Saturday, September 21, 2024
spot_img
More

    Latest Posts

    ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ, ಸಾಮಾಜಿಕ ನ್ಯಾಯ ರಕ್ಷಿಸಿ: ಜಿಲ್ಲಾಧ್ಯಕ್ಷ ವಿಜಯಕುಮಾರ್ ಆಗ್ರಹ

    ಚಿಕ್ಕಬಳ್ಳಾಪುರ: ಸರ್ಕಾರ ಕೂಡಲೇ ಗಾಣಿಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ರಕ್ಷಿಸಬೇಕು ಎಂಬುದಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ಪಿ.ಜಿ. ವಿಜಯಕುಮಾರ್ ಆಗ್ರಹಿಸಿದ್ದಾರೆ.

    ಅ.3ರಂದು ಬೆಂಗಳೂರಿನ ದೇವನಹಳ್ಳಿಯ ಎಸ್ಎಸ್‌ಬಿ ಕನ್ವೆನ್ಷನ್‌ ಹಾಲ್‌ನಲ್ಲಿ ನಡೆಯಲಿರುವ ‘ಗಾಣಿಗ ಸಮುದಾಯ ಕಾರ್ಯಾಗಾರ’ ಕುರಿತು ಮಾಹಿತಿ ನೀಡಲು ನಿನ್ನೆ ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.‌

    ಗಾಣಿಗ ಸಮುದಾಯದ ಅಭಿವೃದ್ಧಿಗಾಗಿ ಚರ್ಚೆ ನಡೆಸಲು ಬೆಂಗಳೂರು ಹಾಗೂ ಮೈಸೂರು ಕಂದಾಯ ವಿಭಾಗದ ಗಾಣಿಗ ಸಮುದಾಯದವರನ್ನು ಒಳಗೊಂಡಂತೆ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಗಾಣಿಗ ಸಮಾಜದ ಪ್ರಮುಖರಿಂದ ವಿವಿಧ ಆಯಾಮಗಳಲ್ಲಿ ವಿಷಯ ಮಂಡನೆ ಇರಲಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಕೋರಿದರು.

    ಪಿ.ಜಿ. ವಿಜಯಕುಮಾರ್‌

    ನಮ್ಮ ಸಮುದಾಯ ಹಿಂದುಳಿಯಲು ಏನು ಕಾರಣ, ಅಭಿವೃದ್ಧಿ ಹೊಂದಲು ಏನೇನು ಅಗತ್ಯ ಎಂಬ ಕುರಿತ ಚಿಂತನ-ಮಂಥನ ಈ ಕಾರ್ಯಾಗಾರದಲ್ಲಿ ನಡೆಯಲಿದೆ. ಅಲ್ಲದೆ ವಿವಿಧ ರಾಜಕೀಯ ಪಕ್ಷಗಳು ಇದುವರೆಗೆ ನಮ್ಮ ಸಮುದಾಯಕ್ಕೆ ನೀಡಿರುವ ಕೊಡುಗೆಗಳ ಜೊತೆಗೆ ವಹಿಸಿರುವ ನಿರ್ಲಕ್ಷ್ಯದ ಕುರಿತು ಕೂಡ ಅವಲೋಕನ ನಡೆಯಲಿದೆ ಎಂದರು.

    ಗಾಣಿಗ ಸಮಾಜದ ಬಾಗೇಪಲ್ಲಿ ತಾಲೂಕು ಅಧ್ಯಕ್ಷ ರಾಮಕೃಷ್ಣಪ್ಪ ಅವರ ಜೊತೆಗೆ ಸಮಾಜದ ಇತರ ಮುಖಂಡರಾದ ವೆಂಕಟಶಿವಪ್ಪ, ಮೋಹನ್‌ಕುಮಾರ್ ಹಾಗೂ ರಾಮಚಂದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.

    ಸಂಬಂಧಿತ ಸುದ್ದಿ: ಬೆಂಗಳೂರಿನ ದೇವನಹಳ್ಳಿಯಲ್ಲಿ ಅ. 3ರಂದು ಗಾಣಿಗ ಸಮುದಾಯದ ಕಾರ್ಯಾಗಾರ

    ಸಂಬಂಧಿತ ಸುದ್ದಿ: ಉದ್ಯೋಗಂ ಪುರುಷ ಲಕ್ಷಣಂ; ಬನ್ನಿ.. ಇದೊಂದ್‌ ಕೆಲಸ ಮಾಡುವ…

    ಸಂಬಂಧಿತ ಸುದ್ದಿ: ಮಾರ್ದನಿಸುತ್ತಿವೆ ಗಾಣಿಗರ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿರುವ ಆ ಮಾತುಗಳು..

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!