Saturday, September 21, 2024
spot_img
More

    Latest Posts

    ನವರಾತ್ರಿ ಪ್ರಯುಕ್ತ ಬಾರ್ಕೂರು ದೇವಸ್ಥಾನದಲ್ಲಿ ಇಂದಿನಿಂದ 9 ದಿನ ವಲಯವಾರು ಪೂಜೆ

    ಬೆಂಗಳೂರು: ಸೋಮಕ್ಷತ್ರಿಯ ಗಾಣಿಗ ಸಮಾಜದವರ ಕುಲದೇವರಾದ ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಾಲಯದಲ್ಲಿ ಇಂದಿನಿಂದ ಒಂಬತ್ತು ದಿನಗಳ ಕಾಲ ವಲಯವಾರು ಪೂಜೆ ನೆರವೇರಲಿದೆ.

    ನವರಾತ್ರಿ ಪ್ರಯುಕ್ತ ಈ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದ್ದು ಗಾಣಿಗ ಸಮಾಜದ ವಿವಿಧ ವಲಯಗಳ ಸಂಘಟನೆಗಳು ಒಂದೊಂದು ದಿನದ ಪೂಜೆಯಲ್ಲಿ ಪಾಲ್ಗೊಳ್ಳಲಿವೆ.‌ ವಲಯವಾರು ಪೂಜೆ ಪ್ರತಿದಿನ ಸಂಜೆ 6ರಿಂದ ನಡೆಯಲಿದೆ. ಅಲ್ಲದೆ ನವರಾತ್ರಿಯ ಈ 9 ದಿನ ಪ್ರತಿನಿತ್ಯ ದುರ್ಗಾಪೂಜೆ, ಭಜನೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

    ಪೂಜೆಯಲ್ಲಿ ಭಾಗಿ ಆಗಲಿರುವ ವಲಯ ಸಂಘಟನೆಗಳು

    • ಅ. 7, ಗುರುವಾರ: ಕೋಟ ವಲಯ
    • ಅ. 8, ಶುಕ್ರವಾರ: ಬ್ರಹ್ಮಾವರ ವಲಯ
    • ಅ. 9, ಶನಿವಾರ: ಶ್ರೀಮತಿ ಜಯಂತಿ ಮತ್ತು ಶ್ರೀವಾಸುದೇವ ಬೈಕಾಡಿ, ಅಧ್ಯಕ್ಷರು, ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜ, ಬಾರ್ಕೂರು.
    • ಅ. 10, ರವಿವಾರ: ಬಾರ್ಕೂರು ವಲಯ
    • ಅ. 11, ಸೋಮವಾರ: ಕೆಮ್ಮಣ್ಣು ವಲಯ
    • ಅ. 12, ಮಂಗಳವಾರ: ತೆಂಕನಿಡಿಯೂರು ವಲಯ
    • ಅ. 13, ಬುಧವಾರ: ಬೆಳಗ್ಗೆ 9 ಗಂಟೆಯಿಂದ ಚಂಡಿಕಾ ಹೋಮ
    • ಅ. 14, ಗುರುವಾರ: ಉದ್ಯಾವರ ವಲಯ
    • ಅ. 15, ಶುಕ್ರವಾರ: ಉಡುಪಿ ವಲಯ

    ಸಂಬಂಧಿತ ಸುದ್ದಿ: ಬಾರ್ಕೂರು ದೇವಸ್ಥಾನದಲ್ಲಿ ಅ. 13ರಂದು ಸಾಮೂಹಿಕ ಚಂಡಿಕಾ ಹೋಮ

    ಸಂಬಂಧಿತ ಸುದ್ದಿ: ನಾಳೆಯಿಂದ ಶ್ರೀಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಹಾಗೂ ದುರ್ಗಾಹೋಮ

    ಸಂಬಂಧಿತ ಸುದ್ದಿ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಗಾಣಿಗ ಸಮಾಜದ ವಿದ್ಯಾರ್ಥಿಗಳು

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!