Sunday, September 22, 2024
spot_img
More

    Latest Posts

    ಇದೇ ವಾರಾಂತ್ಯದಲ್ಲಿ ನಡೆಯಲಿದೆ ಗಾಣಿಗ ಪ್ರೀಮಿಯರ್ ಕಪ್​-2022 ಪಂದ್ಯಾವಳಿ

    ಬೆಂಗಳೂರು: ಯೂತ್‌ ಗಾಣಿಗ ಕುಮಟಾ ಹಾಗೂ ಗಾಣಿಗ ಯುವ ಬಳಗ (ರಿ.) ಜಂಟಿಯಾಗಿ ಹಮ್ಮಿಕೊಂಡಿರುವ ಗಾಣಿಗ ಪ್ರೀಮಿಯರ್‌ ಕಪ್-2022 ಪಂದ್ಯಾವಳಿಯು ಇದೇ ಫೆಬ್ರವರಿ 26 ಮತ್ತು 27ರಂದು ನಡೆಯಲಿದೆ. ಇದು ಇವರು ಆಯೋಜಿಸುತ್ತಿರುವ ನಾಲ್ಕನೇ ವರ್ಷದ ಪಂದ್ಯಾವಳಿಯಾಗಿದೆ.

    ಕ್ರಿಕೆಟ್ ಪಂದ್ಯಾವಳಿ ಮಾತ್ರವಲ್ಲದೆ ಇದೇ ಸಂದರ್ಭದಲ್ಲಿ ಗಾಣಿಗ ಸಮಾಜದ ನಿವೃತ್ತ ಸೈನಿಕರಿಗೆ ಸನ್ಮಾನ ಕಾರ್ಯಕ್ರಮವೂ ಇರಲಿದೆ. ಅಲ್ಲದೆ ಗಾಣಿಗ ಯುವ ಬಳಗದ ವೆಬ್​ಸೈಟ್ ಲೋಕಾರ್ಪಣೆ ಕೂಡ ನಡೆಯಲಿದೆ. ಜತೆಗೆ ಸಭಾ ಕಾರ್ಯಕ್ರಮದ ಬಳಿಕ ಗಾಣಿಗ ಸಮಾಜದ ಮಕ್ಕಳಿಂದ ಮನರಂಜನಾ ಕಾರ್ಯಕ್ರಮದ ಪ್ರಸ್ತುತಿಯೂ ಇರಲಿದೆ.

    ಗಾಣಿಗ ಸಮಾಜದವರಿಗೆ ಸೀಮಿತವಾಗಿ ಈ ಪಂದ್ಯಾವಳಿ ನಡೆಯಲಿದ್ದು, ವಿಶೇಷ ಆಕರ್ಷಣೆಯಾಗಿ ಲೂಡೋ ಕಿಂಗ್‌ ಲೂಡೋ ಮ್ಯಾಚ್‌ ಮತ್ತು ಮಹಿಳೆಯರಿಗಾಗಿ ಸಂಗೀತ ಕುರ್ಚಿ ಸ್ಪರ್ಧೆ ಕೂಡ ಇರಲಿದೆ. ಲೂಡೋ ಕಿಂಗ್‌ನಲ್ಲಿ 16 ವರ್ಷದೊಳಗಿನ ಹುಡುಗರು ಮಾತ್ರ ಭಾಗವಹಿಸಬಹುದು. ಆದರೆ ಮಹಿಳೆಯರಿಗೆ ವಯಸ್ಸಿನ ನಿರ್ಬಂಧವಿಲ್ಲ.

    ಗಾಣಿಗ ಪ್ರೀಮಿಯರ್‌ ಕಪ್‌-2022ರ ಪ್ರಥಮ ಬಹುಮಾನವಾಗಿ 35,555 ರೂಪಾಯಿ ಹಾಗೂ ದ್ವಿತೀಯ ಬಹುಮಾನವಾಗಿ 25,555 ರೂಪಾಯಿ ನಗದು ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಈ ಹಿಂದೆ ಜ. 22-23ರಂದು ಈ ಪಂದ್ಯಾವಳಿ ನಡೆಸುವುದು ಎಂದು ನಿರ್ಧರಿಸಲಾಗಿತ್ತು. ಆದರೆ ಬಳಿಕ ಕರೊನಾ ಕಾರಣಕ್ಕೆ ಇದನ್ನು ಮುಂದೂಡಲಾಗಿತ್ತು.

    ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರ್‌ಗಳನ್ನು ಸಂಪರ್ಕಿಸಬಹುದು.
    ಆನಂದ ಕೆಕ್ಕಾರ್:‌ 8746939999
    ಗಣಪತಿ ಶೆಟ್ಟಿ: 9742919507
    ಸುಬ್ರಹ್ಮಣ್ಯ ಶೆಟ್ಟಿ: 9739550108.

    ಸಂಬಂಧಿತ ಸುದ್ದಿ: ಇಂದಿನ ನ್ಯಾಷನಲ್ ಕಾಲೇಜನ್ನು ಆರಂಭಿಸಿದ್ದು ಅಂದಿನ ದೊಡ್ಡಣ್ಣ ಶೆಟ್ಟರೇ..

    ಸಂಬಂಧಿತ ಸುದ್ದಿ: ಥಾಣೆ ಭಾರತ್‌ ಕೋ-ಆಪರೇಟಿವ್‌ ಬ್ಯಾಂಕ್‌ ರಜತ ಮಹೋತ್ಸವ; ಗೋಪಾಲಕೃಷ್ಣ ಗಾಣಿಗರಿಂದ ಉದ್ಘಾಟನೆ

    ಸಂಬಂಧಿತ ಸುದ್ದಿ: ಭಾರತದ ಬಲಾಢ್ಯ ಪುರುಷನ ಬಾಲರ್ಕಕ್ಕೀಗ ಮತ್ತೊಂದು ತಾಣ, ಮತ್ತಷ್ಟು ತ್ರಾಣ…

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!