Saturday, September 21, 2024
spot_img
More

    Latest Posts

    ಥಾಣೆ ನಿತ್ಯಾನಂದ ಸೇವಾ ಸಂಸ್ಥೆಯಿಂದ ಗಣೇಶಪುರಿ ಯಾತ್ರೆ

    ಬೆಂಗಳೂರು: ಗಂಗೊಳ್ಳಿ ಗೋಪಾಲಕೃಷ್ಣ ಗೋವಿಂದ ಗಾಣಿಗ (4G) ಅವರು ಅಧ್ಯಕ್ಷರಾಗಿರುವ ಮೀರಾಭಾಯಿಂದರ್ ಶ್ರೀ ನಿತ್ಯಾನಂದ ಸೇವಾ ಸಂಸ್ಥೆಯ ವತಿಯಿಂದ ಫೆ. 6ರಂದು ಗಣೇಶಪುರಿ ಯಾತ್ರೆ ಆಯೋಜಿಸಲಾಗಿತ್ತು.

    ಅಂದು ಬೆಳಗ್ಗೆ 7 ಗಂಟೆಗೆ ಮೀರಾರೋಡು ಸಿಲ್ವರ್ ಪಾರ್ಕ್​​ನ ಮಂದಿರದ ವಠಾರದಲ್ಲಿ ಯಾತ್ರೆ ಆರಂಭವಾಯಿತು. ನಿತ್ಯಾನಂದ ಸ್ವಾಮಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭುವಾಜಿಗಳಾದ ನಾರಾಯಣ ಶೆಟ್ಟಿ ಮತ್ತು ಚಾಮುಂಡೇಶ್ವರಿ ಸನ್ನಿಧಿಯ ಲಕ್ಷ್ಮಣ ಶೆಟ್ಟಿಯವರು ಯಾತ್ರೆಯ ಬಸ್ಸುಗಳಿಗೆ ಚಾಲನೆ ನೀಡಿದರು. ಸುಮಾರು 160 ಮಂದಿ ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದು ಶ್ರೀ ನಿತ್ಯಾನಂದ ಸ್ವಾಮಿ ಹಾಗೂ ವಜ್ರೇಶ್ವರಿ ಮಾತೆಯ ದರ್ಶನ ಪಡೆದರು.

    ಯಾತ್ರಿಗಳಿಗೆ ಉತ್ತಮವಾದ ಊಟದ ವ್ಯವಸ್ಥೆ ಮಾಡಿದ ವಸಾಯಿ ಉಡುಪಿ ಶ್ರೀ ಕೃಷ್ಣ ಹೋಟೆಲ್​ನ ಹರೀಶ್ ಭಂಡಾರಿ ಮತ್ತು ಸುಂದರ ಶೆಟ್ಟಿ ಅವರನ್ನು ಶಾಲು ತೊಡಿಸಿ ತುಳಸಿ ಗಿಡ ನೀಡಿ ಅಭಿನಂದಿಸಲಾಯಿತು.

    ಈ ಯಾತ್ರೆಗೆ ಕುಕ್ಕುಂದೂರು ಆನಂದ ಶೆಟ್ಟಿ, ಗೋಪಾಲ ಗಾಣಿಗ, ಸೀತಾರಾಮ ಶೆಟ್ಟಿ, ವಸಂತಿ ಶೆಟ್ಟಿ, ಚಂದ್ರಹಾಸ ಕೆ. ಶೆಟ್ಟಿ, ಚಿರಂಜೀವಿ ಸುರೇಶ್ ಶೆಟ್ಟಿ, ಉದಯ ಶೆಟ್ಟಿ, ಕರುಣಾಕರ ಶೆಟ್ಟಿ ಮೊದಲಾದವರ ಸಹಕಾರವಿದ್ದು, ಸಂಸ್ಥೆಯ ವತಿಯಿಂದ ಅವರಿಗೂ ಅಭಿನಂದನೆಗಳನ್ನು ಸಲ್ಲಿಸಲಾಯಿತು.

    ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಗೋವಿಂದ ಗಾಣಿಗ, ಗೌರವಾಧ್ಯಕ್ಷ ಮಹಾಬಲ ಸಮಾನಿ, ಕಾರ್ಯದರ್ಶಿ ಅಮಾವಾಸ್ಯೆಬೈಲು ಸೀತಾರಾಮ ಶೆಟ್ಟಿ, ಕೋಶಾಧಿಕಾರಿ ಶೈಲೇಶ್ ಶೆಟ್ಟಿ ಸೂಡ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಜಯಶ್ರೀ ಬಿ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ ಕಾಪು, ಮುಖ್ಯ ಸಲಹೆಗಾರ ಗುಣಪಾಲ್ ಉಡುಪಿ, ಸಂಚಾಲಕ ಆನಂದ ಶೆಟ್ಟಿ ಕುಕ್ಕುಂದೂರು ಹಾಗೂ ಸದಸ್ಯರು ಯಾತ್ರೆಯಲ್ಲಿ ಭಾಗವಹಿಸಿದ್ದರು.

    ಸಂಬಂಧಿಕ ಸುದ್ದಿ: ಇಂದಿನ ನ್ಯಾಷನಲ್ ಕಾಲೇಜನ್ನು ಆರಂಭಿಸಿದ್ದು ಅಂದಿನ ದೊಡ್ಡಣ್ಣ ಶೆಟ್ಟರೇ..

    ಸಂಬಂಧಿಕ ಸುದ್ದಿ: ಕರಾವಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹೋದರ ಸೋಮಭಾಯಿ; 4 ದಿನಗಳ ಪ್ರವಾಸದ ಬಳಿಕ ಗುಜರಾತ್‌ಗೆ ನಿರ್ಗಮನ

    ಸಂಬಂಧಿಕ ಸುದ್ದಿ: ಶಾಸಕ ದಿನಕರ ಶೆಟ್ಟಿ, ಶಾಸಕಿ ರೂಪಾಲಿ ನಾಯ್ಕ ಮಧ್ಯೆ ಮಾತಿನ ಚಕಮಕಿ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!