Friday, May 17, 2024
spot_img
More

    Latest Posts

    ಎಡಪದವು ಗಾಣಿಗ ಸೇವಾ ಸಂಘದ ಮಾರ್ಗದರ್ಶಕ ರುಕ್ಕಯ ಸಫಲಿಗ ಇನ್ನಿಲ್ಲ..

    ಬೆಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಎಡಪದವು ಗುತ್ತುಮನೆ ನಿವಾಸಿ, ಮಿಜಾರು ಎಡಪದವು ಗಾಣಿಗರ ಯಾನೆ ಸಫಲಿಗ ಸೇವಾ ಸಂಘದ ಹಿರಿಯ ಮಾರ್ಗದರ್ಶಕರಾಗಿದ್ದ ರುಕ್ಕಯ ಸಫಲಿಗ (90) ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು. ಅವರು ಪತ್ನಿ, ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ‌

    ಶ್ರೀರಾಮ ಭಜನಾ ಮಂದಿರದ ಹಿರಿಯ ಸದಸ್ಯ, ಮೇಸ್ತ್ರಿ, ಕ್ರಿಕೆಟ್ ಪ್ರೇಮಿ ಕೂಡ ಆಗಿದ್ದ ರುಕ್ಕಯ ಅವರು ಭಜನೆ ಮತ್ತು ಹುಲಿವೇಷ ಬಣ್ಣಗಾರಿಕೆಯಲ್ಲಿ ವಿಶೇಷ ಪರಿಣತಿ ಹೊಂದಿದ್ದರು.

    ಶ್ರೀರಾಮ ಭಜನಾ ಮಂದಿರ ಮಾಜಿ ಅಧ್ಯಕ್ಷ ಮುರಳೀಧರ ಶೆಟ್ಟಿ, ಗ್ರಾಮ ಪಂಚಾಯಿತಿ‌ ಮಾಜಿ ಉಪಾಧ್ಯಕ್ಷ ಪ್ರಸಾದ್ ಎಡಪದವು, ಎಡಪದವು ಗಾಣಿಗರ ಸಂಘದ ಅಧ್ಯಕ್ಷ ಭಾಸ್ಕರ‌ ಎಡಪದವು, ಮಳಲಿ ಗಾಣಿಗರ ಸಂಘದ ಮಾಜಿ ಅಧ್ಯಕ್ಷ ವಿಠಲ ಸಪಲ್ಯ ಮತ್ತಿತರರು ಇಂದು ಅವರಿಗೆ ಅಂತಿಮ ನಮನ ಸಲ್ಲಿಸಿದರು.

    ಮಿಜಾರು ಎಡಪದವು ಗಾಣಿಗರ ಯಾನೆ ಸಫಲಿಗ ಸೇವಾ ಸಂಘದ ಹಿರಿಯರು ಮಾರ್ಗದರ್ಶಕರಾಗಿದ್ದ ರುಕ್ಕಯ ಸಫಲಿಗ ಅವರ ನಿಧನಕ್ಕೆ ಸಂಘದ ಪದಾಧಿಕಾರಿಗಳು, ಸರ್ವಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ಸಂಬಂಧಿತ ಸುದ್ದಿ: ಎಸ್‌ಜಿಇಸಿಟಿ-ಆಸ್ರಾದಿಂದ ನಡೆಯಿತು ಗ್ರಾಹಕ ಜಾಗೃತಿ ಕಾರ್ಯಕ್ರಮ

    ಸಂಬಂಧಿತ ಸುದ್ದಿ: ಗಾಣಿಗ ಯುವ ಬಳಗದಿಂದ ಪ್ರತಿಭಾ ಪುರಸ್ಕಾರ, ಸ್ನೇಹಿತರ ದಿನಾಚರಣೆ

    ಸಂಬಂಧಿತ ಸುದ್ದಿ: ಗಾಣಿಗ ನಿಗಮ-ಮಂಡಳಿಗಾಗಿ ಮೋದಿಯ ಸೆಳೆಯುವತ್ತ ಗಾಣಿಗ ಮುಖಂಡರ ಚಿತ್ತ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!