Friday, June 14, 2024
spot_img
More

    Latest Posts

    ಅದ್ಧೂರಿಯಾಗಿ ನಡೆಯಿತು ಕೊಪ್ಪಳ ಜಿಲ್ಲಾ ನೂತನ ಗಾಣಿಗ ಸಮುದಾಯ ಭವನ ಉದ್ಘಾಟನೆ

    ಬೆಂಗಳೂರು: ಕೊಪ್ಪಳದ ರೈಲ್ವೇ ಗೇಟ್ ಹತ್ತಿರದ ಕುಷ್ಟಗಿ ರಸ್ತೆಯಲ್ಲಿ ನಿರ್ಮಾಣವಾಗಿರುವ ಕೊಪ್ಪಳ ಜಿಲ್ಲಾ ನೂತನ ಗಾಣಿಗ ಸಮುದಾಯ ಭವನದ ಉದ್ಘಾಟನೆ ಹಾಗೂ ಗಾಣದ ಕಣ್ಣಪ್ಪ ಪುತ್ಥಳಿ ಅನಾವರಣ ಮತ್ತು ಕಳಸಾರೋಹಣ ಕಾರ್ಯಕ್ರಮ ಫೆ. 26 ಮತ್ತು 27ರಂದು ನೆರವೇರಿದವು. ಅಲ್ಲದೆ ಭೂದಾನಿ ದಿ‌. ಕಸ್ತೂರಮ್ಮ ಬಸನಗೌಡ ಪಾಟೀಲ್ ಸ್ಮರಣಾರ್ಥ ಕೊಡದಾಳ ಕ್ರಾಸ್‌ನಲ್ಲಿ ವಿದ್ಯಾವಿಕಾಸ ಸಂಕೀರ್ಣದ ಶಿಲಾನ್ಯಾಸ ಕಾರ್ಯಕ್ರಮ ಕೂಡ ಇದೇ ಸಂದರ್ಭದಲ್ಲಿ ನಡೆಯಿತು.

    ಕೊಪ್ಪಳ ಜಿಲ್ಲಾ ನೂತನ ಗಾಣಿಗರ ಸಮುದಾಯ ಭವನದ ಉದ್ಘಾಟನೆ ಹಾಗೂ ಗಾಣದ ಕಣ್ಣಪ್ಪ ಪುತ್ಥಳಿ ಅನಾವರಣ ಮತ್ತು ವಿದ್ಯಾವಿಕಾಸ ಸಂಕೀರ್ಣ ಶಿಲಾನ್ಯಾಸ ಸಮಾರಂಭದ ಬೃಹತ್ ಸಮಾವೇಶವನ್ನು ಸಚಿವ ಹಾಲಪ್ಪ ಆಚಾರ್‌ ಉದ್ಘಾಟಿಸಿದರು. ಗಾಣಿಗ ಗುರುಪೀಠದ ಡಾ.ಜಯಬಸವಕುಮಾರ ಸ್ವಾಮೀಜಿ, ಜಮಖಂಡಿ ಮೂಲಸಿದ್ಧೇಶ್ವರ ಕ್ಷೇತ್ರದ ಶ್ರೀಸಿದ್ಧುಮುತ್ಯಾ, ಶ್ರೀಕೇಶವಾನಂದ ಸ್ವಾಮೀಜಿ ಅವರ ದಿವ್ಯಸಾನ್ನಿಧ್ಯದಲ್ಲಿ ಈ ಸಮಾರಂಭ ನೆರೆವೇರಿತು.

    ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಂಸದ ಸಂಗಣ್ಣ ಕರಡಿ, ಶಾಸಕರಾದ ಪರಣ್ಣ ಮುನವಳ್ಳಿ, ರಾಘವೇಂದ್ರ ಹಿಟ್ನಾಳ, ಅಮರೇಗೌಡ ಬಯ್ಯಾಪೂರ, ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಹಾಗೂ ಕೊಪ್ಪಳ ಜಿಲ್ಲಾ ಗಾಣಿಗ ಸಮಾಜದ ಗೌರವಾಧ್ಯಕ್ಷ ರುದ್ರಮುನಿ ಗಾಳಿ, ಅಧ್ಯಕ್ಷ ತೋಟಪ್ಪ ಕಾಮನೂರು ಹಾಗೂ ರತನ ದೇಸಾಯಿ, ಅರವಿಂದಗೌಡ ಪಾಟೀಲ, ಅಯ್ಯನಗೌಡ ಕೆಂಚಮ್ಮನವರ, ಶಿವಶಂಕರಾವ್ ದೇಸಾಯಿ, ಸುಧಾಕರ ದೇಸಾಯಿ ಮುಂತಾದವರು ಉಪಸ್ಥಿತರಿದ್ದರು.

    ಸಂಬಂಧಿತ ಸುದ್ದಿ: ಗಾಣಿಗ ನಿಗಮ-ಮಂಡಳಿಗಾಗಿ ಮೋದಿಯ ಸೆಳೆಯುವತ್ತ ಗಾಣಿಗ ಮುಖಂಡರ ಚಿತ್ತ

    ಸಂಬಂಧಿತ ಸುದ್ದಿ: ಗಾಣಿಗ ಸಮುದಾಯದ ವಿದ್ಯಾರ್ಥಿಗಳಿಗೊಂದು ಸುವರ್ಣಾವಕಾಶ

    ಸಂಬಂಧಿತ ಸುದ್ದಿ: ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಡ ಸೆರಗಿನ ಸೂಡಿಯ ಭುಗಿಲು

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!