Friday, May 17, 2024
spot_img
More

    Latest Posts

    ಮಹಾರಾಷ್ಟ್ರದ ಕ್ರಿಕೆಟ್ ಕ್ಷೇತ್ರದಲ್ಲಿ ‘ಯಶಸ್’ ಸಾಧಿಸುತ್ತಿರುವ ‘ಗಾಣಿಗ ಬ್ರಿಲಿಯಂಟ್’

    ಬೆಂಗಳೂರು: ಇವನು ಫೀಲ್ಡಿಗಿಳಿದರೆ ಬ್ಯಾಟಿಂಗಿಗೂ ಸೈ, ಕೀಪಿಂಗಿಗೂ ಸೈ. ಪಿಚ್‌ನಲ್ಲಿ ನಿಂತು ಬ್ಯಾಟ್ ಬೀಸಿದರೆ ರನ್ ಗಳಿಕೆಯಲ್ಲೂ ಮೇಲುಗೈ. ವಿಶೇಷ ಎಂದರೆ ಯಶಸ್ ಎನ್ನುವುದು ಈತನ ಹೆಸರಿಗಷ್ಟೇ ಸೀಮಿತವಾಗದೆ ಎಲ್ಲ ಬೌಂಡರಿಗಳನ್ನೂ ದಾಟಿ ಸಿಕ್ಸರ್ ಬಾರಿಸುತ್ತಿದೆ. ಮಹಾರಾಷ್ಟ್ರದ ತನ್ನ ಸಹ ಕ್ರಿಕೆಟಿಗರ ವಲಯದಲ್ಲಿ “ಗಾಣಿಗ ಬ್ರಿಲಿಯಂಟ್” ಎಂದೇ ಕರೆಯಲ್ಪಡುತ್ತಿರುವ ಈ ಉದಯೋನ್ಮುಖ ಕ್ರಿಕೆಟಿಗನ ಹೆಸರು ಯಶಸ್ ಗಾಣಿಗ.

    ಬೆಸ್ಟ್ ಬ್ಯಾಟ್ಸ್‌ಮನ್, ಬೆಸ್ಟ್ ವಿಕೆಟ್ ಕೀಪರ್: ಯಶಸ್ ಗಾಣಿಗ ಇದೇ ಮಾರ್ಚ್‌ನಲ್ಲಿ ಮಹಾರಾಷ್ಟ್ರದ ಸಾವಂತವಾಡಿಯಲ್ಲಿ ನಡೆದ ಜಿಲ್ಲಾಮಟ್ಟದ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಒಂದು ಶತಕ ಹಾಗೂ ಒಂದು ಅರ್ಧ ಶತಕ ಬಾರಿಸಿದ್ದಲ್ಲದೆ, ಬೆಸ್ಟ್ ಬ್ಯಾಟ್ಸ್‌ಮನ್ ಹಾಗೂ ಬೆಸ್ಟ್ ವಿಕೆಟ್ ಕೀಪರ್ ಆಗಿಯೂ ಹೊರಹೊಮ್ಮಿದ್ದಾನೆ.

    ನಾಲ್ಕು ಗಂಟೆಗಳ ಸತತ ಬ್ಯಾಟಿಂಗ್‌ ಬಳಿಕ ಯಶಸ್‌ ಗಾಣಿಗ

    ಅಲ್ಲದೆ ಇತ್ತೀಚೆಗೆ ತನ್ನ ಶಾಲಾ ಟೂರ್ನಮೆಂಟ್‌ನಲ್ಲಿ ಗೇಲ್ಸ್ (GAILS) ಅಂಡರ್-14ರಲ್ಲಿ ಒಂದು ಪಂದ್ಯದಲ್ಲಿ ಶಾರದಾಶ್ರಮ ತಂಡದ ವಿರುದ್ಧ ಸತತ ನಾಲ್ಕು ಗಂಟೆಗೂ ಅಧಿಕ ಕಾಲ ಬ್ಯಾಟಿಂಗ್ ಮಾಡಿ, ತಮ್ಮ ಶಾಲೆಯ ತಂಡಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾನೆ. ಜೊತೆಗೆ ಎಂಐಜಿ ಕ್ಲಬ್‌ನಲ್ಲಿ ಅಂಡರ್-12 ಹಾಗೂ ಅಂಡರ್-14 ಎರಡರಲ್ಲೂ ಆಡಿದ್ದಾನೆ. ಅದರಲ್ಲೂ ಅಂಡರ್-12 ತಂಡಕ್ಕೆ ಇವನೇ ಕ್ಯಾಪ್ಟನ್‌‌. ಎಂಐಜಿ ಕ್ಲಬ್‌ನಲ್ಲಿ ಕ್ರಿಕೆಟ್ ಕೋಚ್ ಆಗಿರುವ ಪ್ರಶಾಂತ್ ಶೆಟ್ಟಿ ಹಾಗೂ ಚಂದು ಅವರು ಯಶಸ್‌ಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

    ಸಚಿನ್‌ ತೆಂಡುಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡುಲ್ಕರ್‌ ಜೊತೆಗೆ ಯಶಸ್‌ ಗಾಣಿಗ

    ಯಶಸ್ ಕಿರು ಪರಿಚಯ: ಯಶಸ್ ಮೂಲತಃ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ನಾವುಂದದ ಬಡಾಕೆರೆಯವರಾದ ಜಗದೀಶ್ ಗಾಣಿಗ- ಮಹಾಲಕ್ಷ್ಮಿ ಗಾಣಿಗ ಅವರ ಪುತ್ರ. ಸದ್ಯ ಈತ ತಂದೆ-ತಾಯಿ ಜೊತೆ ಮಹಾರಾಷ್ಟ್ರದಲ್ಲಿ ನೆಲೆಸಿರುತ್ತಾನೆ. ಮುಂಬೈ ಅಂಧೇರಿ ಪೂರ್ವದ ಹೋಲಿ ಫ್ಯಾಮಿಲಿ ಹೈಸ್ಕೂಲ್‌ನಲ್ಲಿ ಎಲ್‌ಕೆಜಿಯಿಂದ ನಾಲ್ಕನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿರುವ ಯಶಸ್, ಐದನೇ ತರಗತಿಗೆ ಪಾರ್ಲೆ ತಿಲಕ್ ವಿದ್ಯಾಮಂದಿರಕ್ಕೆ ಸೇರಿದ್ದು, ಸದ್ಯ ಇಲ್ಲಿ ಏಳನೇ ತರಗತಿಯ ವಿದ್ಯಾರ್ಥಿ ಆಗಿರುತ್ತಾನೆ. ಯಶಸ್ ತಂದೆ ಜಗದೀಶ್ ಗಾಣಿಗ ಅವರು ಮುಂಬೈನಲ್ಲಿ ಕ್ಯಾಟರಿಂಗ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ‘ಯಶಸ್ ಕ್ಯಾಟರರ್ಸ್’ ಎಂಬ ಸಂಸ್ಥೆಯನ್ನು ಇವರು ಹೊಂದಿದ್ದು, ಇದು ಮುಂಬೈನ ಪೂರ್ವ ಅಂಧೇರಿಯ ಕಜುವಾಡಿಯಲ್ಲಿ ಕಚೇರಿಯನ್ನು ಹೊಂದಿದೆ.

    ತಂದೆ ಜಗದೀಶ್‌ ಗಾಣಿಗ, ತಾಯಿ ಮಹಾಲಕ್ಷ್ಮಿ ಜೊತೆ ಯಶಸ್‌ ಗಾಣಿಗ

    ಎಂಐಜಿ ಕ್ರಿಕೆಟ್ ಕ್ಲಬ್ ಸದಸ್ಯ: ಬಾಲ್ಯದಿಂದಲೇ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದ್ದು, ಗಮನ ಸೆಳೆಯುವ ರೀತಿಯಲ್ಲಿ ಪ್ರದರ್ಶನ ನೀಡುತ್ತಿರುವ ಯಶಸ್ ತನ್ನ ಶಾಲೆಯ ಪಾರ್ಲೆ ತಿಲಕ್ ವಿದ್ಯಾಮಂದಿರದ ಕ್ರಿಕೆಟ್ ಅಕಾಡೆಮಿ ಸದಸ್ಯನಾಗಿಯೂ ಅಭ್ಯಾಸ ಮಾಡಿದ್ದಾನೆ. ಇಲ್ಲಿ ಮುಖ್ಯ ಕೋಚ್ ಆಗಿರುವ ದಿವಾಕರ್ ಶೆಟ್ಟಿ ಅವರು ಯಶಸ್ ಕ್ರಿಕೆಟ್ ಆಟಕ್ಕೆ ಮಾರುಹೋಗಿ ಈತನನ್ನು ಮುಂಬೈನ ಬಾಂದ್ರಾದಲ್ಲಿರುವ ಪ್ರತಿಷ್ಠಿತ ಎಂಐಜಿ ಕ್ರಿಕೆಟ್ ಕ್ಲಬ್‌ಗೆ ಸೇರಿಸಿದ್ದಾರೆ.

    ಕೋಚ್‌ ದಿವಾಕರ್‌ ಶೆಟ್ಟಿ ಅವರ ಜೊತೆ ಯಶಸ್‌ ಗಾಣಿಗ

    ಗಾಣಿಗ ಬ್ರಿಲಿಯಂಟ್: ಕ್ರಿಕೆಟ್‌ ಜೊತೆಗೆ ವಿದ್ಯಾಭ್ಯಾಸದಲ್ಲೂ ಯಶಸ್ ಚುರುಕಾಗಿರುವುದರಿಂದ ಶಾಲಾ ಆಡಳಿತ ಮಂಡಳಿ, ಬೋಧಕ ವರ್ಗ ಈತನನ್ನು “ಗಾಣಿಗ ಬ್ರಿಲಿಯಂಟ್” ಎಂದೇ ಕರೆದು ಪ್ರೋತ್ಸಾಹಿಸುತ್ತಿದೆ. ಹೀಗಾಗಿ ಈತನ ಸ್ನೇಹಿತರು, ಸಹ ಕ್ರಿಕೆಟಿಗರ ಜೊತೆಗೆ ಕೋಚ್‌ಗಳು ಕೂಡ ಈತನ ನೈಜ ಹೆಸರು ಹೇಳಿ ಕರೆಯುವ ಬದಲು “ಗಾಣಿಗ ಬ್ರಿಲಿಯಂಟ್” ಎಂಬ ನಿಕ್ ನೇಮ್‌ನಿಂದಲೇ ಕರೆಯುತ್ತಿದ್ದಾರೆ.

    ಕೋಚ್‌ಗಳಾದ ಪ್ರಶಾಂತ್‌ ಶೆಟ್ಟಿ ಹಾಗೂ ಚಂದು ಅವರ ಜೊತೆ ಯಶಸ್‌ ಗಾಣಿಗ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ ಈ ಕೆಳಗಿನ 'ಐಡಿ'ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ.
    G-Mail ID: [email protected]

    ಸಂಬಂಧಿತ ಸುದ್ದಿ: ರಾಷ್ಟ್ರಮಟ್ಟದ ಪವರ್‌ಲಿಫ್ಟಿಂಗ್‌ನಲ್ಲಿ ರಶ್ಮಿತಾ ಗಾಣಿಗರಿಗೆ ರಜತ ಪದಕ; ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಪ್ರತಿಭೆ 

    ಸಂಬಂಧಿತ ಸುದ್ದಿ: ದೊಡ್ಮನೆ ಹುಡುಗ್ರಿಗೆ ಗಾಣಿಗ ಪ್ರೀಮಿಯರ್ ಕಪ್, ಕುಮಟಾ ಚಾಲೆಂಜರ್ಸ್‌ಗೆ ರನ್ನರ್ ಅಪ್ 

    ಸಂಬಂಧಿತ ಸುದ್ದಿ: ತನ್ನದೇ ದಾಖಲೆ ಮುರಿದು ಮತ್ತೊಂದು ದಾಖಲೆ ಸೃಷ್ಟಿಸಿದ ವಿಶ್ವನಾಥ ಭಾಸ್ಕರ ಗಾಣಿಗ 

    ಸಂಬಂಧಿತ ಸುದ್ದಿ: ಭಳಿರೆ ‘ಬಾಲರ್ಕ’.. ಇದು ಬಲಾಢ್ಯ ಭಾರತೀಯನ ಗರಡಿ! 

    ಸಂಬಂಧಿತ ಸುದ್ದಿ: ಅಂತಾರಾಷ್ಟ್ರೀಯ ಸೈಕ್ಲಿಂಗ್ ಸಾಧಕ ರಾಜು ಭಾಟಿಗೆ ಏಕಲವ್ಯ ಪ್ರಶಸ್ತಿ ಪ್ರದಾನ

    ಸಂಬಂಧಿತ ಸುದ್ದಿ: ಬಾಲ್ ಬ್ಯಾಡ್ಮಿಂಟನ್ ಪ್ರತಿಭೆ ಜಯಲಕ್ಷ್ಮಿಗೆ ಕ್ರೀಡಾರತ್ನ ಪ್ರಶಸ್ತಿ ಪ್ರದಾನ 

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!