Friday, May 17, 2024
spot_img
More

    Latest Posts

    ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಗಾಣಿಗ ಸಮಾಜದ ವಿದ್ಯಾರ್ಥಿಗಳು

    ಬೆಂಗಳೂರು: ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಕೊರೊನಾ ಕಾರಣದಿಂದಾಗಿ ನಡೆಸದಿದ್ದರೂ ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಉತ್ತೀರ್ಣಗೊಳಿಸಿದೆ. ಆದರೆ ಪರಿಣತರ ಸಮಿತಿ ರೂಪಿಸಿರುವ ಮೌಲ್ಯಮಾಪನದ ಸೂತ್ರದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡಿ, ಫಲಿತಾಂಶವನ್ನು ಪ್ರಕಟಿಸಿದೆ.

    ಪರೀಕ್ಷೆಗೆ ನೋಂದಾಯಿಸಿಕೊಂಡಿರುವ 6,66,497 ವಿದ್ಯಾರ್ಥಿಗಳ ಪೈಕಿ ತಾಂತ್ರಿಕ ಕಾರಣಗಳಿಂದಾಗಿ ಏಳು ವಿದ್ಯಾರ್ಥಿಗಳ ಪರೀಕ್ಷೆಯನ್ನು ತಡೆಹಿಡಿಯಲಾಗಿದೆ. ಉಳಿದ ವಿದ್ಯಾರ್ಥಿಗಳ ಪೈಕಿ 2,239 ವಿದ್ಯಾರ್ಥಿಗಳು 600ಕ್ಕೆ 600 ಅಂಕ ಗಳಿಸಿದ್ದಾರೆ. ಆ ಪೈಕಿ ಗಾಣಿಗ ಸಮಾಜದ ವಿದ್ಯಾರ್ಥಿಗಳೂ ಇದ್ದು, ಅತ್ಯಧಿಕ ಅಂಕ ಗಳಿಸಿರುವ ವಿದ್ಯಾರ್ಥಿಗಳ ಫೋಟೋ-ವಿವರವನ್ನು ಗ್ಲೋಬಲ್ ಗಾಣಿಗದಲ್ಲಿ ಪ್ರಕಟಿಸಿ ಶುಭ ಹಾರೈಸಲಾಗುತ್ತಿದೆ.

    ಪಿಯು ಪರೀಕ್ಷೆಯಲ್ಲಿ ಶೇ. 90ಕ್ಕೂ ಅಧಿಕ ಅಂಕಗಳನ್ನು ಗಳಿಸಿರುವ ಗಾಣಿಗ ಸಮಾಜದ ವಿದ್ಯಾರ್ಥಿಗಳು ತಮ್ಮ ಫೋಟೋ, ಪೋಷಕರ ಹೆಸರು, ಅಂಕ ಪಟ್ಟಿ ದಾಖಲೆ, ಊರು ಹಾಗೂ ಕಾಲೇಜಿನ ವಿವರಗಳನ್ನು ಕಳುಹಿಸಿದರೆ ಅದನ್ನು ಗ್ಲೋಬಲ್​ ಗಾಣಿಗ.ಕಾಮ್​ನಲ್ಲಿ ಪ್ರಕಟಿಸಲಾಗುವುದು. ಆಸಕ್ತರು [email protected] ವಿಳಾಸಕ್ಕೆ ಇ-ಮೇಲ್ ಮಾಡಿದಲ್ಲಿ, ಅವುಗಳನ್ನು ಪರಿಶೀಲಿಸಿ ಪ್ರಕಟಿಸಲಾಗುವುದು.

    ಸಮಾಜದ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆಗಳು

    1. ಮೋಕ್ಷ ಗಾಣಿಗ.
    ಅಂಕಗಳು: 600
    ಕಾಲೇಜು: ಮಹಾದೇವ ಕಾಲೇಜು, ಹೊಸಕೋಟೆ, ಕೋಲಾರ ಜಿಲ್ಲೆ.
    ಪೋಷಕರು: ಸುಗುಟೂರು ಮಂಜುನಾಥ್​-ಶ್ಯಾಮಲಾ, ಕೋಲಾರ ಜಿಲ್ಲೆ.

    2. ಶಿವಾನಿ ಜಗನ್ನಾಥ ಶೆಟ್ಟಿ
    ಅಂಕಗಳು: 600
    ಕಾಲೇಜು: ಕೆಎಲ್​ಇ ಸೊಸೈಟಿ ವಾಣಿಜ್ಯ ಪದವಿಪೂರ್ವ ಕಾಲೇಜು, ವಿದ್ಯಾನಗರ, ಹುಬ್ಬಳ್ಳಿ.

    3. ಶ್ರೀನಿವಾಸ ಬಸವರಾಜ ಕಲೂತಿ
    ಅಂಕಗಳು: 600

    4. ಪೂಜಾ ಸಜ್ಜನ್​
    ಅಂಕಗಳು: 581
    ಕಾಲೇಜು: ವಿದ್ಯಾನಿಕೇತನ್​ ಪಿಯು ಸೈನ್ಸ್ ಕಾಲೇಜ್, ಹುಬ್ಬಳ್ಳಿ. 

    5. ಸುಪ್ರೀತಾ
    ಅಂಕಗಳು: 570
    ಕಾಲೇಜು: ಶ್ರೀನಾಗಭೂಷಣ ಶಿವಯೋಗಿ ಗುರುಕುಲ ಮುಚಲಾಂಬಾ.
    ಪೋಷಕರು: ಧನರಾಜ್ ಸಜ್ಜನ್ ಶೆಟ್ಟಿ-ಗೋದಾವರಿ, ಧನ್ನೂರು, ಬಸವಕಲ್ಯಾಣ, ಬೀದರ್ ಜಿಲ್ಲೆ.

    6. ಪ್ರಜ್ವಲ್​ ವಿ. ಶೆಟ್ಟಿ
    ಅಂಕಗಳು: 541
    ಕಾಲೇಜು: ಸೇಂಟ್​ ಜೋಸೆಫ್ಸ್​ ಪಿಯು ಕಾಲೇಜು, ಬೆಂಗಳೂರು
    ಪೋಷಕರು: ಬಿ. ವೆಂಕಟೇಶ್-ಬಿ.ಆರ್.ವಸಂತಲಕ್ಷ್ಮೀ

    7. ರಕ್ಷಿತಾ ಮಂಜುನಾಥ್ ಶೆಟ್ಟಿ
    ಅಂಕಗಳು: 589
    ಕಾಲೇಜು: ಗೋಗಟೆ ಕಾಲೇಜು, ಬೆಳಗಾವಿ,
    ಪೋಷಕರು: ಮಂಜುನಾಥ್​ ಶೆಟ್ಟಿ-ವಜ್ರೇಶ್ವರಿ ಶೆಟ್ಟಿ, ಬೆಳಗಾವಿ

    8. ಬಿ.ಸಿ. ಪಲ್ಲವಿ
    ಅಂಕಗಳು: 582
    ಕಾಲೇಜು: ವಿವಿಎಸ್ ಸರ್ದಾರ್ ಪಟೇಲ್​ ಪಿಯು ಕಾಲೇಜು, ಬಸವೇಶ್ವರ ನಗರ ಬೆಂಗಳೂರು
    ಪೋಷಕರು: ಯು.ವಿ.ಚಂದ್ರಶೇಖರ್​-ಶಾಂತಾ, ಅನ್ನಪೂರ್ಣ ಸ್ವೀಟ್ಸ್​ ಆ್ಯಂಡ್ ಚಾಟ್ಸ್​, ಬೆಂಗಳೂರು.

    9. ಎಂ. ದರ್ಶನ್​
    ಅಂಕಗಳು: 554

    10. ನಮ್ರತಾ ಆರ್. ಗಾಣಿಗ
    ಅಂಕಗಳು: 576
    ಕಾಲೇಜು: ಎಂಇಎಸ್ ಪಿಯು ಕಾಲೇಜು, ಮಲ್ಲೇಶ್ವರ, ಬೆಂಗಳೂರು.
    ಪೋಷಕರು: ರಘುರಾಮ ಜಿ. ಗಾಣಿಗ-ಆರ್.ರೇವತಿ, ಬೆಂಗಳೂರು.

    11. ರಾಹುಲ್ ಧಾರೆಪ್ಪ ಮೇಟ್ರಿ
    ಅಂಕಗಳು: 600
    ಊರು: ತಡವಳಗ, ಚಡಚಣ, ವಿಜಯಪುರ ಜಿಲ್ಲೆ.

    12. ಜೆ. ಶ್ರೀಲಕ್ಷ್ಮೀ
    ಅಂಕಗಳು: 599
    ಕಾಲೇಜು: ಶ್ರೀಭೈರವೇಶ್ವರ ಗ್ರಾಮೀಣ ಸಂಯುಕ್ತ ಪದವಿಪೂರ್ವ ಕಾಲೇಜು, ಶ್ರೀನಿವಾಸಪುರ, ಕೋಲಾರ ಜಿಲ್ಲೆ.
    ಪೋಷಕರು: ಜಗದೀಶ್​-ಕಲಾವತಿ, ಶ್ರೀನಿವಾಸಪುರ

    13. ಬಿ.ಎಂ. ಶ್ರೀಲಕ್ಷ್ಮೀ
    ಅಂಕಗಳು: 590
    ಕಾಲೇಜು: ಬಿಜಿಎಸ್​ ಗುರುಕುಲ ಇಂಡಿಪೆಂಡೆಂಟ್​ ಪಿಯು ಕಾಲೇಜು, ಭದ್ರಾವತಿ, ಶಿವಮೊಗ್ಗ.
    ಪೋಷಕರು: ಮಹದೇವ-ಎಸ್​.ಟಿ.ದಯಾಮಣಿ

    14. ಕಿರಣ್ ಮಾದೇವ್ ಸುಧಾಮ್
    ಅಂಕಗಳು: 596
    ಕಾಲೇಜು: ಆಳ್ವಾಸ್ ಕಾಲೇಜು, ಮೂಡಬಿದ್ರೆ
    ಊರು: ತಡವಲಗ, ಇಂಡಿ ತಾಲೂಕು, ವಿಜಯಪುರ ಜಿಲ್ಲೆ.

    15. ಡಿ.ಎಲ್. ಅಜಯ್ ಸೂರ್ಯ  
    ಅಂಕಗಳು: 596
    ಕಾಲೇಜು: ಬಿಜಿಎಸ್ ಪಿಯು ಕಾಲೇಜು, ಚಿಕ್ಕಬಳ್ಳಾಪುರ
    ಪೋಷಕರು: ಜೆ.ವಿ. ದತ್ತಾತ್ರೇಯ-ಲಕ್ಷ್ಮಿ

    16. ಹರ್ಷ ವಿದ್ಯಾಧರ ನ್ಯಾಮಗೊಂಡ
    ಅಂಕಗಳು: 572
    ಕಾಲೇಜು: ಎಕ್ಸ್​ಪರ್ಟ್​ ಪಿಯು ಕಾಲೇಜು, ಮಂಗಳೂರು

    17. ವೈಭವಿ ಅಂಕಲಗಿ
    ಅಂಕಗಳು: 595
    ಕಾಲೇಜು: ಎಕ್ಸೆಲೆಂಟ್ ಪಿಯು ಸೈನ್ಸ್ ಕಾಲೇಜ್, ವಿಜಯಪುರ
    ಪೋಷಕರು: ಆರತಿ ಅಂಕಲಗಿ

    ಎಚ್. ಗಗನಶ್ರೀ

    18. ಎಚ್. ಗಗನಶ್ರೀ
    ಅಂಕಗಳು: 600
    ಕಾಲೇಜು: ಎಸ್​ಬಿಜಿಎನ್​ಎಸ್​ ಕಾಲೇಜು, ಅಗಲಗುರ್ಕಿ, ಚಿಕ್ಕಬಳ್ಳಾಪುರ
    ಪೋಷಕರು: ಹರೀಶ್-ಶಿಲ್ಪಾ, ತಡಿಗೋಳ್, ಶ್ರೀನಿವಾಸಪುರ, ಕೋಲಾರ ಜಿಲ್ಲೆ.

    ಹರ್ಷಿತಾ ಶೆಟ್ಟಿ

    19. ಬಿ.ಎಸ್​. ಹರ್ಷಿತಾ ಶೆಟ್ಟಿ
    ಅಂಕಗಳು: 600
    ಕಾಲೇಜು: ಸಮೃದ್ಧಿ ಕಾಲೇಜು, ಹೊಸಕೋಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ.
    ಪೋಷಕರು: ಬಿ.ಎನ್​. ಶ್ರೀನಿವಾಸ್- ಎನ್​.ಟಿ. ಮುನಿರತ್ನ

    ಕೌಶಲ್ ರಾಜ್​

    20. ಕೌಶಲ್ ರಾಜ್
    ಅಂಕಗಳು: 600
    ಕಾಲೇಜು: ಬೇಸ್ ಪಿಯು ಕಾಲೇಜು, ಮೈಸೂರು
    ಪೋಷಕರು: ಎಂ.ಎಲ್​.ಕೆ. ಶೆಟ್ಟಿ- ಕೆ.ಶೀಲಾವತಿ ಶೆಟ್ಟಿ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!