Friday, May 17, 2024
spot_img
More

    Latest Posts

    ಹೆಸರಾಂತ ಹಳ್ಳಿಮನೆ ಈಗ ಚಿನ್ನದೂರಿನ ಹೆದ್ದಾರಿಯಲ್ಲೂ..

    ಬೆಂಗಳೂರು: ʼಕೋಲಾರವೆಂದರೆ..? ಥಟ್‌ ಅಂತ ಹೇಳಿ..ʼ ಎಂಬುದಾಗಿ ಯಾರಾದರೂ ಕೇಳಿದರೆ ತಕ್ಷಣ ಮನಸಿಗೆ ಬರುವುದು ಚಿನ್ನ-ಕೆಜಿಎಫ್‌. ಇನ್ನು ಅದರ ಜೊತೆಗೆ ʼಹಳ್ಳಿಮನೆ ಹೈವೇʼ ಎಂದು ಮತ್ತೊಂದು ಹೆಸರನ್ನು ಸೇರಿಸುವಂತಾದರೂ ಅಚ್ಚರಿ ಏನಿಲ್ಲ.

    ಏಕೆಂದರೆ ಆಹಾರೋದ್ಯಮದಲ್ಲಿ ಒಂದು ಬ್ರ್ಯಾಂಡ್‌ ಆಗಿ ಗುರುತಿಸಿಕೊಂಡಿರುವ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಶಾಖೆಗಳನ್ನು ಹೊಂದಿರುವ ಹೋಟೆಲ್‌ ʼಹಳ್ಳಿಮನೆʼ ಈಗ ಕೋಲಾರದ ಸಮೀಪದಲ್ಲೂ ಒಂದು ಶಾಖೆಯನ್ನು ತೆರೆದಿದೆ.

    ಬೆಂಗಳೂರು-ಕೋಲಾರ ಹೆದ್ದಾರಿಯಲ್ಲಿ ನೂತನವಾಗಿ ಆರಂಭವಾಗಿರುವ ʼಹಳ್ಳಿಮನೆ ಹೈವೇʼ ಇದೀಗ ಚಿನ್ನದೂರಿನ ಜನರಿಗೂ ರಸದೂಟ ಬಡಿಸಲು ಪ್ರಾರಂಭಿಸಿದೆ. ಇತ್ತೀಚೆಗಷ್ಟೇ ಶುರುವಾಗಿರುವ ʼಹಳ್ಳಿಮನೆ ಹೈವೇʼ ಸ್ಥಳೀಯರಲ್ಲದೆ ಹೆದ್ದಾರಿಯಲ್ಲಿ ಸಾಗುವ ದೂರದೂರುಗಳ ಪ್ರವಾಸಿಗರನ್ನೂ ಸೆಳೆಯಲಾರಂಭಿಸಿದೆ.

    ಅಲ್ಲಿಯ ತಿಂಡಿ-ತಿನಿಸು ಸವಿದ ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದು, ಸೋಷಿಯಲ್‌ ಮೀಡಿಯಾ ಮೂಲಕ ತಮ್ಮ ಅನುಭವ ಹಂಚಿಕೊಂಡು ʼಹಳ್ಳಿಮನೆ ಹೈವೇಗೆ ಒಮ್ಮೆ ಭೇಟಿ ಕೊಡಿʼ ಎಂದು ಶಿಫಾರಸು ಕೂಡ ಮಾಡುತ್ತಿದ್ದಾರೆ.

    ಸಂಬಂಧಿತ ಸುದ್ದಿ: ‘ಸೌತ್ ತಿಂಡೀಸ್‌’ನಲ್ಲಿ ದಕ್ಷಿಣದ ಸೂರ್ಯ, ಸಾಮ್ರಾಟ್ ಅಶೋಕ..!

    ಸಂಬಂಧಿತ ಸುದ್ದಿ:ಭಾರತದ ಬಲಾಢ್ಯ ಪುರುಷನ ಬಾಲರ್ಕಕ್ಕೀಗ ಮತ್ತೊಂದು ತಾಣ, ಮತ್ತಷ್ಟು ತ್ರಾಣ…

    ಸಂಬಂಧಿತ ಸುದ್ದಿ: ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ದೀಪವೈಭವ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!