Sunday, September 22, 2024
spot_img
More

    Latest Posts

    ಸಮುದಾಯದ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯ ಶ್ಲಾಘನೀಯ; ವಿಶ್ವ ಗಾಣಿಗರ ಚಾವಡಿಗೆ ಶಾಸಕ ಡಾ. ಭರತ್‌ ಶೆಟ್ಟಿ ಮೆಚ್ಚುಗೆ

    ಮಂಗಳೂರು: ಯುವಕರನ್ನು ಸಾಮಾಜಿಕ ಜಾಲತಾಣದ ಮೂಲಕ ಒಗ್ಗೂಡಿಸಿ ಸಾಮಾಜಿಕ ಚಟುವಟಿಕೆ ನಡೆಸುವುದರ ಜೊತೆಗೆ ದೇಶ ಭಕ್ತೀಗಿತೆ, ಭಜನೆ ಸ್ಪರ್ಧೆಗಳು, ಧಾರ್ಮಿಕ ಕೇಂದ್ರಗಳಲ್ಲಿ ಕರಸೇವೆ, ಸ್ವಚ್ಛತಾ ಕಾರ್ಯ ನೆರವೇರಿಸುವ ಮುಖೇನ ನಮ್ಮ ಸಂಸ್ಕತಿ ನಮ್ಮ ಸಮುದಾಯದ ಪರಂಪರೆಯನ್ನು ಉಳಿಸಿ, ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ವಿಶ್ವ ಗಾಣಿಗರ ಚಾವಡಿ(ರಿ.) ತಂಡದಿಂದ ನಡೆಯುತ್ತಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್​ ಶೆಟ್ಟಿ ಹೇಳಿದರು.

    ಜ.2ರ ಭಾನುವಾರ ಮಂಗಳೂರು ಕೇಂದ್ರ ಮೈದಾನದಲ್ಲಿ ವಿಶ್ವ ಗಾಣಿಗ ಟ್ರೋಫಿ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಯ ಮೂಲಕ ಯುವಸಮುದಾಯದ ಜೊತೆಗೆ ಹಿರಿಯರನ್ನು ಒಗ್ಗೂಡಿಸಿ ಸಮುದಾಯದಲ್ಲಿ ಒಡನಾಟ ಬೆಳೆಸುತ್ತಿರುವುದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

    ವಿಶ್ವ ಗಾಣಿಗರ ಕ್ರೀಡಾಕೂಟದ ಉದ್ಘಾಟನೆ ಬಳಿಕ ಮೈದಾನದಲ್ಲಿ ಟಾಸ್‌ ಆಯ್ಕೆ ನೀಡಿದ ಶಾಸಕ ಡಾ.ಭರತ್‌ ಶೆಟ್ಟಿ.

    ಮಂಗಳೂರು ಗಾಣಿಗ ಸಂಘದ ಅಧ್ಯಕ್ಷ ನಾರಾಯಣ ಸಪಲ್ಯ ಕಣ್ಣೂರು ದೀಪ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ದಕ್ಷಿಣಕನ್ನಡ ಜಿಲ್ಲಾ ಗಾಣಿಗರ ಸಂಘದ ಮಾಜಿ ಅಧ್ಯಕ್ಷ ವಿಶ್ವಾಸ್​ ಕುಮಾರ್​ ದಾಸ್​ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಶಾಸಕ ಯು.ಟಿ. ಖಾದರ್​, ಮೂಲ್ಕಿ-ಮೂಡಬಿದರೆ ಶಾಸಕ ಉಮಾನಾಥ ಕೋಟ್ಯಾನ್​, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್​ ಕಾಮತ್​, ಉದ್ಯಮಿ ಜನಾರ್ಧನ ಅರ್ಕುಳ, ವಿಜಿಸಿ(ರಿ.) ಅಧ್ಯಕ್ಷ ಹರಿಪ್ರಸಾದ್​ ಶಕ್ತಿನಗರ, ಮಂಜೇಶ್ವರ ಗಾಣಿಗ ಸಂಘ ಅಧ್ಯಕ್ಷ ತುಕಾರಾಂ ಕುಂಬ್ಳೆ, ಮಳಲಿ ಗಾಣಿಗ ಸಂಘ ಅಧ್ಯಕ್ಷ ಕಾಂತಪ್ಪ ಸಪಲಿಗ, ಕೋಶಾಧಿಕಾರಿ ಮೋಹನ್​, ಉಳ್ಳಾಲ ಗಾಣಿಗ ಸಂಘ ಅಧ್ಯಕ್ಷ ಪ್ರಕಾಶ್​ ಎಚ್.​ ಕೊಲ್ಯ, ಸೋಮೇಶ್ವರ ಗಾಣಿಗ ಸಂಘ ಅಧ್ಯಕ್ಷ ಎಸ್​. ರಾಮ್​ದಾಸ್​, ಕರಾವಳಿ ಕ್ರೆಡಿಟ್​ ಕೋ-ಆಪರೇಟಿವ್​ ಸೊಸೈಟಿ ಅತ್ತಾವರ ನಿರ್ದೇಶಕರಾದ ಜ್ಯೋತಿ ಯಲ್ಬುರ್ಗಿ, ರಮೇಶ್​ ಮೆಂಡನ್​, ಸುಮಂಗಲ ಕ್ರೆಡಿಟ್​ ಕೋ-ಆಪರೇಟಿವ್​ ಸೊಸೈಟಿ ಪಾಣೆಮಂಗಳೂರು ಅಧ್ಯಕ್ಷ ನಾಗೇಶ್​ ಕಲ್ಲಡ್ಕ, ಸಫಲ ಸೌಹಾರ್ದ ಸೊಸೈಟಿ ನಿಯಮಿತ ಅಧ್ಯಕ್ಷ ಸಂಜೀವ ಅಡ್ಯಾರ್​, ನಿರ್ದೇಶಕರಾದ ಎಂ. ವೆಂಕಟೇಶ್​ ಕದ್ರಿ, ರಾಮ್​ದಾಸ್​, ಸುನೀಲ್​ ಪಾಣೆಮಂಗಳೂರು, ಶೈಲೇಶ್​ ಕೀರ್ತೇಶ್ವರ ಮತ್ತಿತರರು ಉಪಸ್ಥಿತರಿದ್ದರು.

    ಗಣ್ಯರಿಂದ ಮೆಚ್ಚುಗೆ

    ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ್​ ಪೂಜಾರಿಯವರು ಕರೆಮಾಡಿ, ವಿಜಿಸಿ(ರಿ.) ತಂಡವನ್ನು ಒಂದು ವಾರದೊಳಗೆ ತನ್ನಲ್ಲಿಗೆ ಕರೆಸಿಕೊಂಡು ಮಾತನಾಡುವುದಾಗಿ ತಿಳಿಸಿದರು. ಬಂಟ್ವಾಳ ಶಾಸಕ ರಾಜೇಶ್​ ನಾಯ್ಕ್​ ಉಳಿಪ್ಪಾಡಿ, ಬೆಳ್ತಂಗಡಿ ಶಾಸಕ ಹರೀಶ್​ ಪೂಂಜಾ, ಮಂಗಳೂರು ಶಾಸಕ ಯು.ಟಿ. ಖಾದರ್​ ಸಹಕಾರದ ಭರವಸೆ ನೀಡಿ, ಕಾರ್ಯಕ್ರಮಕ್ಕೆ ಶುಭಕೋರಿದರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್​ ಕಾಮತ್​ ಫೈನಲ್​ ಪಂದ್ಯಾಟವನ್ನು ವೀಕ್ಷಿಸಿ ಕ್ರೀಡಾಪಟುಗಳನ್ನು ಹುರಿದುಂಬಿಸಿದರು.

    ವಿಶ್ವ ಗಾಣಿಗ ಟ್ರೋಫಿ ವಿಜೇತ ಫ್ರೆಂಡ್ಸ್​ ಜಕ್ರಿಬೆಟ್ಟು ಕ್ರಿಕೆಟ್‌ ತಂಡ

    ಫಲಿತಾಂಶ: ಕ್ರಿಕೆಟ್​ ಪಂದ್ಯಾಟದಲ್ಲಿ ಫ್ರೆಂಡ್ಸ್​ ಜಕ್ರಿಬೆಟ್ಟು ಪ್ರಥಮ, ಶ್ರೀದುರ್ಗಾ ಕ್ರಿಕೆಟರ್ಸ್​ ಪಾಣೆಮಂಗಳೂರು ದ್ವೀತಿಯ, ಲಗೋರಿ ಪಂದ್ಯಾಟದಲ್ಲಿ ಗಾಣಿಗ ರಾಕರ್ಸ್​ ಕೀರ್ತೇಶ್ವರ ಪ್ರಥಮ, ಗಾಣಿಗ ಸೇವಾ ಸಂಘ ಮೂಡಬಿದರೆ ದ್ವೀತಿಯ ಬಹುಮಾನ ಪಡೆದರು.

    ಮಹಿಳೆಯರಿಗಾಗಿ ಆಯೋಜಿಸಿದ್ದ ಲಗೋರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಿಜೇತ ಗಾಣಿಗ ರಾಕರ್ಸ್​ ಕೀರ್ತೇಶ್ವರ ತಂಡ.

    ನೇತ್ರದಾನ ಘೋಷಣೆ: ಕಳೆದ ಬಾರಿ ಕ್ರೀಡಾಕೂಟದಲ್ಲಿ 100 ಮಂದಿ ವಿಜಿಸಿ ಸದಸ್ಯರು ನೇತ್ರದಾನ ಘೋಷಣಾ ಪತ್ರಕ್ಕೆ ಸಹಿ ಹಾಕಿದ್ದರು. ಈ ಬಾರಿ 11 ಮಂದಿ ಹೆಚ್ಚುವರಿಯಾಗಿ ನೇತ್ರದಾನ ಘೋಷಣೆ ಮಾಡಿದ್ದಾರೆ.

    ವಿಶ್ವ ಗಾಣಿಗ ಟ್ರೋಫಿ ಸಮಾರಂಭದ ಕೆಲವು ದೃಶ್ಯಾವಳಿಗಳು

    ಸಂಬಂಧಿತ ಸುದ್ದಿ: ಭಾರತದ ಬಲಾಢ್ಯ ಪುರುಷನ ಬಾಲರ್ಕಕ್ಕೀಗ ಮತ್ತೊಂದು ತಾಣ, ಮತ್ತಷ್ಟು ತ್ರಾಣ…

    ಸಂಬಂಧಿತ ಸುದ್ದಿ: ಮಹಾರಾಷ್ಟ್ರದ ಕ್ರಿಕೆಟ್ ಕ್ಷೇತ್ರದಲ್ಲಿ ‘ಯಶಸ್’ ಸಾಧಿಸುತ್ತಿರುವ ‘ಗಾಣಿಗ ಬ್ರಿಲಿಯಂಟ್’

    ಸಂಬಂಧಿತ ಸುದ್ದಿ: ಕಿಕ್‌ ಬಾಕ್ಸಿಂಗ್‌ನಲ್ಲಿ ಗೆದ್ದ ಈ ಅವಳಿ ಸೋದರಿಯರು ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!