Saturday, September 21, 2024
spot_img
More

    Latest Posts

    ರಾಷ್ಟ್ರಮಟ್ಟದ ಪವರ್‌ಲಿಫ್ಟಿಂಗ್‌ನಲ್ಲಿ ಸೌಜನ್‌ಕುಮಾರ್‌ಗೆ ಚಿನ್ನದ ಪದಕ

    ಬೆಂಗಳೂರು: ಪವರ್‌ಲಿಫ್ಟಿಂಗ್‌ನಲ್ಲಿ ವಿಶ್ವನಾಥ್‌ ಭಾಸ್ಕರ ಗಾಣಿಗ ಅವರು ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದು, ಇದೀಗ ಗಾಣಿಗ ಸಮುದಾಯದ ಮತ್ತೊಬ್ಬ ಪ್ರತಿಭಾವಂತ ಪವರ್‌ಲಿಫ್ಟಿಂಗ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ.

    ಸೌತ್‌ ಇಂಡಿಯಾ ಸೀನಿಯರ್‌ ನ್ಯಾಷನಲ್‌ ಪವರ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಸೌಜನ್‌ಕುಮಾರ್‌ ಅವರು 120 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕವನ್ನು ಗಳಿಸಿದ್ದಾರೆ. ಈ ಪವರ್‌ಲಿಫ್ಟಿಂಗ್‌ ಸ್ಪರ್ಧೆಯು ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ನಡೆದಿತ್ತು.

    ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಇವರು ಈಗಾಗಲೇ ವಿವಿಧ ವಿಭಾಗದಲ್ಲಿ ಹಲವಾರು ಬಹುಮಾನಗಳನ್ನು ಗಳಿಸಿದ್ದಾರೆ. ಇವರು ಉಡುಪಿ ಜಿಲ್ಲೆಯ ಸಾಲಿಗ್ರಾಮದ ರತ್ನ ಮತ್ತು ನಾಗರಾಜ್ ಗಾಣಿಗ ದಂಪತಿಯ ಪುತ್ರ.

    ಸಂಬಂಧಿತ ಸುದ್ದಿ: ನ್ಯಾಷನಲ್‌ ಪವರ್‌ಲಿಫ್ಟಿಂಗ್‌ನಲ್ಲಿ ವೈಯಕ್ತಿಕ ದಾಖಲೆ, ಚಿನ್ನದ ಪದಕದ ಜೊತೆಗೆ ಚಾಂಪಿಯನ್‌ ಆದ ವಿಶ್ವನಾಥ್‌

    ಸಂಬಂಧಿತ ಸುದ್ದಿ:ಮಹಾರಾಷ್ಟ್ರದ ಕ್ರಿಕೆಟ್ ಕ್ಷೇತ್ರದಲ್ಲಿ ‘ಯಶಸ್’ ಸಾಧಿಸುತ್ತಿರುವ ‘ಗಾಣಿಗ ಬ್ರಿಲಿಯಂಟ್’

    ಸಂಬಂಧಿತ ಸುದ್ದಿ:ಕಿಕ್‌ ಬಾಕ್ಸಿಂಗ್‌ನಲ್ಲಿ ಗೆದ್ದ ಈ ಅವಳಿ ಸೋದರಿಯರು ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!