Saturday, September 21, 2024
spot_img
More

    Latest Posts

    ಥಾಣೆ ನಿತ್ಯಾನಂದ ಸೇವಾ ಸಂಸ್ಥೆ ಅಧ್ಯಕ್ಷರಾಗಿ ಗೋಪಾಲಕೃಷ್ಣ ಗಾಣಿಗ ಪುನರಾಯ್ಕೆ

    ಬೆಂಗಳೂರು: ಥಾಣೆಯಲ್ಲಿನ ಮೀರಾ-ಭಾಯಂದರ್‌ನ ಶ್ರೀನಿತ್ಯಾನಂದ ಸೇವಾ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಗಂಗೊಳ್ಳಿ ಗೋಪಾಲಕೃಷ್ಣ ಗೋವಿಂದ ಗಾಣಿಗ ಪುನರಾಯ್ಕೆ ಆಗಿದ್ದಾರೆ. ನೂತನ ಆಡಳಿತ ಮಂಡಳಿಯ ಅವಧಿ ಮುಂದಿನ ಮೂರು ವರ್ಷಗಳ ವರೆಗೆ ಇರಲಿದೆ. ಮೀರಾರೋಡ್‌ ಪೂರ್ವದ ಬಾಲಾಜಿ ಮಂದಿರದ ಕಿರುಸಭಾಗೃಹದಲ್ಲಿ ಸೆ. 25ರಂದು ನಡೆದ ಆರನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಈ ಆಯ್ಕೆ ನಡೆಯಿತು.

    ಗೋಪಾಲಕೃಷ್ಣ ಜಿ. ಗಾಣಿಗ ಅವರ ಅಧ್ಯಕ್ಷತೆಯ ಈ ವಾರ್ಷಿಕೋತ್ಸವ ವಸಂತಿ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಚಾಲನೆ ಪಡೆಯಿತು. ಪದಾಧಿಕಾರಿಗಳು ಸದ್ಗುರು ನಿತ್ಯಾನಂದ ಸ್ವಾಮಿ ಅವರ ಭಾವಚಿತ್ರಕ್ಕೆ ದೀಪ ಹಚ್ಚಿ ಮಹಾಸಭೆಯನ್ನು ಉದ್ಘಾಟಿಸಿದರು.

    ಗಂಗೊಳ್ಳಿ ಗೋಪಾಲಕೃಷ್ಣ ಗೋವಿಂದ ಗಾಣಿಗ (4G)

    ಸಂಸ್ಥೆಯ ಗೌರವ ಕಾರ್ಯದರ್ಶಿ ಸೀತಾರಾಮ್ ಶೆಟ್ಟಿ ಅಮಾವಾಸ್ಯೆಬೈಲು ಉಪಸ್ಥಿತ ಸರ್ವ ಸದಸ್ಯರನ್ನು ಸ್ವಾಗತಿಸಿ ವಾರ್ಷಿಕ ವರದಿಯನ್ನು ಓದಿದರು. ಕೋಶಾಧಿಕಾರಿ ಶೈಲೇಶ್ ಶೆಟ್ಟಿ ಸೊಡರವರು ಆಯವ್ಯಯ ಪಟ್ಟಿ ಮಂಡಿಸಿದ್ದು, ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟಿತು. ಪ್ರಸ್ತುತ ವರ್ಷದಲ್ಲಿ ಕೆಲವು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ನಿರ್ಧರಿಸಲಾಯಿತು. ಸಂಸ್ಥೆಯ ಮುಖ್ಯ ಸಲಹೆಗಾರರಾದ ಉಡುಪಿ ಗುಣಪಾಲ್ ಮಾತನಾಡಿ ಕೆಲವು ಸಲಹೆ-ಸೂಚನೆಗಳನ್ನು ನೀಡಿದರು. ಸದಸ್ಯರು ತಂತಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು.

    ನೂತನ ಪದಾಧಿಕಾರಿಗಳ ಪಟ್ಟಿ

    • ಗೌರವಾಧ್ಯಕ್ಷ: ಮಹಾಬಲ ಸಿ. ಸಮಾನಿ
    • ಅಧ್ಯಕ್ಷ: ಗಂಗೊಳ್ಳಿ ಗೋಪಾಲಕೃಷ್ಣ ಗೋವಿಂದ ಗಾಣಿಗ
    • ಉಪಾಧ್ಯಕ್ಷರು: ವಸಂತಿ ಶೆಟ್ಟಿ, ಮತ್ತು ರವೀಂದ್ರ ಶೆಟ್ಟಿ ದೇರಳಕಟ್ಟೆ
    • ಗೌರವ ಕಾರ್ಯದರ್ಶಿ: ಸೀತಾರಾಮ್ ಶೆಟ್ಟಿ ಅಮಾವಾಸ್ಯೆಬೈಲು
    • ಜೊತೆ ಕಾರ್ಯದರ್ಶಿ: ಉಮೇಶ್ ಶೆಟ್ಟಿ
    • ಕೋಶಾಧಿಕಾರಿ: ಶೈಲೇಶ್ ಶೆಟ್ಟಿ ಸೂಡ
    • ಜೊತೆ ಕೋಶಾಧಿಕಾರಿ: ಮಲ್ಲಿಕಾ ಶೆಟ್ಟಿ
    • ಮುಖ್ಯ ಸಲಹೆಗಾರ: ಗುಣಪಾಲ್ ಉಡುಪಿ
    • ಸಂಚಾಲಕ: ಆನಂದ್ ಶೆಟ್ಟಿ ಕುಕ್ಕುಂದೂರು
    • ಕಾರ್ಯಾಧ್ಯಕ್ಷ-ಯುವ ವಿಭಾಗ: ರಾಜೇಶ್
    • ಅರ್ಚಕರು: ಲಕ್ಷ್ಮಣ್ ಶೆಟ್ಟಿ, ನಾರಾಯಣ ಶೆಟ್ಟಿ
    • ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ: ಜಯಶ್ರೀ ಬಿ. ಶೆಟ್ಟಿ
    • ಮಹಿಳಾ ವಿಭಾಗ ಕಾರ್ಯದರ್ಶಿ: ಗೀತಾ ಸಿ. ಶೆಟ್ಟಿ
    • ಮಹಿಳಾ ವಿಭಾಗ ಜೊತೆ ಕಾರ್ಯದರ್ಶಿ: ಪ್ರಿಯಾ ಎಸ್‌. ಆರ್‌. ಶೆಟ್ಟಿ
    • ಭಜನಾ ಸಮಿತಿ ಕಾರ್ಯಾಧ್ಯಕ್ಷೆ: ಲತಾ ಪುತ್ರನ್
    • ಭಜನಾ ಸಮಿತಿಯ ಕಾರ್ಯದರ್ಶಿ: ಸುಲೋಚನಾ ಶೆಟ್ಟಿ
    • ಸದಸ್ಯತ್ವ ನೋಂದಣಿ: ಉಮೇಶ್ ಕುಮಾರ್
    • ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷೆ: ಶೈಲಜಾ ಶೆಟ್ಟಿ
    • ಕ್ರೀಡಾ ಸಮಿತಿ ಕಾರ್ಯದರ್ಶಿ: ಕಸ್ತೂರಿ ಶೆಟ್ಟಿ

    ಸಂಬಂಧಿತ ಸುದ್ದಿ: ಥಾಣೆ ನಿತ್ಯಾನಂದ ಸೇವಾ ಸಂಸ್ಥೆಯಿಂದ ಗಣೇಶಪುರಿ ಯಾತ್ರೆ

    ಸಂಬಂಧಿತ ಸುದ್ದಿ: ಮಹಾರಾಷ್ಟ್ರದ ಕ್ರಿಕೆಟ್ ಕ್ಷೇತ್ರದಲ್ಲಿ ‘ಯಶಸ್’ ಸಾಧಿಸುತ್ತಿರುವ ‘ಗಾಣಿಗ ಬ್ರಿಲಿಯಂಟ್’

    ಸಂಬಂಧಿತ ಸುದ್ದಿ: ಕೆಪಿಸಿಸಿ ಮುಖ್ಯ ವಕ್ತಾರ ಸ್ಥಾನಕ್ಕೆ ವಿ.ಆರ್‌. ಸುದರ್ಶನ್‌ ರಾಜೀನಾಮೆ; ಕಾರಣ ಮಹತ್ವದ್ದು..

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!