರ-ಕೈಕಂಬ ಸಫಲ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಸಂಜೀವ ಅಡ್ಯಾರ್‌, ಮಂಗಳೂರು ಗಾಣಿಗ ಸಂಘದ ಅಧ್ಯಕ್ಷ ನಾರಾಯಣ ಸಫಲಿಗ, ಮುಂಡೂರು ಸಫಲಿಗ ಸಂಘದ ಅಧ್ಯಕ್ಷ ದೇವಪ್ಪ ಸಫಲಿಗ, ಮೂಡಬಿದ್ರಿ ಸಫಲಿಗ ಸಂಘದ ಅಧ್ಯಕ್ಷ ರಾಜೇಶ್ ಮೂಡಬಿದ್ರಿ ಕಾರ್ಯಕ್ರಮದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

    ಡಾಕ್ಟರೇಟ್ ಪದವಿ ಪಡೆದಿರುವ ಎಂ.ಆರ್.ರೇಷ್ಮಾ ಪ್ರಶಾಂತ್ ಮತ್ತು ಅತ್ಯಧಿಕ ಅಂಕ ಗಳಿಸಿ ಶೈಕ್ಷಣಿಕ ಕ್ಷೇತ್ರ ದಲ್ಲಿ ಸಾಧನೆಗೈದ ಕಾರ್ತಿಕ್, ಪಾವನ, ಕಾವ್ಯ ಮತ್ತು ಚಿರಶ್ರೀ ಅವರನ್ನು ಸನ್ಮಾನಿಸಲಾಯಿತು. ಸಮಾಜದ ಪ್ರತಿಭಾವಂತ 101 ವಿದ್ಯಾರ್ಥಿಗಳಿಗೆ ಇದೇ ವೇಳೆ ವಿದ್ಯಾರ್ಥಿವೇತನ ವಿತರಿಸ ಲಾಯಿತು.

    ಸಾಮಾಜಿಕ, ಶೈಕ್ಷಣಿಕ ರಾಜಕೀಯ ಕ್ಷೇತ್ರದಲ್ಲಿ ಗಾಣಿಗರು ಬೆಳೆಯಬೇಕು. ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ವಿಧ್ಯಾರ್ಥಿಗಳು ಹೆಚ್ಚು ಆಸಕ್ತಿಯಿಂದ ಕಲಿಯುತ್ತಾರೆ. ಇಲ್ಲಿನ ಗಾಣಿಗ ಸಮಾಜದ ಈ ಕಾರ್ಯಕ್ರಮ ಶ್ಲಾಘನೀಯ. ಇಲ್ಲಿನ ಸಂಘದ ಕನಸಿನ ಯೋಜನೆ ಸಭಾಭವನಕ್ಕೆ ಶೀಘ್ರ ಶಿಲಾನ್ಯಾಸ ನಡೆದು, ಸಭಾಭವನ ನಿರ್ಮಾಣ ಶೀಘ್ರವಾಗಿ ಆಗಲಿ.

    | ಶ್ರೀನಿವಾಸ, ಅಧ್ಯಕ್ಷ, ಮುಂಬೈ ಮಹಾನಗರ ಸಾಫಲ್ಯ ಸೇವಾ ಸಂಘ

    ಬೀಬಿಲಚ್ಚಿಲ್ ದುರ್ಗಾಪರಮೇ ಶ್ವರಿ ದೇವಸ್ಥಾನದ ಆಡಳಿತ ಮೊಕ್ತಸರ ಮೋನಪ್ಪ ಮೇಸ್ತ್ರಿ, ನಾರಾಯಣ ಸಫಲಿಗೆ ಕಣ್ಣೂರು, ಗಂಗಾಧರ್ ಸಂಘದ ಸಫಲಿಗ, ಮಿಜಾರ್ -ಎಡಪದವು ಗಾಣಿಗ ಯಾನೆ ಸಫಲಿಗದ ಉಪಾಧ್ಯಕ್ಷ ಪ್ರೇಮಾನಂದ, ವೆಂಕಟೇಶ್‌ ಕದ್ರಿ, ಸಂಜೀವ ಸಫಲಿಗ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕುಮಾರಿ ಮನೀಷಾ ನಿರೂಪಣೆ ಮಾಡಿದರು. ಭಾಸ್ಕರ್‌ ಸ್ವಾಗತಿಸಿದರು, ನಾರಾಯಣ ವಂದನಾರ್ಪಣೆಗೈದರು.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿಯವರ ಜನ್ಮದಿನಾಚರಣೆಯಲ್ಲಿ ಗಾಣಿಗ ಯುವ ಬಳಗದ ಸಂಭ್ರಮ

    ಸಂಬಂಧಿತ ಸುದ್ದಿ: ಗೋಕರ್ಣ ದೇವಸ್ಥಾನದಲ್ಲಿ ಗಾಣಿಗ ಸಮಾಜದವರಿಂದ ಪ್ರಪ್ರಥಮ ಕಾರ್ತಿಕ ಪೂಜೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!