Sunday, September 22, 2024
spot_img
More

    Latest Posts

    ಜ್ಞಾನ ಜ್ಯೋತಿ ಯೋಗ ಅಧ್ಯಯನ ಕೇಂದ್ರದಿಂದ ಒಂದು ತಿಂಗಳ ಉಚಿತ ಯೋಗ ತರಬೇತಿ

    ಬೆಂಗಳೂರು: ಶ್ರೀ ಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ (ಎಸ್‌ಜಿಇಸಿಟಿ) ಹೊಸದಾಗಿ ಆರಂಭಿಸಿರುವ ಜ್ಞಾನ ಜ್ಯೋತಿ ಯೋಗ ಅಧ್ಯಯನ ಕೇಂದ್ರ ಆ. 27ರಂದು ಉದ್ಘಾಟನೆಗೊಂಡಿದೆ.

    ಮಾನಸಿಕ ಹಾಗೂ ದೈಹಿಕ ಆರೋಗ್ಯದ ಸಲುವಾಗಿ ಆರಂಭಿಸಲಾಗಿರುವ ಈ ಜ್ಞಾನ ಜ್ಯೋತಿ ಯೋಗ ಅಧ್ಯಯನ ಕೇಂದ್ರದಿಂದ ಒಂದು ತಿಂಗಳ ಉಚಿತ ಯೋಗ ತರಬೇತಿ ನಡೆಯಲಿದ್ದು, ಅದು ನಾಳೆಯೇ ಆರಂಭವಾಗಲಿದೆ.

    ಸೆ.1ರಿಂದ ಪ್ರತಿದಿನ ಬೆಳಗ್ಗೆ 7ರಿಂದ 9ರ ವರೆಗೆ ಈ ತರಬೇತಿ ನಡೆಯಲಿದ್ದು, ಆಸಕ್ತರು ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಸೇರಿಕೊಳ್ಳಬಹುದು. ಬೆಂಗಳೂರಿನ ನಂದಿನಿ ಬಡಾವಣೆಯ ಗಣೇಶ ಬ್ಲಾಕ್‌ನ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಇರುವ ಎಸ್‌ಜಿಇಸಿಟಿ ಕಚೇರಿಯಲ್ಲಿ ಈ ತರಬೇತಿ ನಡೆಯಲಿದೆ.

    ಆಸಕ್ತರು ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ ಟ್ರಸ್ಟ್‌ ಇ-ಮೇಲ್‌ [email protected] ಅಥವಾ 9663663637 ಇಲ್ಲವೇ 8483141411 ಸಂಪರ್ಕಿಸಬಹುದು ಎಂದು ಎಸ್‌ಜಿಇಸಿಟಿ ಕಾರ್ಯದರ್ಶಿ ಸೋಮಶೇಖರ್‌ ತಿಳಿಸಿದ್ದಾರೆ.

    ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ. https://docs.google.com/forms/d/e/1FAIpQLSdissSX2EtSh5QtPGbJga9v1FRjOCsCVdFCacvzpgW_aXPq7A/viewform?usp=send_form

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಎಸ್‌ಜಿಇಸಿಟಿಯಿಂದ ಜ್ಞಾನಜ್ಯೋತಿ ಯೋಗ ಅಧ್ಯಯನ ಕೇಂದ್ರ ಆರಂಭ

    ಸಂಬಂಧಿತ ಸುದ್ದಿ: ಬಾರ್ಕೂರು ದೇವಸ್ಥಾನದಲ್ಲಿ ಋಗುಪಾಕರ್ಮ, ಯಜ್ಞೋಪವೀತಧಾರಣೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!