Saturday, September 21, 2024
spot_img
More

    Latest Posts

    ಎಸ್‌ಜಿಇಸಿಟಿ ಅಕಾಡೆಮಿಯಲ್ಲೀಗ ಈಗ ಮತ್ತಷ್ಟು ವಿಶೇಷ, ಹೊರ ರಾಜ್ಯದಿಂದಲೂ ಬೆಂಬಲ

    ಬೆಂಗಳೂರು: ಗಾಣಿಗ ಸಮಾಜದ ಯುವ ಜನತೆಗೆ ಕಂಪ್ಯೂಟರ್‌ ಸಾಕ್ಷರತೆ ಹಾಗೂ ಪರಿಣತಿ ಒದಗಿಸುವ ಸಲುವಾಗಿ ಶ್ರೀಗಾಣಿಗ ಎಜುಕೇಷನಲ್‌ ಆ್ಯಂಡ್ ಚಾರಿಟೇಬಲ್‌ ಟ್ರಸ್ಟ್‌ ರಿ. ಆರಂಭಿಸಿರುವ ಎಸ್‌ಜಿಇಸಿಟಿ ಅಕಾಡೆಮಿಯಲ್ಲಿ ಈಗ ಮತ್ತಷ್ಟು ವೈಶಿಷ್ಟ್ಯಗಳನ್ನು ಅಳವಡಿಸಲಾಗಿದ್ದು, ಆ ನಿಟ್ಟಿನಲ್ಲಿ ಹೊರರಾಜ್ಯದಿಂದಲೂ ಬೆಂಬಲ ಲಭಿಸಿದೆ.

    ಬೆಂಗಳೂರಿನ ಮಹಾಲಕ್ಷ್ಮೀ ಬಡಾವಣೆಯಲ್ಲಿರುವ ಈ ಅಕಾಡೆಮಿಯಲ್ಲಿ ಈಗಾಗಲೇ ಕಂಪ್ಯೂಟರ್‌ ಕೋರ್ಸ್‌ಗಳನ್ನು ಆರಂಭಿಸಲಾಗಿದ್ದು, ಇದರೊಂದಿಗೆ ಈಗ ವೃತ್ತಿ ಸಂಬಂಧಿತ ಕೋರ್ಸ್‌ಗಳನ್ನೂ ಸೇರಿಸಲಾಗಿದೆ. ಹೀಗಾಗಿ ಎಸ್‌ಎಸ್‌ಸಿ, ಬ್ಯಾಂಕ್‌,ರೈಲ್ವೆ, ಟೆಲಿಕಾಂ ಕ್ಷೇತ್ರಕ್ಕೆ ಅಗತ್ಯವಿರುವ ಕಂಪ್ಯೂಟರ್‌ ಕೋರ್ಸ್‌ಗಳನ್ನೂ ಇಲ್ಲಿ ಅಳವಡಿಸಲಾಗಿದ್ದು, ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳಾಗಿರುವವರು ಇದರ ಪ್ರಯೋಜನ ಪಡೆಯಬಹುದು.

    ಮಾರುತಿ ಸ್ಕೂಲ್‌ ಫಾರ್‌ ಸ್ಪೆಷಲ್‌ ಎಜುಕೇಷನ್‌

    ಚೆನ್ನೈನಲ್ಲಿರುವ ಮಾರುತಿ ಸ್ಕೂಲ್‌ ಫಾರ್‌ ಸ್ಪೆಷಲ್‌ ಎಜುಕೇಷನ್‌ನಲ್ಲಿನ ಒಂದು ದೃಶ್ಯ

    ಕಂಪ್ಯೂಟರ್‌ ಶಿಕ್ಷಣದ ಜೊತೆಗೆ ಎಸ್‌ಜಿಇಸಿಟಿ ಅಕಾಡೆಮಿಯಲ್ಲಿ ಇದೀಗ ಮಾರುತಿ ಸ್ಕೂಲ್‌ ಫಾರ್‌ ಸ್ಪೆಷಲ್‌ ಎಜುಕೇಷನ್‌ ಶಾಖೆ ಕೂಡ ಆರಂಭವಾಗಿದೆ. ಈ ಮೂಲಕ ಇಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಅನುಕೂಲವಾಗುವ ತರಬೇತಿ ಹಾಗೂ ಶಿಕ್ಷಣ ಕೂಡ ನೀಡಲಾಗುತ್ತಿದೆ. ಶ್ರೀಗಾಣಿಗ ಎಜುಕೇಷನಲ್‌ ಆ್ಯಂಡ್ ಚಾರಿಟೇಬಲ್‌ ಟ್ರಸ್ಟ್‌ ಸಮನ್ವಯ ಸಹಭಾಗಿತ್ವದಲ್ಲಿ ಮಾರುತಿ ಸ್ಕೂಲ್‌ ಫಾರ್‌ ಸ್ಪೆಷಲ್‌ ಎಜುಕೇಷನ್‌ ಶಾಖೆ ಇಲ್ಲಿ ಕಾರ್ಯನಿರ್ವಹಿಸುತ್ತಿದೆ.

    ಖ್ಯಾತ ಮಕ್ಕಳ ಮನೋಶಾಸ್ತ್ರಜ್ಞ ಡಾ.ಎಸ್.ರಾಮಲಿಂಗಂ ಅವರು ಮಾರುತಿ ಸ್ಕೂಲ್‌ ಫಾರ್‌ ಸ್ಪೆಷಲ್‌ ಎಜುಕೇಷನ್‌ ಸಂಸ್ಥಾಪಕರು ಹಾಗೂ ಗೌರವ ನಿರ್ದೇಶಕರಾಗಿದ್ದು, ಇದರ ಕೇಂದ್ರ ಕಚೇರಿ ಚೆನ್ನೈನಲ್ಲಿದೆ. ಮಕ್ಕಳ ಕಲ್ಯಾಣಕ್ಕೆ ಸಂಬಂಧಿಸಿದಂತೆ 2009ರಲ್ಲಿ ರಾಷ್ಟ್ರಪ್ರಶಸ್ತಿಗೆ ಪಾತ್ರರಾಗಿರುವ ರಾಮಲಿಂಗಂ ಗಾಣಿಗ (ಗಾಂಡ್ಲ) ಸಮುದಾಯದವರೇ ಆಗಿದ್ದು, ತಮಿಳುನಾಡು ಸರ್ಕಾರದೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ.

    ಚೆನ್ನೈನಲ್ಲಿರುವ ಮಾರುತಿ ಸ್ಕೂಲ್‌ ಫಾರ್‌ ಸ್ಪೆಷಲ್‌ ಎಜುಕೇಷನ್‌ನಲ್ಲಿನ ಒಂದು ದೃಶ್ಯ

    ಮೂಲತಃ ತಮಿಳುನಾಡಿನ ಕೃಷ್ಣಗಿರಿಯವರಾದ ರಾಮಲಿಂಗಂ ಅವರನ್ನು ತಮಿಳುನಾಡು ಸರ್ಕಾರ ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕೆ ಸಂಬಂಧಿತ ವಿಷಯಗಳಿಗೆ ಸಂಬಂಧಿಸಿದಂತೆ ಆಗಾಗ ವಿಚಾರವಿನಿಮಯ ಮಾಡಿಕೊಳ್ಳುತ್ತಿರುತ್ತದೆ. ಇದೀಗ ಇವರು ಕರ್ನಾಟಕದಲ್ಲೂ ಶಾಖೆ ತೆರೆದಿದ್ದು, ಅದಕ್ಕೆ ಎಸ್‌ಜಿಇಸಿಟಿ ಕೈಜೋಡಿಸಿದೆ. ಇದರಿಂದ ಗಾಣಿಗ ಸಮುದಾಯಕ್ಕೆ ಅನುಕೂಲವಾಗಲಿದ್ದು, ಸಮುದಾಯದ ಅಂತಾರಾಜ್ಯ ಸಂಬಂಧವೂ ವೃದ್ಧಿಸಲಿದೆ ಎಂದು ಶ್ರೀಗಾಣಿಗ ಎಜುಕೇಷನಲ್‌ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ ಸಂಸ್ಥಾಪಕ ಅಧ್ಯಕ್ಷ ಆರ್.ನಾಗರಾಜ್‌ ಶೆಟ್ಟಿ ತಿಳಿಸಿದ್ದಾರೆ.

    ಮಾಹಿತಿಗಾಗಿ ಸಂಪರ್ಕಿಸಿ

    ಸಂಬಂಧಿತ ಸುದ್ದಿ: ಎಸ್‌ಜಿಇಸಿಟಿ ಅಕಾಡೆಮಿಗೆ ಪ್ರವೇಶಾತಿ ಆರಂಭ; ಹೀಗಿದೆ ಕೊಡುಗೆ…

    ಸಂಬಂಧಿತ ಸುದ್ದಿ: ಶ್ರೀಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್‌ ಟ್ರಸ್ಟ್‌ ಸೇವೆ 12 ಜಿಲ್ಲೆಗಳಿಗೆ ವಿಸ್ತರಣೆ

    ಸಂಬಂಧಿತ ಸುದ್ದಿ: ಬಾಲರ್ಕ ಫಿಟ್‌ನೆಸ್‌ ಟೀಮ್‌ ಚಾಂಪಿಯನ್‌; ಬಾಲರ್ಕ ಪವರ್‌ಲಿಫ್ಟರ್ಸ್‌ ಸ್ಟ್ರಾಂಗ್‌..

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!