Saturday, September 21, 2024
spot_img
More

    Latest Posts

    ಶತಾಯುಷ್ಯದ ಹೊಸ್ತಿಲಲ್ಲಿ ತಾಯಿ; ನೂರನೇ ಜನ್ಮದಿನದ ಶುಭಾಶಯ‌ ಕೋರಿದ ಪುತ್ರ ಮೋದಿ

    ಬೆಂಗಳೂರು: ದೇಶದ ಪ್ರಧಾನಮಂತ್ರಿ ನರೇಂದ್ರ ದಾಮೋದರ ದಾಸ್ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಇದೀಗ ಶತಾಯುಷ್ಯದ ಹೊಸ್ತಿಲಲ್ಲಿದ್ದಾರೆ. ಅಂದರೆ ಅವರು 99 ವರ್ಷಗಳನ್ನು ಪೂರೈಸಿ ನೂರನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದಾರೆ.

    ತಾಯಿಯ ನೂರನೇ ವರ್ಷದ ಸಂಭ್ರಮವನ್ನು ಸ್ಮರಣೀಯಗೊಳಿಸುವ ಸಲುವಾಗಿ ಇಂದು ಗುಜರಾತ್‌ನ ಗಾಂಧಿನಗರದ ವಡ್‌ನಗರದಲ್ಲಿನ ಮನೆಯಲ್ಲಿ ಅವರನ್ನು ಭೇಟಿಯಾದ ಪುತ್ರ ನರೇಂದ್ರ ಮೋದಿ, ತಾಯಿಯ ಪಾದಪೂಜೆ ಮಾಡಿ ಅಭಿನಂದನೆಗಳನ್ನು ಸಲ್ಲಿಸಿದ್ದಲ್ಲದೆ ಆರೋಗ್ಯ-ಆಯಸ್ಸಿಗಾಗಿ ಪ್ರಾರ್ಥನೆ ಮಾಡಿ ಹಾರೈಸಿದ್ದಾರೆ‌.

    ತಾಯಿಯ ಪಾದಪೂಜೆ ಮಾಡಿದ ಮೋದಿ

    ಇದೇ ವೇಳೆ ತಂದೆಯನ್ನೂ ಸ್ಮರಿಸಿಕೊಂಡ ಮೋದಿ, ತಂದೆ ಇದ್ದಿದ್ದರೆ ಅವರಿಗೆ ಕಳೆದ ವಾರ ನೂರು ವರ್ಷ ಆಗಿರುತ್ತಿತ್ತು. ಒಂದು ವಾರದ ಹಿಂದೆ ಸಮಾಜದ ಕೆಲವು ಕಿರಿಯರು ನಮ್ಮ ಮನೆಗೆ ಬಂದು ತಂದೆಯ ಫೋಟೋ ಇರಿಸಿ ಕೀರ್ತನೆಗಳನ್ನು ಹಾಡಿದ್ದು, ತಾಯಿ ಮಂಜೀರವನ್ನು ನುಡಿಸಿ ತಾವೂ ಕೀರ್ತನೆಯಲ್ಲಿ ಪಾಲ್ಗೊಂಡಿದ್ದ ವಿಡಿಯೋಗಳನ್ನು ಸಹೋದರರ ಮಕ್ಕಳು ಹಂಚಿಕೊಂಡಿದ್ದರು. ತಾಯಿಗೆ ದೈಹಿಕವಾಗಿ ವಯಸ್ಸಾಗಿರಬಹುದು, ಆದರೆ ಮಾನಸಿಕವಾಗಿ ಆಕೆ ಈಗಲೂ ಅದೇ ಚೈತನ್ಯ ಹೊಂದಿದ್ದಾರೆ ಎಂದು ಮೋದಿ ಹೇಳಿಕೊಂಡಿದ್ದಾರೆ.

    ನನ್ನ ಜೀವನದಲ್ಲಿನ ಎಲ್ಲ ಒಳಿತುಗಳು, ಅದರಲ್ಲೂ ನನ್ನ ಒಳ್ಳೆಯ ಗುಣಗಳು ನಿಸ್ಸಂಶಯವಾಗಿಯೂ ನನ್ನ ತಂದೆ-ತಾಯಿಯಿಂದ ಬಂದಿದ್ದು. ನಾನು ದೆಹಲಿಯಲ್ಲಿದ್ದಾಗಲೂ ಅವರೊಂದಿಗಿನ ನೆನಪುಗಳು ಕಾಡುತ್ತಿರುತ್ತವೆ ಎಂದು ಹೇಳಿರುವ ಮೋದಿ, ತಾಯಿಯ ಜನ್ಮದಿನದ ಪ್ರಯುಕ್ತ ʼಮದರ್‌ʼ ಎಂಬ ಸುದೀರ್ಘ ಬರಹವನ್ನು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

    ಮೋದಿಯವರ ತಾಯಿಯ ಜನ್ಮದಿನ ಪ್ರಯುಕ್ತ ಮೋದಿಯ ಹುಟ್ಟೂರು ವಡ್‌ನಗರದ ರಾಯಸನ್‌ ಪ್ರದೇಶದ 80 ಅಡಿ ರಸ್ತೆಗೆ ʼಪೂಜ್ಯ ಹಿರಬಾ ಮಾರ್ಗ್‌ʼ ಎಂದು ನಾಮಕರಣ ಮಾಡಲಾಗಿದೆ. ಅಲ್ಲದೆ ಇಲ್ಲಿ ಇಂದು ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಜಗನ್ನಾಥ ದೇವಸ್ಥಾನದಲ್ಲಿ ಕುಟುಂಬದವರ ಕಡೆಯಿಂದ ಅನ್ನಸಂತರ್ಪಣೆಯನ್ನೂ ಏರ್ಪಡಿಸಲಾಗಿದೆ.

    ಸಂಬಂಧಿತ ಸುದ್ದಿ: ಸಿಎಂ-ಪಿಎಂ ಗಾದಿಗೇರಿದ ಮೋದಿ; ಇಲ್ಲಿದೆ ಯಶೋಗಾಥೆಯ ಹಾದಿ…

    ಸಂಬಂಧಿತ ಸುದ್ದಿ: ಕರಾವಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹೋದರ ಸೋಮಭಾಯಿ; 4 ದಿನಗಳ ಪ್ರವಾಸದ ಬಳಿಕ ಗುಜರಾತ್‌ಗೆ ನಿರ್ಗಮನ

    ಸಂಬಂಧಿತ ಸುದ್ದಿ: ಗಾಣಿಗ ಸಮಾಜದಿಂದ ವಿಶ್ವಕ್ಕೇ ಬೆಳಕು: ಮೋದಿ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!