Sunday, September 22, 2024
spot_img
More

    Latest Posts

    ಆದಿಕವಿ‌ ಪಂಪನ‌ ಜನ್ಮಸ್ಥಳದಲ್ಲಿ ಸ್ಥಾಪನೆಯಾಯಿತು ನೂತನ ಗಾಣಿಗ ಸಂಘ

    ಬೆಂಗಳೂರು: ಆದಿಕವಿ ಪಂಪನ ಜನ್ಮಸ್ಥಳವಾಗಿರುವ ಅಣ್ಣಿಗೇರಿಯಲ್ಲಿ ನೂತನ ಗಾಣಿಗ ಸಂಘ ಸ್ಥಾಪನೆಯಾಗಿದ್ದು, ಅಕ್ಟೋಬರ್ 18ರಂದು ಅದರ ಉದ್ಘಾಟನೆ ಕಾರ್ಯಕ್ರಮ ನೆರವೇರಿದೆ.

    ಧಾರವಾಡ ಜಿಲ್ಲೆಯ ಅಣ್ಣಿಗೇರಿ ಹೊಸ ತಾಲೂಕಾಗಿ ರೂಪುಗೊಂಡಿರುವುದರಿಂದ ಅಖಿಲ ಭಾರತ ಗಾಣಿಗ ಸಂಘವು ಹೊಸದಾಗಿ ಅಣ್ಣಿಗೇರಿ ತಾಲೂಕು ಗಾಣಿಗ ಸಂಘವನ್ನು ಸ್ಥಾಪಿಸಿದೆ.

    ಅಖಿಲ ಭಾರತ ಗಾಣಿಗ ಸಂಘದ ರಾಜ್ಯಾಧ್ಯಕ್ಷ ಗುರಣ್ಣ ಗೋಡಿ ಅವರು, ಆದಿಕವಿ ಪಂಪ ಸ್ಮಾರಕ ಭವನದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಸಂಘವನ್ನು ಉದ್ಘಾಟಿಸಿದರು.

    ಅಖಿಲ ಭಾರತ ಗಾಣಿಗ ಸಂಘದ ರಾಜ್ಯಾಧ್ಯಕ್ಷ ಗುರಣ್ಣ ಗೋಡಿ ಅವರಿಂದ ಸಂಘದ ಉದ್ಘಾಟನೆ

    ತಾಲೂಕು ಗಾಣಿಗ ಸಂಘದ ನೂತನ‌‌ ಪದಾಧಿಕಾರಿಗಳು ಸಂಘಟನೆಯನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಬೇಕು. ಸಮಾಜದ ಪ್ರತಿಯೊಬ್ಬರನ್ನೂ ತಲುಪುವ ರೀತಿ ಕೆಲಸ ಮಾಡಬೇಕು ಎಂದು ಗುರಣ್ಣ ಗೋಡಿ ಹೇಳಿದರು.

    ನೂತನ‌ ಪದಾಧಿಕಾರಿಗಳು

    ಅಣ್ಣಿಗೇರಿ ತಾಲೂಕು ಗಾಣಿಗ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವೂ ಇದೇ ಸಂದರ್ಭದಲ್ಲಿ ನಡೆಯಿತು. ತಾಲೂಕು ಘಟಕದ ಅಧ್ಯಕ್ಷರಾಗಿ ನಾಗಪ್ಪ ಗಾಣಿಗೇರ, ಉಪಾಧ್ಯಕ್ಷರಾಗಿ ಕುಮಾರಗೌಡ ಗದ್ದಿಗೌಡ್ರ, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ ಚವಡಿ ಅವರನ್ನು ನೇಮಿಸಲಾಯಿತು.

    ಯುವ ಘಟಕದ ನೂತನ ಅಧ್ಯಕ್ಷರಾಗಿ ಜಗದೀಶ ಗಾಣಿಗೇರ, ಉಪಾಧ್ಯಕ್ಷರಾಗಿ ದೊಡ್ಡಫಕ್ಕಿರಪ್ಪ ಗಾಣಿಗೇರ, ಪ್ರಧಾನ ಕಾರ್ಯದರ್ಶಿಯಾಗಿ ಆನಂದ ಚವಡಿ ಅವರನ್ನು ನೇಮಿಸಲಾಯಿತು.

    ನೂತನ ಸಂಘದ ಪದಾಧಿಕಾರಿಗಳು

    ಸಂಬಂಧಿತ ಸುದ್ದಿ: ಮಾರ್ದನಿಸುತ್ತಿವೆ ಗಾಣಿಗರ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿರುವ ಆ ಮಾತುಗಳು..

    ಸಂಬಂಧಿತ ಸುದ್ದಿ: ನಮ್ಮದು ಸಣ್ಣ ಸಮಾಜ, ಕಡಿಮೆ ಜನಸಂಖ್ಯೆ ಎಂಬ ಭಾವನೆ ಬೇಡ; ಗಾಣಿಗ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಲಹೆ

    ಸಂಬಂಧಿತ ಸುದ್ದಿ: ರೈತರ ಆದಾಯ ದ್ವಿಗುಣಗೊಳಿಸಲು, ಉದ್ಯೋಗಾವಕಾಶ ಕಲ್ಪಿಸಲು ಪೂರ್ವಭಾವಿ ಸಭೆ ನಡೆಸಿದ ಬಿ.ಜೆ. ಪುಟ್ಟಸ್ವಾಮಿ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!