Friday, May 17, 2024
spot_img
More

    Latest Posts

    ಎಸ್‌ಜಿಇಸಿಟಿಯಿಂದ ಉದ್ಯೋಗಾವಕಾಶ ಪ್ರಕ್ರಿಯೆ ಆರಂಭ; ಉದ್ಯೋಗದಾತರಿಗೂ ಅನುಕೂಲ

    ಬೆಂಗಳೂರು: ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಶ್ರೀಗಾಣಿಗ ಎಜುಕೇಷನಲ್‌ ಆ್ಯಂಡ್ ಚಾರಿಟೇಬಲ್‌ ಟ್ರಸ್ಟ್‌ ಇದೀಗ ಉದ್ಯೋಗಾವಕಾಶ ಪ್ರಕ್ರಿಯೆಯನ್ನೂ ಆರಂಭಿಸಿದೆ. ಇದರಿಂದ ಉದ್ಯೋಗಾಕಾಂಕ್ಷಿಗಳಿಗಷ್ಟೇ ಅಲ್ಲದೆ ಉದ್ಯೋಗದಾತರಿಗೂ ಅನುಕೂಲವಾಗಲಿದೆ ಎಂದು ಟ್ರಸ್ಟ್‌ನ ಮ್ಯಾನೇಜಿಂಗ್‌ ಟ್ರಸ್ಟೀ ಆರ್.ನಾಗರಾಜ ಶೆಟ್ಟಿ ತಿಳಿಸಿದ್ದಾರೆ.

    ಕಂಪ್ಯೂಟರ್‌ ಆಪರೇಟರ್ಸ್‌, ಡೇಟಾ ಎಂಟ್ರಿ ಆಪರೇಟರ್ಸ್‌, ಅಡ್ಮಿನ್‌, ಟೆಲಿಕಾಲರ್ಸ್‌, ಕ್ಲರ್ಕ್‌, ಟೀಚರ್‌, ಅಕೌಂಟೆಂಟ್ಸ್‌, ಐಟಿಐ ಡಿಪ್ಲೊಮಾ ಪದವೀಧರರು ಮತ್ತು ಲ್ಯಾಬ್‌ ಟೆಕ್ನಿಷಿಯನ್ಸ್‌ ಸೇರಿದಂತೆ ವಿವಿಧ ಉದ್ಯೋಗಾಕಾಂಕ್ಷಿಗಳ ವಿವರ ಎಸ್‌ಜಿಇಸಿಟಿ ಬಳಿ ಇದ್ದು ಉದ್ಯೋಗದಾತರು ತಮಗೆ ಬೇಕಾಗಿರುವ ಉದ್ಯೋಗಿಗಳನ್ನು ಇಲ್ಲಿಂದ ಪಡೆಯಬಹುದು ಎಂದು ಅವರು ಹೇಳಿದ್ದಾರೆ.

    ಆಸಕ್ತ ಉದ್ಯೋಗದಾತರು ತಮ್ಮ ಅಗತ್ಯ ಬೇಡಿಕೆಗಳನ್ನು [email protected] ಎಂಬಲ್ಲಿಗೆ ಮೇಲ್‌ ಮಾಡಿದರೆ ಉದ್ಯೋಗಾಕಾಂಕ್ಷಿಗಳ ಮಾಹಿತಿ ಲಭಿಸುತ್ತದೆ. ಇದಕ್ಕೆ ಉದ್ಯೋಗದಾತರು ದೇಣಿಗೆ ರೂಪದಲ್ಲಿ ಸೇವಾಶುಲ್ಕವನ್ನು ನೀಡಬಹುದು, ಅಂಥ ಪಾವತಿಗೆ ತೆರಿಗೆ ವಿನಾಯಿತಿ ಇರುತ್ತದೆ ಎಂದು ನಾಗರಾಜ ಶೆಟ್ಟಿ ತಿಳಿಸಿದ್ದಾರೆ.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಅಖಿಲ ಕರ್ನಾಟಕ ಗಾಣಿಗರ ಸಂಘದ ಅಧ್ಯಕ್ಷರಾಗಿ ರಾಜಶೇಖರ್‌ ಆಯ್ಕೆ; ಪದಾಧಿಕಾರಿಗಳ ಪಟ್ಟಿ ಇಲ್ಲಿದೆ..

    ಸಂಬಂಧಿತ ಸುದ್ದಿ: ಜನವರಿಯಲ್ಲಿ ನಡೆಯಲಿದೆ ಬೃಹತ್‌ ಗಾಣಿಗ ಸಮಾವೇಶ; ಬೇಡಿಕೆಗಳ ಕುರಿತು ನಡೆಯಿತು ಪೂರ್ವಭಾವಿ ಸಭೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!