Friday, May 17, 2024
spot_img
More

    Latest Posts

    ಉದ್ಯೋಗಂ ಪುರುಷ ಲಕ್ಷಣಂ; ಬನ್ನಿ.. ಇದೊಂದ್‌ ಕೆಲಸ ಮಾಡುವ…

    ಬೆಂಗಳೂರು: ʼಉದ್ಯೋಗಂ ಪುರುಷ ಲಕ್ಷಣಂ..ʼ ಎಂಬ ಮಾತಿದೆ. ಅಂದರೆ ಏನಾದರೊಂದು ಉದ್ಯೋಗ ಮಾಡುವುದೇ ನಿಜವಾದ ಪುರುಷ ಲಕ್ಷಣ ಅಂತ. ಆದರೆ ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪುರುಷರು ಮಾತ್ರವಲ್ಲದೆ ಮಹಿಳೆಯರೂ ಉದ್ಯೋಗದಲ್ಲಿದ್ದಾರೆ ಮತ್ತು ಉದ್ಯೋಗದಲ್ಲಿರಬೇಕಾದ ಅನಿವಾರ್ಯತೆಯೂ ಇದೆ.

    ಹೀಗೆ ಉದ್ಯೋಗ ಮಾಡುವವರ ಪ್ರಮಾಣ ಹೆಚ್ಚಾದ್ದರಿಂದ ಉದ್ಯೋಗ ಕ್ಷೇತ್ರದಲ್ಲಿ ಸ್ಪರ್ಧೆಯೂ ಹೆಚ್ಚಾಗಿದೆ. ಅದೇ ರೀತಿ ಉದ್ಯೋಗಕ್ಕೆ ಬೇಡಿಕೆ ಕೂಡ ಹೆಚ್ಚಳಗೊಂಡಿದೆ. ಯಾರಿಗೇ ಆದರೂ ಜೀವನೋಪಾಯಕ್ಕಾಗಿ ಒಂದು ಉದ್ಯೋಗ ಅತಿ ಅಗತ್ಯ. ಈ ನಿಟ್ಟಿನಲ್ಲಿ ಗಾಣಿಗ ಸಮುದಾಯದವರಿಗೆ ಉದ್ಯೋಗದ ಅವಕಾಶಗಳನ್ನು ತಿಳಿಸಲು ಗ್ಲೋಬಲ್‌ ಗಾಣಿಗ.ಕಾಮ್‌ ಮುಂದಾಗಿದ್ದು, ಅದಕ್ಕಾಗಿ ನಮ್ಮ ಈ ತಾಣದಲ್ಲಿ ʼಉದ್ಯೋಗʼ ಎಂಬ ಪ್ರತ್ಯೇಕ ಕೆಟಗರಿಯನ್ನೂ ಮಾಡಲಾಗಿದೆ.

    ಇನ್ನು ಮುಂದೆ ಗ್ಲೋಬಲ್‌ ಗಾಣಿಗ.ಕಾಮ್‌ನಲ್ಲಿ ಉದ್ಯೋಗಾವಕಾಶ, ಉದ್ಯೋಗ ಸಂಬಂಧಿತ ಸುದ್ದಿಗಳನ್ನು ಈ ʼಉದ್ಯೋಗʼ ಕೆಟಗರಿಯಲ್ಲಿ ಆದ್ಯತೆ ನೀಡಿ ಪ್ರಕಟಿಸಲಾಗುವುದು. ಅದರಲ್ಲೂ ನಮ್ಮ ಸಮುದಾಯದ ಮಂದಿಗೆ ಉದ್ಯೋಗಾವಕಾಶಗಳ ಕುರಿತು ಹೆಚ್ಚಿನ ಸ್ಪಷ್ಟ ಮಾಹಿತಿ ನೀಡುವುದು ಇದರ ಪ್ರಮುಖ ಉದ್ದೇಶ.

    ನಮ್ಮ ಸಮಾಜದ ಹಲವಾರು ಮಂದಿ ವಿವಿಧ ಕ್ಷೇತ್ರದಲ್ಲಿ ವಿವಿಧ ಹುದ್ದೆ-ಸ್ಥಾನಗಳಲ್ಲಿ ಉದ್ಯೋಗದಲ್ಲಿದ್ದಾರೆ. ಅಂಥವರು ಕೆಲಸ ಮಾಡುವ ಕಂಪನಿಗಳಲ್ಲೇ ಸಾಮಾನ್ಯವಾಗಿ ಒಂದಷ್ಟು ಉದ್ಯೋಗಾವಕಾಶಗಳು ಇರುತ್ತವೆ. ಅದೇ ರೀತಿ ಅವರು ಕೆಲಸ ಮಾಡುವ ಸಂಸ್ಥೆಗಳಿಂದ ಉದ್ಯೋಗಾವಕಾಶಗಳ ಕುರಿತ ಪ್ರಕಟಣೆಯನ್ನು ಕೂಡ ಹೊರಡಿಸಲಾಗಿರುತ್ತದೆ. ಅಂಥದ್ದನ್ನು ನಮ್ಮ ಗಮನಕ್ಕೆ ತಂದಲ್ಲಿ ಅವುಗಳನ್ನು ಗ್ಲೋಬಲ್‌ ಗಾಣಿಗ.ಕಾಮ್‌ನಲ್ಲಿ ಪ್ರಕಟಿಸಲಾಗುತ್ತದೆ. ಆ ಮೂಲಕ ಉದ್ಯೋಗದಲ್ಲಿರುವ ಸಮಾಜಬಾಂಧವರು ತಮ್ಮ ಸಮುದಾಯದವರಿಗೆ ಉದ್ಯೋಗ ಪಡೆಯಲು ನೆರವು ನೀಡಿದಂತಾಗುತ್ತದೆ. ಇದರಿಂದ ಸಮಾಜದಲ್ಲಿನ ನಿರುದ್ಯೋಗವನ್ನೂ ಕಡಿಮೆ ಮಾಡಿದಂತಾಗುತ್ತದೆ. ಬನ್ನಿ.. ಈಗಾಗಲೇ ಕೆಲಸದಲ್ಲಿರುವವರು ಇದೊಂದು ಕೆಲಸ ಮಾಡಿ…

    ನೀವು ಮಾಡಬೇಕಾದ್ದು ಇಷ್ಟೇ..

    • ನಿಮ್ಮ ಗಮನಕ್ಕೆ ಬಂದ ಉದ್ಯೋಗಾವಕಾಶಗಳ ಕುರಿತ ಮಾಹಿತಿಯನ್ನು ನಮಗೆ ಕಳುಹಿಸಿಕೊಡಿ.
    • ನೀವು ಕಳುಹಿಸುವ ಮಾಹಿತಿ ವಿಶ್ವಾಸಾರ್ಹವಾಗಿರಲಿ, ಮಾಹಿತಿಯಲ್ಲಿ ಸ್ಪಷ್ಟತೆ ಇರಲಿ.
    • ನೀವು ಕಳಿಸುವ ಮಾಹಿತಿಯನ್ನು ಕಡ್ಡಾಯವಾಗಿ ಗ್ಲೋಬಲ್‌ ಗಾಣಿಗ.ಕಾಮ್‌ನ ಅಧಿಕೃತ ಐಡಿ [email protected] ಗೆ ಇ-ಮೇಲ್‌ ಮಾಡಿ.

    ಸಂಬಂಧಿತ ಸುದ್ದಿ: ಮಾರ್ದನಿಸುತ್ತಿವೆ ಗಾಣಿಗರ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿರುವ ಆ ಮಾತುಗಳು..

    ಸಂಬಂಧಿತ ಸುದ್ದಿ: ಬೆಂಗಳೂರಿನ ದೇವನಹಳ್ಳಿಯಲ್ಲಿ ಅ. 3ರಂದು ಗಾಣಿಗ ಸಮುದಾಯದ ಕಾರ್ಯಾಗಾರ

    ಸಂಬಂಧಿತ ಸುದ್ದಿ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಗಾಣಿಗ ಸಮಾಜದ ವಿದ್ಯಾರ್ಥಿಗಳು

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!