Sunday, September 22, 2024
spot_img
More

    Latest Posts

    ಗಾಣಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ನಡೆಯಲಿದೆ ಪ್ರತಿಭಾ ಪುರಸ್ಕಾರ

    ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ಹುನಗುಂದ ಹಾಗೂ ಇಳಕಲ್ ತಾಲೂಕಿನ ಗಾಣಿಗ ಸಮಾಜವು 2020-21ನೇ ಸಾಲಿನ ಎಸ್‌ಎಸ್‌ಎಲ್‌ಸಿ-ಪಿಯುಸಿಯಲ್ಲಿ ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದೆ.

    ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಬಾಗಲಕೋಟೆ ಜಿಲ್ಲೆಯ ಹುನಗುಂದದ ಅಮರಾವತಿ ರಸ್ತೆಯ ಗಾಣಿಗ ಸಮುದಾಯ ಭವನದಲ್ಲಿ ಸೆ.26ರ ರವಿವಾರ ನಡೆಯಲಿದೆ. ವಿಜಯಪುರದ ವನಶ್ರೀ ಗುರುಪೀಠದ ಡಾ.ಜಯಬಸವಕುಮಾರ ಸ್ವಾಮಿಗಳು, ಕೊಲ್ಹಾರ ದಿಗಂಬರೇಶ್ವರ ಮಠದ ಶ್ರೀಕಲ್ಲಿನಾಥ ಸ್ವಾಮಿಗಳ ಸಾನ್ನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಹುನಗುಂದ ಹಾಗೂ ಇಳಕಲ್‌ ಘಟಕದ ಅಖಿಲ ಭಾರತ ಗಾಣಿಗ ಸಮಾಜದ ಅಧ್ಯಕ್ಷ ನಿಂಗಪ್ಪ ಮಹಾಂತಪ್ಪ ಅಮರಾವತಿ ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಗಾಣಿಗ ಸಮಾಜದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ.

    ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.85 ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ. 80ಕ್ಕೂ ಅಧಿಕ ಅಂಕ ಗಳಿಸಿರುವ ವಿದ್ಯಾರ್ಥಿಗಳನ್ನು ಈ ಸಮಾರಂಭದಲ್ಲಿ ಪುರಸ್ಕರಿಸಲಾಗುವುದು. ಇದಕ್ಕಾಗಿ ಅರ್ಹ ವಿದ್ಯಾರ್ಥಿಗಳು ಸೂಕ್ತ ದಾಖಲಾತಿ‌ ನೀಡಿ ಹೆಸರು ನೋಂದಣಿ ಮಾಡಿಕೊಳ್ಳಬಹುದು. ನೋಂದಣಿಗೆ ಸೆ.24 ಕಡೇ ದಿನ ಆಗಿರುತ್ತದೆ.

    ಹೆಚ್ಚಿನ ಮಾಹಿತಿಗೆ ಸಂಗಮೇಶ ವಕ್ರದ – 9449517650, ಹನಮಗೌಡ ಹೊಸಮನಿ- 6361001279 ಅಥವಾ ಪ್ರದೀಪ ಸಜ್ಜನ – 8494899744 ಅವರನ್ನು ಸಂಪರ್ಕಿಸಬಹುದು.

    ಸಂಬಂಧಿತ ಸುದ್ದಿ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಗಾಣಿಗ ಸಮಾಜದ ವಿದ್ಯಾರ್ಥಿಗಳು

    ಸಂಬಂಧಿತ ಸುದ್ದಿ: ಎಸ್​ಜಿಇಸಿಟಿಯಿಂದ ಮತ್ತೊಂದು ಮಹತ್ಕಾರ್ಯ; ಗಾಣಿಗ ಸಮಾಜದ 19 ಮಹತ್ವಾಕಾಂಕ್ಷಿಗಳಿಗೆ ಯುಪಿಎಸ್​ಸಿ/ಕೆಪಿಎಸ್​ಸಿ ತರಬೇತಿ

    ಸಂಬಂಧಿತ ಸುದ್ದಿ: ಎಮ್​ಟೆಕ್​ನಲ್ಲಿ ಎರಡನೇ ರ‍್ಯಾಂಕ್​, ಚಿನ್ನದ ಪದಕ; ಈಗ ಐಎಎಸ್​ಗೆ ತಯಾರಿ..

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!