Saturday, September 21, 2024
spot_img
More

    Latest Posts

    ಸ್ವಾತಂತ್ರ್ಯದ ಅಮೃತ ಮಹೋತ್ಸವ; ಗಾಣಿಗ ಮಹಾಸಭಾದಿಂದ ರಕ್ತದಾನ

    ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಮೈಸೂರಿನ ಗಾಣಿಗ ಮಹಾಸಭಾ (ರಿ.) ರಕ್ತದಾನ ನಡೆಸುವ ಮೂಲಕ ಆಚರಿಸಿದೆ. ಮೈಸೂರಿನಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮಕ್ಕೆ ರೋಟರ‌್ಯಾಕ್ಟ್ ಮೈಸೂರು, ವಾಲಂಟಿಯರ್ಸ್ ಆಫ್ ಮೈಸೂರು, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಕರ್ನಾಟಕ ಶಾಖೆಯ ಸಹಯೋಗವಿತ್ತು.

    ಮೈಸೂರಿನ ಜೆಎಲ್‌ಬಿ ರಸ್ತೆಯ ಐಡಿಯಲ್ ಜಾವಾ ರೋಟರಿ ಸ್ಕೂಲ್‌ನಲ್ಲಿ ಈ ರಕ್ತದಾನ ಕಾರ್ಯಕ್ರಮ ನಡೆಯಿತು. ಗಾಣಿಗ ಮಹಾಸಭಾ ಅಧ್ಯಕ್ಷ, ಮೈಸೂರು ರೈಲ್ವೆ ಸಹಕಾರ ಬ್ಯಾಂಕ್​ ನಿರ್ದೇಶಕರೂ ಆಗಿರುವ ಡಾ.ಕೆ. ವಿಜಯಕುಮಾರ್ ದೀಪ ಬೆಳಗುವ ಮೂಲಕ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು.

    ರಕ್ತದಾನ ಶಿಬಿರ ಉದ್ಘಾಟಿಸಿದ ವಿಜಯಕುಮಾರ್
    ಉದ್ಘಾಟನಾ ಸಮಾರಂಭದಲ್ಲಿ ಆಯೋಜಕರು

    ‘ರಕ್ತದಾನ ಮಾಡಿದರೆ ಜೀವದಾನ ಮಾಡಿದಂತೆ. ಅದರಲ್ಲೂ ಕೋವಿಡ್‌ನ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಆರೋಗ್ಯವಂತ ಎಲ್ಲರೂ ರಕ್ತದಾನ ಮಾಡುವ ಅಗತ್ಯವಿದೆ’ ಎಂದು ವಿಜಯಕುಮಾರ್ ಅಭಿಪ್ರಾಯಪಟ್ಟರು.

    ರಕ್ತದಾನದ ಮಹತ್ವದ ಕುರಿತು ವಿಜಯಕುಮಾರ್ ಅನಿಸಿಕೆ

    ಗಾಣಿಗ ಮಹಾಸಭಾ ಪ್ರಧಾನ ಕಾರ್ಯದರ್ಶಿ, ಐಎನ್​ಟಿಯುಸಿ ಉಪಾಧ್ಯಕ್ಷ ಹಾಗೂ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯರ್ಶಿಯೂ ಆಗಿರುವ ಮಹದೇವ್ ಗಾಣಿಗ, ವಾಲಂಟಿಯರ್ಸ್ ಆಫ್ ಮೈಸೂರು ಅಧ್ಯಕ್ಷ ಪ್ರದೀಪ್, ಉಪಾಧ್ಯಕ್ಷ ಕೃಷ್ಣರಾಜ್ ಅರಸ್, ಕಾರ್ಯದರ್ಶಿ ಬಿ. ಪೂರ್ಣಿಮಾ ಅರಸ್, ರೋಟರ‌್ಯಾಕ್ಟ್ ಆಫ್ ಮೈಸೂರು ಅಧ್ಯಕ್ಷ ಯಶಸ್ ಮತ್ತಿತರರು ಉಪಸ್ಥಿತರಿದ್ದರು.

    ವಿಜಯಕುಮಾರ್​ಗೆ ಸನ್ಮಾನ
    ಕೃಷ್ಣರಾಜ್ ಅರಸ್, ಪ್ರದೀಪ್, ಪೂರ್ಣಿಮಾ ಅರಸ್​ಗೆ ಸನ್ಮಾನ

    ಸಂಬಂಧಿತ ಸುದ್ದಿ: ಅಖಿಲ ಭಾರತ ತೈಲಿಕ್ ಸಾಹು ಮಹಾಸಭಾ ಅಧ್ಯಕ್ಷೆ ಡಾ.ಮಮತಾ ಸಾಹುಗೆ ಸನ್ಮಾನ

    ಸಂಬಂಧಿತ ಸುದ್ದಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಗಾಣಿಗ ಸಮಾಜದ ಮಕ್ಕಳಿಗಾಗಿ ಮುದ್ದುಕೃಷ್ಣ ಆನ್‌ಲೈನ್ ಸ್ಪರ್ಧೆ

    ಸಂಬಂಧಿತ ಸುದ್ದಿ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಗಾಣಿಗ ಸಮಾಜದ ವಿದ್ಯಾರ್ಥಿಗಳು

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!