Sunday, September 22, 2024
spot_img
More

    Latest Posts

    ಕರ್ನಾಟಕದಲ್ಲಿ ಸ್ಥಾಪನೆ ಆಗಲಿದೆ ರಾಜ್ಯಮಟ್ಟದ ಗಾಣಿಗ ಮಹಿಳಾ ಸಂಘ

    ಬೆಂಗಳೂರು: ಗಾಣಿಗ ಸಮಾಜದ ಸಂಘಟನೆಗಾಗಿ ರಾಜ್ಯದಲ್ಲಿ ಹಲವಾರು ಸಂಘಗಳಿದ್ದು, ಸಮಾಜಕ್ಕಾಗಿ ಬಹಳಷ್ಟು ಕೆಲಸಗಳನ್ನು ಮಾಡುತ್ತ ಬಂದಿವೆ. ಇದೀಗ ಒಂದಷ್ಟು ಮಹಿಳೆಯರು ಒಂದಾಗಿ ರಾಜ್ಯಮಟ್ಟದ ಗಾಣಿಗ ಮಹಿಳಾ ಸಂಘವನ್ನು ಸ್ಥಾಪಿಸಲು ಮುಂದಾಗಿದ್ದು, ಅದಕ್ಕಾಗಿ ಸಿದ್ಧತೆಯನ್ನೂ ನಡೆಸುತ್ತಿದ್ದಾರೆ.

    ಕರುನಾಡ ರಾಜ್ಯ ಗಾಣಿಗ ಮಹಿಳಾ ಸಂಘವನ್ನು ಸ್ಥಾಪಿಸುವ ಕುರಿತು ಈ ಮಹಿಳೆಯರು ಚಿಂತನೆ ನಡೆಸಿದ್ದು, ಸಮಾನಮನಸ್ಕ ಮಹಿಳೆಯರ ಸಹಕಾರ-ಸಹಭಾಗಿತ್ವದ ನಿರೀಕ್ಷೆಯಲ್ಲೂ ಇದ್ದಾರೆ. ಬಾಗಲಕೋಟೆ ಜಿಲ್ಲಾ ಗಾಣಿಗ ಸಂಘದ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಆಗಿರುವ ವಿದ್ಯಾ ಭಾವಿ ಅವರು ಈ ನಿಟ್ಟಿನಲ್ಲಿ ಮುಂದುವರಿದಿದ್ದು, ಸಂಘ ಸ್ಥಾಪನೆಗಾಗಿ ರಾಜ್ಯಾದ್ಯಂತದ ಗಾಣಿಗ ಸಮುದಾಯದ ಸಕ್ರಿಯ ಮಹಿಳೆಯರನ್ನು ಸಂಪರ್ಕಿಸಲು ಕೂಡ ಮುಂದಾಗಿದ್ದಾರೆ.

    ರಾಜ್ಯದಲ್ಲಿ ಅಖಿಲ ಭಾರತ ಗಾಣಿಗ ಸಂಘ, ನೌಕರರ ಸಂಘಗಳಿದ್ದರೂ ಮಹಿಳಾ ಸಂಘ ಎಂಬುವುದೊಂದಿಲ್ಲ. ಸಮಾಜದ ಮಹಿಳೆಯರಿಗೆ ಅನ್ಯಾಯವಾದಾಗ ನ್ಯಾಯ ಒದಗಿಸುವ ಸಲುವಾಗಿ ಹೋರಾಟ ನಡೆಸಲು ಮಹಿಳಾ ಸಂಘವೊಂದರ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಅದಕ್ಕಾಗಿ ಸಮುದಾಯದ ಇತರ ಸಂಘ-ಸಂಘಟನೆಗಳ ಸಹಕಾರ-ಸಹಾಯವನ್ನೂ ಕೋರಿದ್ದಾರೆ.

    ಸಂಬಂಧಿತ ಸುದ್ದಿ: ಕುಮಟಾದಲ್ಲಿ ವಿಸ್ಟಾಡೋಮ್​ ರೈಲನ್ನು ಸ್ವಾಗತಿಸಿದ ಶಾಸಕ ದಿನಕರ ಶೆಟ್ಟಿ

    ಸಂಬಂಧಿತ ಸುದ್ದಿ: ಎಸ್​ಜಿಇಸಿಟಿಯಿಂದ ಮತ್ತೊಂದು ಮಹತ್ಕಾರ್ಯ; ಗಾಣಿಗ ಸಮಾಜದ 19 ಮಹತ್ವಾಕಾಂಕ್ಷಿಗಳಿಗೆ ಯುಪಿಎಸ್​ಸಿ/ಕೆಪಿಎಸ್​ಸಿ ತರಬೇತಿ

    ಸಂಬಂಧಿತ ಸುದ್ದಿ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಗಾಣಿಗ ಸಮಾಜದ ವಿದ್ಯಾರ್ಥಿಗಳು

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!