ಬೆಂಗಳೂರು: ಪ್ರಪ್ರಥಮ ಬೆಂಗಳೂರು ಜಿಲ್ಲಾ ಪವರ್ಲಿಫ್ಟಿಂಗ್ ಹಾಗೂ ಅಂತರಕಾಲೇಜು ಚಾಂಪಿಯನ್ಷಿಪ್ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪವರ್ಲಿಫ್ಟರ್ ವಿಶ್ವನಾಥ್ ಭಾಸ್ಕರ್ ಗಾಣಿಗ ಅವರ ನೇತೃತ್ವದ ಬಾಲರ್ಕ ಫಿಟ್ನೆಸ್ ‘ಟೀಮ್ ಚಾಂಪಿಯನ್ಶಿಪ್’ ತನ್ನದಾಗಿಸಿಕೊಂಡಿದೆ. ಬಾಲರ್ಕದ ಪವರ್ಲಿಫ್ಟರ್ಸ್ 6 ಚಿನ್ನದ ಪದಕ ಹಾಗೂ 2 ಬೆಳ್ಳಿ ಮತ್ತು ಒಂದು ಕಂಚಿನ ಪದಕ ಪಡೆಯುವುದರ ಮೂಲಕ ಈ ಸಾಧನೆ ಮಾಡಿದ್ದಾರೆ.
ಬೆಂಗಳೂರು ಜಿಲ್ಲಾಮಟ್ಟದ ಪವರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬಾಲರ್ಕ ಫಿಟ್ನೆಸ್ನ ದತ್ತಾತ್ರೇಯ ಸ್ಟ್ರಾಂಗ್ಮ್ಯಾನ್ ಆಫ್ ಬೆಂಗಳೂರು ಹಾಗೂ ಬಾಲರ್ಕ ಫಿಟ್ನೆಸ್ನ ಸತ್ಯವತಿ ಸ್ಟ್ರಾಂಗ್ ವುಮನ್ ಆಫ್ ಬೆಂಗಳೂರು ಪ್ರಶಸ್ತಿಯನ್ನು ಗಳಿಸಿದ್ದಾರೆ.
ಹಾಗೇ ಬೆಂಗಳೂರು ಜಿಲ್ಲಾ ಅಂತರಕಾಲೇಜು ಪವರ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಸಿಮ್ರಾನ್ ಮಲ್ಲಿಕ್ ಚಿನ್ನದ ಪದಕ ಗೆಲ್ಲುವುದರ ಜತೆಗೆ ಈ ವಿಭಾಗದಲ್ಲಿ ಸ್ಟ್ರಾಂಗ್ ವುಮನ್ ಆಫ್ ಬೆಂಗಳೂರು ಆಗಿ ಹೊರಹೊಮ್ಮಿದ್ದಾರೆ.ಈ ಚಾಂಪಿಯನ್ಷಿಪ್ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯಲ್ಲಿ ನಡೆದಿತ್ತು.
ಸಂಬಂಧಿತ ಸುದ್ದಿ: ಭಳಿರೆ ‘ಬಾಲರ್ಕ’.. ಇದು ಬಲಾಢ್ಯ ಭಾರತೀಯನ ಗರಡಿ!
ಸಂಬಂಧಿತ ಸುದ್ದಿ: ಭಾರತದ ಬಲಾಢ್ಯ ಪುರುಷನ ಬಾಲರ್ಕಕ್ಕೀಗ ಮತ್ತೊಂದು ತಾಣ, ಮತ್ತಷ್ಟು ತ್ರಾಣ…
ಸಂಬಂಧಿತ ಸುದ್ದಿ: ಕಿಕ್ ಬಾಕ್ಸಿಂಗ್ನಲ್ಲಿ ಗೆದ್ದ ಈ ಅವಳಿ ಸೋದರಿಯರು ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ