Sunday, September 22, 2024
spot_img
More

    Latest Posts

    ಎಸ್‌ಜಿಇಸಿಟಿ ಬಸವನಗುಡಿ ಘಟಕ ಮಹಿಳಾ ಸಮಿತಿ ಉದ್ಘಾಟನೆ

    ಬೆಂಗಳೂರು: ಶ್ರೀಗಾಣಿಗ ಎಜುಕೇಷನಲ್‌ ಆ್ಯಂಡ್ ಚಾರಿಟೇಬಲ್‌ ಟ್ರಸ್ಟ್‌ ಇತ್ತೀಚೆಗೆ ಬೆಂಗಳೂರಿನ ಗಾಂಧಿಬಜಾರ್‌ನ ರೋಟಿಘರ್‌ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಆಡಳಿತ ಮಂಡಳಿಯ ಸಭೆಯಲ್ಲಿ ಮಹಿಳಾ ಸಮಿತಿಯನ್ನು ಉದ್ಘಾಟಿಸಿದೆ.

    ಆರಂಭಿಕವಾಗಿ ಬಸವನಗುಡಿ ಘಟಕದ ಮಹಿಳಾ ಸಮಿತಿಯನ್ನು ರಚಿಸಿ, ಕಾರ್ಯಚಟುವಟಿಕೆಗೆ ಚಾಲನೆ ನೀಡಲಾಗಿದೆ. ನೂತನ ಸಮಿತಿಯ ಪದಾಧಿಕಾರಿಗಳ ಆಡಳಿತಾವಧಿಯು ಎರಡು ವರ್ಷಗಳದ್ದಾಗಿರುತ್ತದೆ ಎಂದು ಟ್ರಸ್ಟ್‌ ಸಂಸ್ಥಾಪಕ ಅಧ್ಯಕ್ಷ ಆರ್.‌ ನಾಗರಾಜ ಶೆಟ್ಟಿ ತಿಳಿಸಿದ್ದಾರೆ.

    ಟ್ರಸ್ಟ್‌ನ ವಾರ್ಷಿಕೋತ್ಸವದಲ್ಲಿ ಎನ್‌ಜಿಒ ಸಂಬಂಧಿತ ಕಾರ್ಯಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಈ ಮಹಿಳಾ ಸಮಿತಿಯನ್ನು ರಚಿಸಲಾಗಿದೆ. ಮುಂದೆ ಇತರ ಘಟಕಗಳಲ್ಲೂ ಇಂಥ ಸಮಿತಿಗಳನ್ನು ರಚಿಸಲಾಗುವುದು. ಈ ಸಮಿತಿಯ ಅಧ್ಯಕ್ಷರಾಗುವವರು ಟ್ರಸ್ಟ್‌ನಲ್ಲಿ ಕನಿಷ್ಠ 6 ತಿಂಗಳ ಅನುಭವ ಹೊಂದಿರಬೇಕು ಹಾಗೂ ಸದಸ್ಯರಾಗ ಬಯಸುವವರು ಟ್ರಸ್ಟ್‌ ಪೋಷಕರು ಅಥವಾ ಸದಸ್ಯರಾಗಿರಬೇಕು ಎಂದು ನಾಗರಾಜ ಶೆಟ್ಟಿ ತಿಳಿಸಿದ್ದಾರೆ.

    ಮಹಿಳಾ ಸಮಿತಿ ಅಧ್ಯಕ್ಷೆ ಅನುರಾಧಾ, ಕಾರ್ಯಾಧ್ಯಕ್ಷೆ ನೇತ್ರಾ ರಾಮಚಂದ್ರ ಅವರಿಂದ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟನೆ

    ಮಹಿಳಾ ಸಮಿತಿ ಪದಾಧಿಕಾರಿಗಳು

    • ಅಧ್ಯಕ್ಷೆ: ಎಂ.ಎಸ್.‌ ಅನುರಾಧಾ
    • ಕಾರ್ಯಾಧ್ಯಕ್ಷೆ: ನೇತ್ರಾ ರಾಮಚಂದ್ರ
    • ಉಪಾಧ್ಯಕ್ಷೆ: ಸಿ.ಶುಭಾ ರಾಜಶೇಖರ್‌
    • ಉಪಾಧ್ಯಕ್ಷೆ: ಜ್ಯೋತಿ ರಮೇಶ್‌ ವಿ.
    • ಸಂಘಟನಾ ಕಾರ್ಯದರ್ಶಿ: ಪ್ರಮೀಳಾ ಮೂರ್ತಿ
    • ಜಂಟಿ ಕಾರ್ಯದರ್ಶಿ: ಉಮಾ ಜನಾರ್ದನ್‌
    • ಜಂಟಿ ಕಾರ್ಯದರ್ಶಿ: ಪಾರ್ವತಮ್ಮ ಜಯರಾಮ್‌
    ಸಂಘಟನಾ ಕಾರ್ಯದರ್ಶಿ ಪ್ರಮೀಳಾ ಮೂರ್ತಿ ಅವರಿಂದ ಮಾಹಿತಿ

    ಸದಸ್ಯೆಯರು: ಎಸ್‌.ಆರ್.‌ ಪದ್ಮರೇಖಾ, ಜಗದಾಂಬಾ ರವಿಕುಮಾರ್‌, ಶೋಭಾ ದಿವಾಕರ್‌, ಕೆ.ವಿಜಯಾ, ಎಸ್.ಎನ್.ರೇಖಾ ಶ್ರೀನಿವಾಸ್‌, ಎಸ್‌.ಹಂಸವೇಣಿ, ಅರುಣಾ, ಯು.ಉಮಾದೇವಿ, ರತ್ನಾ ಶ್ರೀನಿವಾಸ್‌, ದೇವಕಿ, ವಸಂತಿ ರಘುನಾಥ್‌, ಪ್ರೇಮಾ ವೆಂಕಟೇಶ್‌, ಜಿ.ಎ. ಲಕ್ಷ್ಮೀದೇವಿ, ಶಾಂತಾ ನೀಲಕಂಠ, ಗೌರಿಗುಣ ಮತ್ತು ಎನ್.ಜಯಶೀಲಾ.

    ಸಂಬಂಧಿತ ಸುದ್ದಿ: ಗಾಣಿಗ ಸಮುದಾಯ ಅತಿ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಲಿ: ಬಿಹಾರ ಸಂಸದ ಪಿಂಟು

    ಸಂಬಂಧಿತ ಸುದ್ದಿ: ಪುಟ್ಟ ಸ್ವಾಮಿಯನ್ನು ಕೂರಿಸಲು ಹೋಗಿ ತಾವೇ ಪೂರ್ಣ ಸ್ವಾಮಿ ಆಗಿದ್ದೇಕೆ?

    ಸಂಬಂಧಿತ ಸುದ್ದಿ: ನಮ್ಮದು ಸಣ್ಣ ಸಮಾಜ, ಕಡಿಮೆ ಜನಸಂಖ್ಯೆ ಎಂಬ ಭಾವನೆ ಬೇಡ; ಗಾಣಿಗ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಲಹೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!