Friday, May 17, 2024
spot_img
More

    Latest Posts

    ಪುರಾಣಪ್ರಸಿದ್ಧ ಗೋಕರ್ಣದಲ್ಲಿ ಗಾಣಿಗರಿಂದ ನಡೆಯಿತು ಕಾರ್ತಿಕ ಮಾಸದ ಪ್ರಥಮ ಪೂಜೆ

    ಬೆಂಗಳೂರು: ಪುರಾಣಪ್ರಸಿದ್ಧ ಗೋಕರ್ಣದ ಶ್ರೀಮಹಾಬಲೇಶ್ವರ ದೇವಸ್ಥಾನದಲ್ಲಿ ಅನಾದಿಕಾಲದಿಂದಲೂ ನಡೆದು ಬಂದಿರುವ ಗಾಣಿಗರ ಕಾರ್ತಿಕ ಮಾಸದ  ಪ್ರಥಮ ಪೂಜೆ ಈ ವರ್ಷ ನ. 5ರಂದು ನೆರವೇರಿತು.

    ಆ ದಿನ ಬೆಳಗ್ಗೆ ಗಾಣಿಗ ಸಮುದಾಯದ ವತಿಯಿಂದ ಏಕದಶ ರುದ್ರಾಭಿಷೇಕ ಮತ್ತು ಸಾಯಂಕಾಲ ದೀಪೋತ್ಸವ ನಡೆಸಲಾಯಿತು. ಪ್ರತಿವರ್ಷದ ಕಾರ್ತಿಕ ಮಾಸದ ಮೊದಲ ಪೂಜೆ ಗಾಣಿಗರ ಕಡೆಯಿಂದ ನಡೆಯುವುದು ಇಲ್ಲಿನ ಪದ್ಧತಿ ಎಂದು ಅಲ್ಲಿನ ಗಾಣಿಗ ಸಮಾಜದ ಪ್ರಮುಖರಾದ ನಾಗೇಶ ನಾರಾಯಣ ಶೆಟ್ಟಿ ತಿಳಿಸಿದ್ದಾರೆ.

    ಗೋಕರ್ಣದಲ್ಲಿ ಗಾಣಿಗರ ಪ್ರಥಮಪೂಜೆಯಂದು ದೀಪ ಹಚ್ಚುತ್ತಿರುವ ಸಮಾಜದ ಯುವಕರು

    ಗಾಣಿಗ ಸಮಾಜದವರು ಈ ಹಿಂದೆ ಗಾಣದಿಂದ ತಯಾರಿಸಿದ ಎಣ್ಣೆಯನ್ನು ದೇವಸ್ಥಾನಕ್ಕೆ ದೀಪ ಹಚ್ಚಲು ನೀಡುತ್ತಿದ್ದರು. ಅಂದಿನಿಂದಲೂ ದೀಪಾವಳಿಯ ಪಾಡ್ಯದಂದು ದೀಪೋತ್ಸವದ ಮೊದಲ ಪೂಜೆ ಗಾಣಿಗರಿಂದ ನಡೆಯುತ್ತಿದೆ. ಅದೇ ಪದ್ಧತಿ ಈಗಲೂ ಮುಂದುವರಿದಿದೆ ಎಂದು ನಾಗೇಶ ನಾರಾಯಣ ಶೆಟ್ಟಿ ತಿಳಿಸಿದ್ದಾರೆ.

    ದೀಪೋತ್ಸವದಲ್ಲಿ ಪಾಲ್ಗೊಂಡ ಗಾಣಿಗ ಸಮಾಜಬಾಂಧವರು

    ಪೂಜಾ ದಿನದ ಅನ್ನದಾನದ ಸೇವೆಯನ್ನು ತಾಲೂಕು ಪಂಚಾಯತ್‌ ಮಾಜಿ ಸದಸ್ಯ ಮಹೇಶ ಶೆಟ್ಟಿ ಕೈಗೊಂಡಿದ್ದರು. ದೀಪೋತ್ಸವ ಕಾರ್ಯದಲ್ಲಿ ಗೋಕರ್ಣ ಸುತ್ತಮುತ್ತಲ ಪ್ರದೇಶದ ಗಾಣಿಗ ಸಮಾಜದ ಬಹಳಷ್ಟು ಯುವಕರು ಪಾಲ್ಗೊಂಡಿದ್ದಾರೆ. ಮಾತ್ರವಲ್ಲ, ಮುಂದಿನ ವರ್ಷಗಳಲ್ಲಿ ಈ ಕಾರ್ಯಕ್ರಮದಲ್ಲಿ ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸಂಬಂಧಿತ ಸುದ್ದಿ: ಪುರಾಣಪ್ರಸಿದ್ಧ ಗೋಕರ್ಣದಲ್ಲಿ ಗಾಣಿಗರ ಪ್ರಥಮ ಪೂಜೆ; ನ. 5ರಂದು ಏಕದಶ ರುದ್ರಾಭಿಷೇಕ, ದೀಪೋತ್ಸವ

    ಸಂಬಂಧಿತ ಸುದ್ದಿ: ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕಿ ಶಾರದಾ ಶೆಟ್ಟಿ ಉಪಸ್ಥಿತಿಯಲ್ಲಿ ವಿಧ್ಯುಕ್ತವಾಗಿ ಉದ್ಘಾಟನೆ ಆಗಲಿದೆ ಗಾಣಿಗ ಯುವ ಬಳಗ

    ಸಂಬಂಧಿತ ಸುದ್ದಿ: ಮಾರ್ದನಿಸುತ್ತಿವೆ ಗಾಣಿಗರ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿರುವ ಆ ಮಾತುಗಳು..

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!